V4 ನ್ಯೂಸ್ ಸನ್ ಪ್ರೀಮಿಯಮ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 4: ಸಂತ ಆಲೋಶಿಯಸ್ ಕಾಲೇಜಿನಲ್ಲಿ ಚಾಲನೆ
V4 ನ್ಯೂಸ್ ಸನ್ ಪ್ರೀಮಿಯಮ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 4 ಗೆ ಮಂಗಳೂರಿನ ಸಂತ ಆಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಸಂಭ್ರಮದ ಚಾಲನೆ ದೊರೆತಿದೆ. V4 ನ್ಯೂಸ್ ಮತ್ತು ಮಂಗಳೂರಿನ ಸಂತ ಆಲೋಸಿಯಸ್ ಕಾಲೇಜಿನ ಪತ್ತಿಕೋಧ್ಯಮ, ಸಮೂಹ ಸಂವಹನ ಹಾಗೂ ದೃಶ್ಯ ಸಂವಹನ ವಿಭಾಗದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪತ್ರಿಕಾ ಕ್ಷೇತ್ರದ ಸಾಧಕರಾದ ಮನೋಹರ್ ಪ್ರಸಾದ್, ಕ್ರೀಡಾಕ್ಷೇತ್ರದ ಸಾಧಕರಾದ ದಿನೇಶ್ ಕುಂದರ್, ವ್ಯಂಗಚಿತ್ರ ಸಾಧಕರಾದ ಜಾನ್ ಐ ಚಂದ್ರನ್ ಅವರಿಗೆ “ಮಾಸ್ಟರ್ ಭವಾನಿ ಶಂಕರ್ ಕುಂದರ್ ಸ್ಮರಣಾರ್ಥ ಸಾಧನಾ ಪ್ರಶಸ್ತಿ”ಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಸಂತ ಆಲೋಸಿಯೇಸ್ ಕಾಲೇಜಿನ ರಿಜಿಸ್ಟ್ರಾರ್ ಅಲ್ವಿನ್ ಡೇಸಾ, ನಿರ್ದೇಶಕರಾದ ಡೆನ್ನಿಸ್ ಫೆರ್ನಾಂಡೀಸ್, ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಭವ್ಯಾ ಶೆಟ್ಟಿ, ರೇವತಿ ಸುವರ್ಣ, ದಿನೇಶ್ ಕುಂದರ್, ಸೌಮ್ಯ ದಿನೇಶ್, ರಾಜೇಂದ್ರ ಕುಂದರ್, ನಿಶಿ ರಾಜೇಂದ್ರ, ವಿ4 ನ್ಯೂಸ್ ಆಡಳಿತ ನಿರ್ದೇಶಕರಾದ ಲಕ್ಷ್ಮಣ ಕುಂದರ್, ಸವಿತಾ ಲಕ್ಷ್ಮಣ್ ಮೊದಲಾದವರಿದ್ದು ಪ್ರಶಸ್ತಿ ಪ್ರದಾನ ಮಾಡಿದರು.