ಸುಬ್ರಹ್ಮಣ್ಯ:ಆಶ್ಲೇಷ ನಕ್ಷತ್ರ ಹಿನ್ನೆಲೆ,ಕುಕ್ಕೆಯಲ್ಲಿ ಅಧಿಕ ಭಕ್ತರ ಜಮಾವಣೆ
ಸುಬ್ರಹ್ಮಣ್ಯ : ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಿಂಗಳಿಗೊಮ್ಮೆ ಬರುವ ಆಶ್ಲೇಷ ನಕ್ಷತ್ರವಾದ ಈ ದಿನ ಅಧಿಕ ಭಕ್ತರು ಬಂದು ಆಶ್ಲೇಷ ಬಲಿ,ಶೇಷ ಸೇವೆ, ಮಹಾಪೂಜೆ, ನಾಗ ಪ್ರತಿಷ್ಠೆ ಮುಂತಾದ ಸೇವೆಗಳನ್ನ ನಡೆಸಿರುವರು.

ಬೆಳಗ್ಗೆ ಹೊತ್ತು ಮೂರು ಬ್ಯಾಚಿನಲ್ಲಿ ಆಶ್ಲೇಷ ಬಲಿ ಸೇವೆ ನಡೆಯುತ್ತಿದ್ದು ಮೂರು ಬ್ಯಾಚುಗಳಲ್ಲಿ ಕೂಡ ಅಧಿಕ ಸಂಖ್ಯೆಯ ಭಕ್ತಾದಿಗಳು ಸೇವೆ ಸಲ್ಲಿಸಿರುವರು ಹಾಗೆಯೇ ಮಧ್ಯಾಹ್ನದ ನಾಗ ಪ್ರತಿಷ್ಠ ಮಂಟಪದ ಎದುರು ಸ್ಥಳವಕಾಶ ಕಡಿಮೆ ಇದ್ದರೂ ಅಂಗಣ ಉದ್ದಕ್ಕೂ ಭಕ್ತರು ಕುಳಿತು ನಾಗ ಪ್ರತಿಷ್ಠೆ ಸೇವೆ ಸಲ್ಲಿಸಿರುವರು. ಇತ್ತ ಭೋಜನ ಪ್ರಸಾದಕ್ಕೂ ಭಕ್ತರ ಸರತಿ ಸಾಲು ಅಧಿಕವಾಗಿತ್ತು. ಶ್ರೀ ದೇವಳದ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸೆಕ್ಯೂರಿಟಿಯವರು ಭಕ್ತಾದಿಗಳ ಸುಗಮ ದರ್ಶನ ಹಾಗೂ ಪ್ರಸಾದ ಸ್ವೀಕಾರಕ್ಕಾಗಿ ವ್ಯವಸ್ಥೆಯನ್ನು ಮಾಡಿರುವರು. ವಾಹನ ಪಾರ್ಕಿಂಗ್ ಪ್ರದೇಶ ವಾಹನಗಳಿಂದ ತುಂಬಿತ್ತು.


















