ಕೇರಳಕ್ಕಿಂತ ಕಡಿಮೆ ದರದಲ್ಲಿ ಇಂಧನ ಸಿಗುತ್ತಿದೆ ಎಂಬ ಪ್ಲೆಕ್ಸ್ : ಕೇರಳದಲ್ಲಿ ಭಾರೀ ಪ್ರತಿಭಟನೆ

ಮಂಜೇಶ್ವರ: ಗಡಿಪ್ರದೇಶವಾದ ಕರ್ನಾಟಕ ಪೆಟ್ರೋಲ್ ಪಂಪ್ ಎದುರು ಹಾಕಿರುವ ಪ್ಲೆಕ್ಸ್ ಬೋರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೇರಳಕ್ಕಿಂತ 8 ರೂಪಾಯಿ ಕಡಿಮೆ ದರದಲ್ಲಿ ಇಂಧನ ಸಿಗುತ್ತದೆ ಎಂಬುದಾಗಿ ಫಲಕ ಹಾಕಿರುವುದು ಇದೀಗ ವೈರಲಾಗುತ್ತಿದೆ. ಕೇರಳಕ್ಕೆ ಹೋಲಿಸಿದರೆ ಕರ್ನಾಟಕದ ಡೀಸೆಲ್ ದರ 8 ರೂ. ಹಾಗೂ ಪೆಟ್ರೋಲ್ 5 ರೂಪಾಯಿ ಕಡಿಮೆಯಾಗಿದೆ. ಕೇರಳ ಬಜೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಎರಡು ರೂಪಾಯಿ ಸೆಸ್ ಹೇರಲಾಗಿದೆ. ಇದು ಏಪ್ರಿಲ್ ನಿಂದ ಜಾರಿಗೆ ಬಂದರೆ ಕರ್ನಾಟಕದಲ್ಲಿ ಡೀಸೆಲ್ 10 ರೂ ಹಾಗೂ ಪೆಟ್ರೋಲ್ 7 ರೂ ಕಡಿಮೆಯಾಗಲಿದೆ. ಮಂಗಳೂರಿನಲ್ಲಿ ಸೋಮವಾರ ಪೆಟ್ರೋಲ್ ದರ 101.13 ರೂ. ಹಾಗೂ ಡೀಸೆಲ್ ದರ 87.13 ರೂ. ಆಗಿತ್ತು. ಕಾಸರಗೋಡು ಇದು ಕ್ರಮವಾಗಿ 106.37 ಮತ್ತು 95.29 ರೂ. ಆಗಿತ್ತು. ಕೇರಳದ ವಾಹನ ಸವಾರರನ್ನು ಸೆಳೆಯಲು ಇಂತಹ ಫ್ಲಕ್ಸ್ ಬೋರ್ಡ್ ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಬೋರ್ಡ್‍ನಲ್ಲಿ ಇಂಗ್ಲಿಷ್ , ಮಲಯಾಳಂ ಮತ್ತು ಕನ್ನಡದಲ್ಲಿ ಭಾಷೆಗಳಲ್ಲಿ ಬರೆಯಲಾಗಿದೆ. ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳು ಇಂಧನ ಬೆಲೆ ಇಳಿಕೆ ಮಾಡಿದ್ದರೂ ಕೇರಳ ಸರ್ಕಾರ ಒಂದು ರೂಪಾಯಿ ಕೂಡ ಇಳಿಕೆ ಮಾಡದಿರುವುದು ಹಲವು ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಈ ಪ್ರತಿಭಟನೆಯ ಬೆಂಕಿ ಆರುವ ಮುನ್ನವೇ ಬಡ್ಜೆಟ್ ನಲ್ಲಿ 2 ರೂಪಾಯಿ ಇಂಧನ ಸೆಸ್ ಸಹ ಘೋಷಿರುವುದು.ಜನರ ಮೇಲೆ ಪರಿಣಾಮ ಬೀರುತ್ತಿರುವ ಇಂಧನ ಸೆಸ್ ವಿರುದ್ಧ ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ.

Related Posts

Leave a Reply

Your email address will not be published.