ಮೂಡುಬಿದಿರೆ: ಸಹಕಾರಿ ಸಂಘಗಳಲ್ಲಿ ಸಾಮಾಜಿಕ ಕಳಕಳಿ ಇದೆ- ಡಾ. ಎಂ.ಎನ್ ರಾಜೇಂದ್ರ ಕುಮಾರ್
ಮೂಡುಬಿದಿರೆ: ವಾಣಿಜ್ಯ ಬ್ಯಾಂಕ್‍ಗಳ ಲಾಭದ ಪಾಲು ಗ್ರಾಹಕರಿಗೆ ಸಿಗುವುದು ಕಡಿಮೆ. ಆದರೆ ಸಾಮಾಜಿಕ ಕಳಕಳಿ ಹೊಂದಿರುವ ಸಹಕಾರಿ ಬ್ಯಾಂಕ್‍ಗಳು ತಮ್ಮ ಲಾಭದಲ್ಲಿ ಹೆಚ್ಚಿನ ಪಾಲನ್ನು ಸದಸ್ಯರ ಹಿತಕ್ಕೋಸ್ಕರ ವಿನಿಯೋಗಿಸುತ್ತಿವೆ ಎಂದು ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
ಅವರು ಎಂಸಿಎಸ್ ಸೊಸೈಟಿಯಲ್ಲಿ ನಡೆಯುತ್ತಿರುವ ಸಹಕಾರ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕ್‍ಗಳು ವಿಲೀನಗೊಂಡು ಜನಸಾಮಾನ್ಯರಿಗೆ ದೂರವಾಗುತ್ತಿದ್ದರೆ ಸಹಕಾರಿ ಕ್ಷೇತ್ರಗಳು ವಿಕಸನಗೊಂಡು ಹಳ್ಳಿಯ ಜನರಿಗೆ ಹತ್ತಿರವಾಗುತ್ತಿವೆ. ಅದಕ್ಕಾಗಿ ಕೇಂದ್ರ ಸರ್ಕಾರ ಪ್ರತಿ ಗ್ರಾಮದಲ್ಲಿ ಸಹಕಾರಿ ಸಂಘವನ್ನು ತೆರೆಯುವ ಚಿಂತನೆ ಹೊಂದಿದ್ದು ಸಹಕಾರಿ ಕ್ಷೇತ್ರ ಹಳ್ಳಿಯ ಜನರಿಗೆ ಇನ್ನಷ್ಟು ಹತಿರವಾಗಲಿದ್ದು ಗ್ರಾಮದ ಅಸಭಿವೃದ್ಧಿಗೆ ನೆರವಾಗಲಿದೆ ಎಂದರು.
ಬೆಂಗಳೂರಿನ ಅಧ್ಯಾ ಕಮ್ಯೂನಿಕೇಷನ್‍ನ ಸಂಸ್ಥಾಪಕ ಚೆಂಗಪ್ಪ ಎ.ಡಿ ಅವರು ದಿಕ್ಸೂಚಿ ಭಾಷಣ ಮಾಡುತ್ತಾ ತಂತ್ರಜ್ಞಾನದ ಬಳಕೆಯಿಂದ ಉಪಯೋಗವು ಇದೆ ತೊಂದರೆಯು ಇದೆ. ಬಳಕೆ ಮಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಬ್ಯಾಂಕ್ ಹೆಸರಿನಲ್ಲಿ ಅಥವಾ ಇನ್ಯಾವೊದೊ ಕಂಪೆನಿಗಳ ಹೆಸರಿನಲ್ಲಿ ಮೊಬೈಲ್‍ಗೆ ಕಳಿಸುವ ಒಟಿಪಿ ಅಥವಾ ಲಿಂಕ್‍ಗಳಿಗೆ ಸ್ಪಂದಿಸಿ ಮೋಸ ಹೋಗಬಾರದು ಎಂದು ತಿಳಿಸಿದರು.
ದ.ಕ ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ ಪ್ರಸಾದ್ ಕೌಶಲ ಶೆಟ್ಟಿ, ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೋ.ರಮೇಶ್ ಭಟ್, ಆಳ್ವಾಸ್ ಪಪೂ ಕಾಲೇಜಿನ ಪ್ರಾಚಾರ್ಯ ಪೆÇ್ರ.ಸದಾಕತ್ ಉಪಸ್ಥಿತರಿದ್ದರು. ಸೊಸೈಟಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್, ಸಿಇಒ ಧರಣೇಂದ್ರ ಕುಮಾರ್ ಉಪಸ್ಥಿತರಿದ್ದರು. ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿದರು. ಸೊಸೈಟಿ ಸಿಬಂದಿ ಹೆರಾಲ್ಡ್ ತೌವ್ರೊ ಕಾರ್ಯಕ್ರಮ ನಿರೂಪಿಸಿದರು.