ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಪಡುಬಿದ್ರೆ ಶಾಖೆಯಲ್ಲಿ ಗ್ರಾಹಕರ ದಿನಾಚರಣೆ

ಮುಲ್ಕಿ:ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಪಡುಬಿದ್ರೆ ಶಾಖೆಯ ಗ್ರಾಹಕರ ದಿನಾಚರಣೆಯು ನವೆಂಬರ್ 11
ಸಂಘದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಸಂತ್ ಬೆರ್ನಾಡ್ ವಹಿಸಿ ಮಾತನಾಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಭಿವೃದ್ಧಿಗೆ ಗ್ರಾಹಕರ ಸಹಕಾರ ಕಾರಣವಾಗಿದ್ದು ಆತ್ಮೀಯತೆ ಕರ್ತವ್ಯ ನಿಷ್ಠೆ ಇದ್ದರೆ ಮಾತ್ರ ಗ್ರಾಹಕರ ವಿಶ್ವಾಸ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಪಡುಬಿದ್ರಿ ನವಶಕ್ತಿ ಮಹಿಳಾ ಮಂಡಳಿಯ ಕಾರ್ಯದರ್ಶಿ ಕಸ್ತೂರಿ ಮಾತನಾಡಿ ಸಂಘದ ಪ್ರಿಯದರ್ಶಿನಿ ತುಂಬಾ ಹೆಸರು ತುಂಬಾ ಸುಂದರವಾಗಿದ್ದು ಸಿಬ್ಬಂದಿಗಳ ನಗುಮೊಗದ ಸೇವೆ ಉತ್ತಮ ಹಣಕಾಸಿನ ವಹಿವಾಟು ಮೂಲಕ ಸಂಸ್ಥೆ ಗ್ರಾಹಕರ ವಿಶ್ವಾಸ ಗಳಿಸಿದ್ದು ಜನಪ್ರಿಯವಾಗಲಿ ಎಂದರು‌

ಅತಿಥಿ ಪಡುಬಿದ್ರಿ ಶ್ರೀ ಮಹಾ ಗಣೇಶ್ ಕಾಂಪ್ಲೆಕ್ಸ್ ನ ಮಾಲಕರಾದ ಸುಶ್ಮಿತಾ ಪಡುಬಿದ್ರೆ ಮಾತನಾಡಿ ಗ್ರಾಹಕರ ಸಮುದಾಯದ ಬೆಳವಣಿಗೆಗೆ ಸೊಸೈಟಿ ಕೂಡ ಕಾರಣವಾಗಿದ್ದು ಗ್ರಾಹಕರು ಜವಾಬ್ದಾರಿಯುತ ವಾಗಿರಬೇಕು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದರು.
ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ , ಶಾಕಾ ಪ್ರಬಂಧಕಿ ಅಂಜಲಿ ದೇವಾಡಿಗ ಉಪಸ್ಥಿತರಿದ್ದರು.

ಅಂಜಲಿ ದೇವಾಡಿಗ ಸ್ವಾಗತಿಸಿದರು, ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಧನ್ಯವಾದ ಅರ್ಪಿಸಿದರು ಸಾಲ ವಿಭಾಗದ ಪ್ರಬಂದಕಿ ಅಕ್ಷತಾ ಶೆಟ್ಟಿ ನಿರೂಪಿಸಿದರು

Related Posts

Leave a Reply

Your email address will not be published.