ಪೀಲಿತಡ್ಕ ಶ್ರೀ ಗುಳಿಗ ಮತ್ತು ಶ್ರೀ ಕೊರಗ ತನಿಯ ದೈವ ಸನ್ನಿಧಿ : ತುಳು ಲಿಪಿ ನಾಮಫಲಕ ಅನಾವರಣ

ಕಾಸರಗೋಡಿನ ಬದಿಯಡ್ಕದ ವಿದ್ಯಾಗಿರಿಯ ಪೀಲಿತಡ್ಕ ಶ್ರೀ ಗುಳಿಗ ಮತ್ತು ಶ್ರೀ ಕೊರಗ ತನಿಯ ದೈವ ಸನ್ನಿಧಿಯಲ್ಲಿ ತುಳು ಲಿಪಿ ನಾಮಫಲಕವನ್ನು ಅಳವಡಿಸಲಾಯಿತು. ಕಾರ್ಯಕ್ರಮದಲ್ಲಿ ಬದಿಯಡ್ಕದ ಗ್ರಾಮ ಪಂಚಾಯತ್ ಮೆಂಬರ್ ಶ್ರೀ ಬಾಲಕೃಷ್ಣ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಿದ್ದರು, ಇವರು ತಮ್ಮ ಭಾಷಣದಲ್ಲಿ ತುಳು ಬಾಷೆಯು ಶೀಘ್ರದಲ್ಲಿ 8ನೇ ಪರಿಚ್ಚೆದಕ್ಕೆ ಸೇರುವಂತಾಗಲಿ ಎಂದರು. ಸ್ಥಳದ ಹಿರಿಯ ದೈವ ಪಾತ್ರಿ ಶ್ರೀ ನಿಟ್ಟೋನಿ ಇವರು ತುಳು ಲಿಪಿ ನಾಮಫಲಕವನ್ನು ಉದ್ಘಾಟಿಸಿದರು.

ವಿಟ್ಲ ಸರಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ವೈ ಶಂಕರಪಾಟಾಳಿ ಇವರು ಮಾತನಾಡುತ್ತಾ ತುಲು ಭಾಷೆ, ಲಿಪಿ ತುಳುನಾಡಿನಲ್ಲಿ ಅಲ್ಲದೆ ಬೇರೆ ಹೊರ ರಾಜ್ಯ ಗಳಲ್ಲಿ ಕೂಡ ಪಸರಿಸಲಿ ಹಾಗೂ ತುಳುನಾಡಿನ ಸಂಸ್ಕೃತಿ ಲೋಕದಲ್ಲಿ ಎಲ್ಲೆಡೆ ಪಸರಿಸಲಿ ಎಂದರು.

ಜೈ ತುಳುನಾಡ್ (ರಿ ) ಸಂಘಟನೆಯ ಅಧ್ಯಕ್ಷರಾದ ಹರಿಕಾಂತ್ ಸಾಲಿಯಾನ್ ಇವರು ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿದರು. ಜೈ ತುಳುನಾಡು ಸಂಘಟನೆಯ ಸಹ ಕಾರ್ಯದರ್ಶಿ, ಜಗನ್ನಾಥ್ ಕುಲಾಲ್ ಇವರು ಧನ್ಯವಾದಗಳನಿತ್ತರು. ಜೈತುಳುನಾಡ್ ಸಂಘಟನೆಯ ಸದಸ್ಯ ಸುಶಾಂತ್ ಕುಲಾಲ್ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಸನ್ನಿದಿಯ ದೈವ ಪಾತ್ರಿ ಕೇಶವ ಇವರಿಗೆ ಜೈ ತುಳುನಾಡು ಸಂಘಟನೆ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಲಾಯಿತು.

Related Posts

Leave a Reply

Your email address will not be published.