ಸೇವಾರ್ಥ ಏಕಾದಶೋತ್ತರ ಶತಾಧಿಕ ಸಹಸ್ರ ನಾಳೀಕೇರ ಮಹಾಗಣಪತಿ ಯಾಗ

ಶ್ರೀ ಆದಿಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ವಂಡಾರು ಇಲ್ಲಿ ವೇದಮೂರ್ತಿ ಶ್ರೀ ರಮೇಶ ಬಾಯರಿ ವಂಡಾರು ಇವರ ನೇತೃತ್ವದಲ್ಲಿ ಶ್ರೀ ಜಯಕುಮಾರ ಅಳಗುಂಡಗಿ ಶ್ರೀಮತಿ ಶ್ವೇತಾ ಜಯಕುಮಾರ ಇವರ ಸೇವಾರ್ಥ ಏಕಾದಶೋತ್ತರ ಶತಾಧಿಕ ಸಹಸ್ರ ನಾಳೀಕೇರ ಮಹಾಗಣಪತಿ ಯಾಗ ವಿವಿಧ ಧಾರ್ಮಿಕ ವಿಧಿ ವಿಧಾನದೊಂದಿಗೆ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.


ವೇದಮೂರ್ತಿ ರಮೇಶ್ ಬಾಯರಿ ಮಾತನಾಡಿ ಮಹಾಗಣಪತಿಯನ್ನು ಪರಮಾತ್ಮನ ಮತ್ತು ಸೃಷ್ಟಿಕರ್ತನ ರೂಪವಾಗಿ ಪರಿಗಣಿಸಲಾಗುತ್ತದೆ. ಬ್ರಹ್ಮಾಂಡದ ಸೃಷ್ಟಿಗೆ ಮುಂಚೆ ಮತ್ತು ಅದರ ವಿಸರ್ಜನೆಯ ನಂತರವೂ ಇರುತ್ತಾನೆ ಅವನ ಮಹಿಮೆ ಅಪಾರ ಹಾಗೆ ಇಂದು ನಮ್ಮ ಕ್ಷೇತ್ರದಲ್ಲಿ ಏಕಾದಶೋತ್ತರ ಶತಾಧಿಕ ಸಹಸ್ರ ನಾಳೀಕೇರ ಮಹಾಗಣಪತಿ ಯಾಗ ದೇವರಿಗೆ ಸಮರ್ಪಿಸಿದ್ದೇವೆ ಸೇವಕರ್ತರಿಗೆ ಹಾಗೂ ಲೋಕಕ್ಕೆ ಒಳಿತನ್ನು ಉಂಟುಮಾಡಲಿ ಎಂದರು.


ಶ್ರೀಮತಿ ಶ್ವೇತಾ ಜಯಕುಮಾರ ಅವರು ಮಾತನಾಡಿ ಕಷ್ಟದ ದಿನಗಳಲ್ಲಿ ಹೇಳಿಕೊಂಡ ಹರಕೆ ಇಂದು ಶ್ರೀ ದೇವರಿಗೆ ಸಮರ್ಪಿಸಿದ್ದೇವೆ ಎಂದರು.ಶ್ರೀ ಜಯಕುಮಾರ ಅಳಗುಂಡಗಿ ವ್ಯವಹಾರದ ಕಷ್ಟದ ದಿನಗಳಲ್ಲಿ ಬೇಡಿಕೊಂಡಾಗ ಇಷ್ಟಾರ್ಥವನ್ನು ಕರುಣಿಸಿದ ಪುಣ್ಯಕ್ಷೇತ್ರ ಇದಾಗಿದೆ ಎಂದರು.ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾಗಿ ವೇದ ಮೂರ್ತಿ ಸುಬ್ರಹ್ಮಣ್ಯ ಉಡುಪ ಬೆಂಗಳೂರು, ವೇದ ಮೂರ್ತಿ ಗಣೇಶ್ ಭಟ್ ಬನ್ನಾಡಿ, ಅರ್ಚಕ ವೃಂದವರು, ಊರ ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು

Related Posts

Leave a Reply

Your email address will not be published.