ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, 18 ನೇ ವರ್ಷದ ಜಿಲ್ಲಾ ಶೈಕ್ಷಣಿಕ ಸಹಮಿಲನ – 2025 ಪರಮಪೂಜ್ಯ
ಆನೆಗುಂದಿ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು ಇಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾಸಂಸ್ಥಾನ್ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, 18 ನೇ ವರ್ಷದ ಜಿಲ್ಲಾ ಶೈಕ್ಷಣಿಕ ಸಹಮಿಲನ – 2025 ಪರಮಪೂಜ್ಯ ಜಗದ್ಗುರುಗಳಾದ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಗಳ ದಿವ್ಯ ಹಸ್ತದಿಂದ ದೀಪ ಪ್ರಜ್ವಲಿಸಿ ಅರ್ಚನೆಯೊಂದಿಗೆ ಸರಸ್ವತಿ ವಂದನದ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಯಿತು.
ಶ್ರೀ. ಪಾಂಡುರಂಗ ಪೈ ಸಿದ್ದಾಪುರ, ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಅತಿಥಿಗಳಾಗಿ ಶ್ರೀ ಶ್ರೀಪತಿ ಮೈಸೂರು ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಬೆಂಗಳೂರು, ಶ್ರೀ ಬಿ. ಸೂರ್ಯಕುಮಾರ್ ಹಳೆಯಂಗಡಿ ಅಧ್ಯಕ್ಷರು ಆನೆಗುಂದಿ ಸರಸ್ವತಿ ಎಜುಕೇಶನ್ ಟ್ರಸ್ಟ್. ಶ್ರೀ ಎಂ. ಬಿ. ಲೋಕೇಶ್ ಆಚಾರ್ಯ ಪ್ರಧಾನ ಕಾರ್ಯದರ್ಶಿ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠ ಕುತ್ಯಾರು, ಶ್ರೀ ಮಹೇಶ್ ಹೈಕಾಡಿ ಚಾರ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, ಶ್ರೀಮತಿ ಅನಿತಾ ಮುಖ್ಯೋಪಾಧ್ಯಾಯನಿ ಸೂರ್ಯಚೈತನ್ಯಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು, ಉಪಸ್ಥಿತರಿದ್ದರು
ಈ ಕಾರ್ಯಕ್ರಮದಲ್ಲಿ ಶ್ರೀ ಮಹೇಶ್ ಹೈಕಾಡಿ ಅವರು ರಚಿಸಿದ ಕವನ ಸಂಕಲನ “ವಿಭಾಕ” (ಒಂದು ಪರಿಚಯಾತ್ಮಕ ಕವನ) ಹೊತ್ತಗೆಯ ಅನಾವರಣವನ್ನು ಸ್ವಾಮೀಜಿಗಳ ದಿವ್ಯ ಹಸ್ತದಿಂದ ಮಾಡಲಾಯಿತು.
ಈ ವೇದಿಕೆಯಲ್ಲಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾಭಾರತಿ ಸ್ಪರ್ಧೆಗಳ ವಿಜೇತರಿಗೆ ಸನ್ಮಾನವನ್ನು ಮಾಡಲಾಯಿತು. 15 ಸಂಸ್ಥೆಗಳಿಂದ ಸುಮಾರು 300 ಮಂದಿ ಬೋಧಕ ಬೋಧಕೇತರ ಹಾಗೂ ಆಡಳಿತ ಮಂಡಳಿಯವರು ಸೇರಿದ್ದರು. ಶ್ರೀ ಮಹೇಶ್ ಹೈಕಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಶ್ರೀ ಪಾಂಡುರಂಗಪೈ ಅಧ್ಯಕ್ಷೀಯ ಮಾತುಗಳನ್ನಾಡಿದರು. ಸಂಸ್ಥೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಅನಿತಾ ಸ್ವಾಗತಿಸಿ ಸಹಶಿಕ್ಷಕಿಯಾದ ಶ್ರೀಮತಿ ಅಮಿತಾ ವಂದಿಸಿದರು. ಶ್ರೀಮತಿ ಸುಮಂಗಳಾ ಕಾರ್ಯಕ್ರಮವನ್ನು ನಿರೂಪಿಸಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ 18ನೇ ವರ್ಷದ ಜಿಲ್ಲಾ ಶೈಕ್ಷಣಿಕ ಸಹಮಿಲನ 2025 ಇದರ 2ನೇ ಅವಧಿಯಾದ ವರದಿ ವಾಚನದಲ್ಲಿ ಸುಮಾರು 12 ಶಾಲೆಗಳು ತಮ್ಮ ಶಾಲೆಯ ವಾರ್ಷಿಕ ವರದಿಗಳನ್ನು ಮಂಡಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಪಾಂಡುರಂಗಪೈ ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, ಶ್ರೀ ಮಹೇಶ್ ಹೈಕಾಡಿ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕಉಡುಪಿ ಜಿಲ್ಲೆ, ಶ್ರೀ ಗುರುರಾಜ್ ಕೆ. ಜೆ. ಕಾರ್ಯದರ್ಶಿ ಆನೆಗುಂದಿ ಎಜುಕೇಶನ್ ಟ್ರಸ್ಟ್, ಶ್ರೀ ವಿಜಯಕುಮಾರ್ ಶೆಟ್ಟಿ ಹೆಬ್ರಿ ಜಿಲ್ಲಾ ಶಾರೀರಿಕಪ್ರಮುಖ್ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, ಶ್ರೀಮತಿ ಸುಪ್ರೀತಾಕೋಡಿ ಜಿಲ್ಲಾ ಕ್ರಿಯಾಶೋಧ ಪ್ರಮುಖ್ವಿದ್ಯಾಭಾರತಿah ಕರ್ನಾಟಕ ಉಡುಪಿ ಜಿಲ್ಲೆ ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕಿಯಾದ ಶ್ರೀಮತಿ ಅಮಿತಾ ವಂದಿಸಿದರು. ಶ್ರೀಮತಿ ಸುಮಂಗಳಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
3ನೇ ಅವಧಿಯಾದಗುಂಪುಶ ಬೈಠಕ್ಇದರಲ್ಲಿಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರ ಬೈಠಕ್ನಲ್ಲಿ ಶ್ರೀ ಸಂಜೀವಗುಂಡ್ಮಿಉಪನ್ಯಾಸಕರು ವಿವೇಕ ಪದವಿ ಪೂರ್ವ ಕಾಲೇಜು ಕೋಟ ಇವರು ಸಂಪನ್ಮೂಲ ವ್ಯಕ್ತಿಯಾಗಿ “ಶೈಕ್ಷಣಿಕ ಸವಾಲುಗಳ” ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.ಶ್ರೀ ಶ್ರೀ ಸುಂದರ ಆಚಾರ್ಯ ಮರೋಳಿ ಸದಸ್ಯರು ಆನೆಗುಂದಿ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್, ಶ್ರೀ ಸಂತೋಷ್ ಹೆಗ್ಡೆ ಎಳ್ಳಾರೆಜಿಲ್ಲಾ ಪೂರ್ವ ಛಾತ್ರ ಪೋರ್ಟಲ್ ಪ್ರಮುಖ್ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇವರು ಉಪಸ್ಥಿತರಿದ್ದರು. ಸುಮಾರು 15 ಶಾಲೆಗಳ 32 ಮಂದಿ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು.ಸಂಸ್ಥೆಯಸಹಶಿಕ್ಷಕಿಯಾದಶ್ರೀಮತಿ ವಾಣಿ, ಸ್ವಾಗತಿಸಿ ವಂದಿಸಿದರು.
ಬೋಧಕೇತರವರ್ಗದ ಬೈಠಕ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿರಾಜ್ಯಮಟ್ಟದ ಮಹಿಳಾ ಸಾಧಕಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಶೋಭಾ ಕಲ್ಕೂರ್ ಉದ್ಯಾವರ ಇವರು “ಬದುಕು ಜೀವನೋತ್ಸಾಹದ ಬಲೆ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಶ್ರೀಮತಿ ಸಿಂಧು ಐತಾಳ್ ಜಿಲ್ಲಾ ಮಾತೃಭಾರತಿ ಪ್ರಮುಖ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇವರು ಉಪಸ್ಥಿತರಿದ್ದರು. ಸುಮಾರು 15 ಶಾಲೆಗಳ 30 ಮಂದಿ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಸಂಸ್ಥೆಯ ಸಹಶಿಕ್ಷಕಿಯಾದ ಶ್ರೀಮತಿ ಪ್ರತಿಮಾ ಸ್ವಾಗತಿಸಿ ವಂದಿಸಿದರು.
ಶಿಕ್ಷಕರ ವರ್ಗದ ಬೈಠಕ್ ನಲ್ಲಿಸಂಪನ್ಮೂಲ ವ್ಯಕ್ತಿಯಾಗಿ ಶ್ರೀ. ವೀಣೇಶ್ ಅಮೀನ್ ಸಾಂತೂರುಕನ್ನಡ ಉಪನ್ಯಾಸಕರು ಪಿ. ಆರ್. ಎನ್. ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿ ಇವರು “ವೃತ್ತಿ ನೈತಿಕತೆ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಶ್ರೀ ಗುರುರಾಜ್ ಕೆ. ಜೆ ಕಾರ್ಯದರ್ಶಿ ಆನೆಗುಂದಿ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್, ಶ್ರೀ ಅನಂತನಾಯ್ಕ ಕೋಟೇಶ್ವರ ನೈತಿಕ ಮತ್ತು ಆಧ್ಯಾತ್ಮಿಕ ಪ್ರಮುಖ್ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, ಕುಮಾರಿ ಜ್ಯೋತಿ ಎಳ್ಳಾರೆ ಜಿಲ್ಲಾ ಸಂಸ್ಕೃತಿ ಜ್ಞಾನಪರಿಚಯ ಪ್ರಮುಖ್ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, ಶ್ರೀಮತಿ ಸಂಧ್ಯಾ ಭಟ್ ಜಿಲ್ಲಾ ವಿಜ್ಞಾನ ಪ್ರಮುಖ್ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇವರು ಉಪಸ್ಥಿತರಿದ್ದರು. ಸುಮಾರು 15 ಶಾಲೆಗಳ 250 ಶಿಕ್ಷಕರು ಉಪಸ್ಥಿತರಿದ್ದರು. ಸಂಸ್ಥೆಯ ಉಪಮುಖ್ಯಶಿಕ್ಷಕಿಯಾದ ಶ್ರೀಮತಿ ಸೌಮ್ಯ ಸ್ವಾಗತಿಸಿ ವಂದಿಸಿದರು.
ಮಧ್ಯಾಹ್ನದಭೋಜನದನಂತರ 4ನೇ ಅವಧಿಯಾದ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸತೀಶ್ ಕುತ್ಯಾರು ಪ್ರಾಂತ ಶಾರೀರಿಕ ಶಿಕ್ಷಣ ಪ್ರಮುಖ್ ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಇವರು “ಪಂಚ ಪರಿವರ್ತನೆ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಶ್ರೀ ಪಾಂಡುರಂಗ ಪೈ ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, ಶ್ರೀ ಸುಂದರ ಆಚಾರ್ಯ ಮರೋಳಿಸದಸ್ಯರು ಆನೆಗುಂದಿ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್, ಶ್ರೀಮತಿ ನಾಗರತ್ನ ಕೋಟೇಶ್ವರ ಜಿಲ್ಲಾ ಬಾಲಿಕ ಶಿಕ್ಷಣ ಪ್ರಮುಖ್ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, ಶ್ರೀಮತಿ ಪ್ರತಿಮಾ ಹೆಬ್ರಿ ಜಿಲ್ಲಾ ಶಿಶುವಾಟಿಕ ಶಿಕ್ಷಣ ಪ್ರಮುಖ್ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇವರು ಉಪಸ್ಥಿತರಿದ್ದರು.15 ಶಾಲೆಗಳ ಆಡಳಿತ ಮಂಡಳಿ ಮುಖ್ಯ ಶಿಕ್ಷಕರು ಶಿಕ್ಷಕರು ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಸಂಸ್ಥೆಯ ಸಹ ಶಿಕ್ಷಕಿಯಾದ ಶ್ರೀಮತಿ ಶ್ರಾವ್ಯ ಸ್ವಾಗತಿಸಿ ವಂದಿಸಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ 18ನೇ ವರ್ಷದ ಜಿಲ್ಲಾ ಶೈಕ್ಷಣಿಕ ಸಹಮಿಲನ 2025 ಇದರ ಸಮಾರೋಪದ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನವನ್ನು ಶ್ರೀ ಗುರುರಾಜ್ಕೆ. ಜೆ ಕಾರ್ಯದರ್ಶಿ ಆನೆಗುಂದಿ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್ ಇವರು ವಹಿಸಿದರು. ಶ್ರೀ ಶ್ರೀಪತಿ ಮೈಸೂರು ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಬೆಂಗಳೂರು ಇವರು ಸಮಾಪನ ಮಾತುಗಳನ್ನಾಡಿದರು. ಶ್ರೀ ಪಾಂಡುರಂಗ ಪೈ ಸಿದ್ದಾಪುರ ಅಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶ್ರೀ ಮಹೇಶ್ ಹೈಕಾಡಿಚಾರ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, ಶ್ರೀಮತಿ ಅನಿತಾ ಮುಖ್ಯೋಪಾಧ್ಯಾಯನಿ ಸೂರ್ಯ ಚೈತನ್ಯಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು ಇವರು ಉಪಸ್ಥಿತರಿದ್ದರು. ವಿವಿಧ ಅವಧಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆಯನ್ನುನೀಡಿ ಗೌರವಿಸಲಾಯಿತು. ಹಾಗೂ ಸಂಸ್ಥೆಯ ಮುಖ್ಯೋಪಾಧ್ಯಾಯನಿಗೆ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇವರು ಸನ್ಮಾನಿಸಿದರು. ಶ್ರೀ ಗುರುರಾಜ್ಕೆ.ಜೆ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಂಸ್ಥೆಯಸಹ ಶಿಕ್ಷಕರಾದ ಶ್ರೀ ಸುಧೀರ್ ಇವರು ಸ್ವಾಗತಿಸಿ ವಂದಿಸಿದರು.


















