ಮಂಜೇಶ್ವರದಲ್ಲಿ ನೇಣುಬಿಗಿದು ಮಹಿಳೆ ಆತ್ಮಹತ್ಯೆ
ಮಂಜೇಶ್ವರ : ಮೂರು ತಿಂಗಳ ಹಸುಗೂಸಿನ ತಾಯಿಯೊಬ್ಬಳು ಗಂಡನ ಮನೆಯಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಉಪ್ಪಳ ಸೋಂಕಾಲ ಕೊಡಂಗೆ ರಸ್ತೆ ನಿವಾಸಿ ಮೊಯ್ದಿನ್ ಸವಾದ್ ಎಂಬವರ ಪತ್ನಿ ಫಾತಿಮತ್ ನಬೀನಾ (25) ಸಾವನ್ನಪ್ಪಿದ ದುರ್ದೈವಿ.
ಈಕೆಯನ್ನು ಮಲಗುವ ಕಿಟಿಕಿಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ಏನೆಂದು ವ್ಯಕ್ತವಾಗಿಲ್ಲ. ಪ್ರಕರಣ ದಾಖಲಿಸಿ ಮಂಜೇಶ್ವರ ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.


















