ಬೈಂದೂರು: ದೇಶ ಕಾಯುವ ವೀರ ಯೋಧರಿಗೆ ವಿದ್ಯಾರ್ಥಿಗಳಿಂದ ದೀಪಾವಳಿ ಹಬ್ಬದ ಶುಭಾಶಯ ಪತ್ರ
ಬೈಂದೂರು: ಸಮೃದ್ಧ ಬೈಂದೂರು ಪರಿಕಲ್ಪನೆ ಅಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸೈನಿಕರಿಗೆ ದೀಪಾವಳಿ ಶುಭಾಶಯ ಕೋರುವ ಅವಕಾಶ ಒಂದನ್ನು ಆಯೋಜಿಸಿದ್ದು, ಸಾವಿರಾರು ವಿದ್ಯಾರ್ಥಿಗಳು ದೇಶ ಕಾಯುವ ಯೋಧರಿಗೆ ದೀಪಾವಳಿ ಶುಭಾಶಯ ಪತ್ರ ಬರೆಯಲು ಉತ್ಸಾಹದಿಂದ ಪಾಲ್ಗೊಂಡಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ನೂರಾರು ವಿದ್ಯಾರ್ಥಿಗಳ ಪತ್ರವು ಸಮೃದ್ಧ ಬೈಂದೂರು ತಂಡವನ್ನು ತಲುಪಿದ್ದು, ಕೆಲವು ಶಾಲೆಗಳಲ್ಲಿ ಶಿಕ್ಷಕರು ಉತ್ತಮವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳನ್ನು ಪತ್ರ ಬರೆಯುವಂತೆ ಹುರಿದುಂಬಿಸುತ್ತಿದ್ದಾರೆ.
ಶಾಸಕ ಗುರುರಾಜ್ ಗಂಟಿಹೊಳೆಯವರ ಸಮೃದ್ಧ ಬೈಂದೂರು ಪರಿಕಲ್ಪನೆಯ ಮಕ್ಕಳಲ್ಲಿ ದೇಶಪ್ರೇಮದ ಭಾವನೆಯನ್ನು ಮೂಡಿಸುವ ಈ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಉತ್ಸಾಹದಿಂದ ಪತ್ರ ಬರೆದ ವಿದ್ಯಾರ್ಥಿಗಳು ಸೈನಿಕರಿಗೆ ಶುಭಾಶಯ ಕೋರುವ ಅವಕಾಶವನ್ನು ಕೊಟ್ಟಿದ್ದಕ್ಕಾಗಿ ಸಮೃದ್ಧ ಬೈಂದೂರು ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.