ಉಡುಪಿಯ ಬನ್ನಂಜೆ ಬಿಲ್ಲವರ ಸೇವಾ ಸಂಘದ ಶ್ರೀ ನಾರಾಯಣಗುರು ವಿದ್ಯಾನಿಧಿ ಟ್ರಸ್ಟ್
ಉಡುಪಿಯ ಬನ್ನಂಜೆ ಬಿಲ್ಲವರ ಸೇವಾ ಸಂಘದ ಶ್ರೀ ನಾರಾಯಣಗುರು ವಿದ್ಯಾನಿಧಿ ಟ್ರಸ್ಟ್ ವತಿಯಿಂದ 431 ವಿದ್ಯಾರ್ಥಿಗಳಿಗೆ 25 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸಮ್ಮಾನ ಕಾರ್ಯಕ್ರಮವು ರವಿವಾರ ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಜರಗಿತು.
ನಾರಾಯಣಗುರು ಆಭಿವೃದ್ದಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಾತನಾಡಿ ಸಮಾಜದ ಪ್ರತಿಯೊಬ್ಬ ಮಕ್ಕಳು ಉನ್ನತವಾದ ಶಿಕ್ಷಣ ಪಡೆದು, ಉನ್ನತ ಹುದ್ದೆ ಪಡೆದು, ಇಲ್ಲವೆ ಯಶಸ್ವಿ ಉದ್ಯಮಿಗಳಾಗಿ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು. ಆ ಮೂಲಕ ಇನ್ನು ಹೆಚ್ಚಿನ ವಿದ್ಯಾರ್ಥಿ ವೇತನವನ್ನು ನೀಡುವಲ್ಲಿ ಎಲ್ಲರು ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ನಾರಾಯಣಗುರು ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಮಂಜುನಾಥ ಪೂಜಾರಿ, ಜಿಲ್ಲಾ ರಾಜ್ಯೋತ್ಸವ ಪುರಸ್ಕ್ರತ ವಿಠಲ ಪೂಜಾರಿ, ರಾಜ್ಯ ಪ್ರಶಸ್ತಿ ಪಡೆದ ದೇಯಿ ಬæೖದಿತಿ ಚಿತ್ರದ ನಿರ್ಮಾಪಕ ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ವಿದ್ಯಾರ್ಥಿಗಳಾದ ಹರ್ಷ ಯು. ಪೂಜಾರಿ, ಪ್ರಣತಿ ಜತ್ತನ್, ಸಾಯಿ ವೈಷ್ಣವ್ ದಯಕರ್ ಅವರುಗಳನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು. 431 ಮಂದಿ ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ವೇತನ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಶಿಧರ ಎಂ. ಅಮೀನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂತೋಷ್, ಮಣಿಪಾಲದ ಸಂಶೋದನಾ ವಿದ್ಯಾರ್ಥಿ ಶ್ರೇಯಸ್ ಜಿ. ಕೋಟ್ಯಾನ್,ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ, ಕೋಶಾಧಿಕಾರಿ ಸದಾನಂದ ಅಮೀನ್, ಸದಸ್ಯರಾದ ಅಶೋಕ್ ಪೂಜಾರಿ, ಸುಧಾಕರ ಪೂಜಾರಿ, ಉದಯ ಪೂಜಾರಿ, ಪ್ರವೀಣ್ ಆರ್ ಸುವರ್ಣ, ವಿಶ್ವನಾಥ್ ಕಲ್ಮಾಡಿ, ಗಣೇಶ್ ಕೋಟ್ಯಾನ್, ಸತೀಶ್ ಅಮೀನ್, ಲಕ್ಷ್ಮಣ ಪೂಜಾರಿ, ಸಂದೀಪ್ ಸನಿಲ್, ಸುಕನ್ಯಾ, ವಿದ್ಯಾ ನಿಧಿ ಟ್ರಸ್ಟ್‌ನ ಸದಸ್ಯರಾದ ಪ್ರಭಾಕರ ಪೂಜಾರಿ, ದೀಪಕ್ ಕುಮಾರ್, ಕೃಷ್ಣ ಆಂಚನ್, ಜಿತೇಶ್, ಎಸ್. ಟಿ. ಕುಂದರ್, ಜಯಕರ್ ಮೊದಲಾವರು ಉಪಸ್ಥಿತರಿದ್ದರು


















