ಮಂಗಳೂರು:ಜ.9ರಿಂದ 11ರ ವರೆಗೆ ಕಲಾಪರ್ಬ ಚಿತ್ರ ಶಿಲ್ಪ ಸಾಂಸ್ಕೃತಿಕ ಮೇಳ
ಶರಧಿಪ್ರತಿಷ್ಠಾನ ಮಂಗಳೂರು ವತಿಯಿಂದ ಅಸ್ತ್ರ ಗೋಲ್ಡ್ & ಡೈಮಂಡ್ಸ್ ಸಹಯೋಗದಲ್ಲಿ ಕಲಾಪರ್ಬ ಚಿತ್ರ ಶಿಲ್ಪ ಸಾಂಸ್ಕೃತಿಕ ಮೇಳ-2026 ಜನವರಿ 9 ರಿಂದ 11ರ ವರೆಗೆ ನಗರದ ಕದ್ರಿ ಪಾರ್ಕ್‌ನಲ್ಲಿ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರಾವಳಿ ಚಿತ್ರಕಲಾ ಚಾವಡಿ, ತೋಟಗಾರಿಕಾ ಇಲಾಖೆ, ಮಹಾಲಸಾ ಕಾಲೇಜ್ ಆಫ್ ವಿಷುಯಲ್ ಆರ್ಟ್, ಸೌತ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಮಂಗಳೂರು ಸಹಕಾರದಲ್ಲಿ ಕಲಾ ಪರ್ಬ ಚಿತ್ರ ಶಿಲ್ಪ ಸಾಂಸ್ಕೃತಿಕ ಮೇಳ ಹಮ್ಮಿಕೊಂಡಿದ್ದಾರೆ.
ನೂರಾರು ಮಳಿಗೆಗಳಲ್ಲಿ ಸಾವಿರಾರು ಕಲಾಕೃತಿಗಳ ರಾಷ್ಟ್ರೀಯ ಮಟ್ಟದ ಕಲಾ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ವಿವಿಧ ವಿಭಾಗಗಳಲ್ಲಿ ನಡೆಯಲಿದೆ. ಜನವರಿ ೧೦ರಂದು ಮಧ್ಯಾಹ್ನ ೩.೩೦ರಿಂದ ೫.೩೦ರ ವರೆಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದಾರೆ.
ರಾಷ್ಟ್ರಮಟ್ಟದ ಫೋಟೋ ಕಾಂಟೆಸ್ಟ್ ಮತ್ತು ಪ್ರದರ್ಶನ ನಡೆಯಲಿದ್ದು, ವಿಜೇತರಾದವರಿಗೆ ನಗದು ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಿದ್ದರೆ.
ಜನವರಿ ೧೧ರಂದು ಮೆಹಂದಿ ಸ್ಪರ್ಧೆಯೂ ನಡೆಯಲಿದೆ. ಈ ಸ್ಪರ್ಧೇಯ ವಿಜೇತರೂ ಸಹ ಕ್ಯಾಶ್ ಪ್ರೈಸ್ ಗೆಲ್ಲುವ ಅವಕಾಶವಿದೆ. ಕದ್ರಿಪಾರ್ಕ್‌ನಲ್ಲಿ ಜನವರಿ ೯ರಿಂದ ೧೧ರ ವರೆಗೆ ಅಂದರೆ ಮೂರು ದಿನಗಳ ಕಾಲ ಈ ಸ್ಪರ್ಧೆ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಅವಕಾಶವೂ ಇದೆ.


















