ದಿ ಒರಿಜಿನಲ್ ಆಭರಣ, ಉಡುಪಿ ಪಾರಂಪರಿಕ ಸ್ವರ್ಣ ಲೇಪಿತ ಬೆಳ್ಳಿ ಆಭರಣಗಳ “ಉತ್ಸವ್ ಸೆಲೆಬ್ರಂಟ್ ಸಂಗ್ರಹ ಬಿಡುಗಡೆ”.
ಉಡುಪಿಯ ಪ್ರಸಿದ್ಧ ಚಿನ್ನಾಭರಣ ಸಂಸ್ಥೆ ದಿ ಒರಿಜಿನಲ್ ಆಭರಣ ಜ್ಯುವೆಲ್ಲರ್ಸ್ ನಲ್ಲಿ ಸಂಕ್ರಾಂತಿ ಹಬ್ಬದ ಈ ಶುಭದಿನದಂದು “ಉತ್ಸವ್ ಸೆಲೆಬ್ರಂಟ್ ಸಿಲ್ವರ್ ” ಸಂಗ್ರಹವನ್ನು ಬೆಂಗಳೂರಿನ ಜಯನಗರ ಮತ್ತು ಉಡುಪಿ ಶಾಖೆಯಲ್ಲಿ ಬಿಡುಗಡೆಗೊಳಿಸಲಾಯಿತು.
92.5 ಶುದ್ಧತೆಯ ಬೆಳ್ಳಿಯಿಂದ ತಯಾರಿಸಿದ ಪಾರಂಪರಿಕ ಶೈಲಿಯ ವಿನೂತನ ಬೆಳ್ಳಿಯ ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಇಂದು ಉಡುಪಿಯ ಆಭರಣ ಜ್ಯುವೆಲ್ಲರ್ಸ್ ನ ಬೆಳ್ಳಿ ಮಳಿಗೆಯಲ್ಲಿ ಗ್ರಾಹಕರಾದ ಭಗವಾನ್ ದಾಸ್ ಶೆಟ್ಟಿಗಾರ್, ಪುಷ್ಪಲತಾ ಭಗವಾನ್ ದಾಸ್ ಶೆಟ್ಟಿಗಾರ್,ಶೈಲಾಭಕ್ತಾ, ಸಂಧ್ಯಾ ಸುಭಾಷ್ ಕಾಮತ್, ವೀಣಾ ಮಹೇಶ್ ಕಾಮತ್ ಹಾಗೂ ಆಕಾಶ್ ಎಂ ಕಾಮತ್ ಮತ್ತು ಸಾತ್ವಿಕ್ ಎಸ್ ಕಾಮತ್ ಅವರುಗಳಿಂದ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.








ನುರಿತ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ಉತ್ಸವ್ ಸೆಲೆಬ್ರೆಂಟ್ ಬೆಳ್ಳಿ ಸಂಗ್ರಹದಲ್ಲಿ ಸ್ವರ್ಣ ಲೇಪಿತ ಬೆಳ್ಳಿಯ ವಿವಿಧ ಆಭರಣಗಳು ಉಡುಪಿಯ ಆಭರಣ ಜ್ಯುವೆಲ್ಲರ್ಸ್ ನ ಬೆಳ್ಳಿ ಶೋರೂಂ ನಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭಿಸಲಿದೆ ಎಂದು ಗೋಲ್ಡ್ ವಿಭಾಗದ ಮುಖ್ಯಸ್ಥ ಮುರಳೀಧರ ಆಚಾರ್ಯ ಹೇಳಿದರು.ಪರ್ಯಾಯಕ್ಕೆ ಆಗಮಿಸುವ ಪ್ರವಾಸಿಗರಿಗೆ ಸ್ವಾಗತ ಕೋರುವ ಉದ್ದೇಶದಿಂದ ಉಡುಪಿಯ ಆಭರಣ ಜ್ಯುವೆಲರಿಯ ಸಹಯೋಗದೊಂದಿಗೆ ಕಲಾವಿದ ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರಬೆಟ್ಟು ಅವರು ಬಟಾಣಿ, ಕಡಲೆ, ಅವರೆಕಾಳು, ಉರಿಕಡಲೆ, ಕಪ್ಪು ತೊಗರಿ, ಹೆಸರು ಕಾಳು, ತೊಗರಿಬೇಳೆ ರಾಜ್ಮ್, ಹುರಿಕಡಲೆಯಂತಹ ಧಾನ್ಯಗಳನ್ನು ಬಳಸಿ ದಾನ್ಯಾಭರಣ ಕೃಷ್ಣನ ಕಲಾಕೃತಿಯನ್ನು ರಚಿಸಿದ್ದಾರೆ.ಕಲಾಕೃತಿಯು ಸುಮಾರು 9 ಅಡಿ ಎತ್ತರವಿದೆ. ಈ ಕಲಾಕೃತಿಯನ್ನು ರಚಿಸಲು ಕಲಾವಿದರು ಸುಮಾರು 20 ಕೆಜಿ ಧಾನ್ಯಗಳನ್ನು ಬಳಸಿದ್ದಾರೆ, ಈ ಕಲಾಕೃತಿಯು ಉಡುಪಿ ಆಭರಣ ಜ್ಯುವೆಲರಿ ಯ ಆವರಣದಲ್ಲಿ ಸಾರ್ವಜನಿಕರಿಗಾಗಿ ಪ್ರದರ್ಶನಕ್ಕಿಡಲಾಗಿದೆ.ಗ್ರಾಹಕರು ಆಭರಣ ಜ್ಯುವೆಲರಿಗೆ ಆಗಮಿಸಿ ವೀಕ್ಷಿಸಿ ಸ್ವರ್ಣ ಲೇಪಿತ ಜ್ಯುವೆಲ್ಲರಿಯನ್ನು ಖರೀದಿಸುವ ಮೂಲಕ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.




















