ಅಜ್ಜಿಗೆ ಮನೆ ಕಟ್ಟಿ ಕೊಡಲು ಮುಂದಾದ : ಪೆರ್ಡೂರಿನ “ವಿ ಲವ್ ಹ್ಯೂಮನಿಟಿ ಯುವಕರ ತಂಡ
ಮುತ್ತಜ್ಜಿ ….ಮುಗ್ಗ ಮನಸ್ಸಿನ ಈ ಬಡ ಅಜ್ಜಿ ಉಡುಪಿಯ ಪೆರ್ಡೂರು ಬಳಿ ಪಾಡಿಗಾರದ ನಿವಾಸಿ.ಕಳೆದ ಇಪ್ಪತು ವರ್ಷಗಳಿಂದ ಅಜ್ಜಿ ಬದುಕುತ್ತಿರುವ ಮನೆಯನ್ನ ಕಂಡ್ರೆ… ನಿಜಕ್ಕೂ ನೀವು ಮರುಕ ಪಡ್ತೀರಾ.ನಾಲ್ಕು ಕಂಬಗಳಿಗೆ, ಸಿಮೆಂಟ್ ಶೀಟು ಹಾಕಿ, ತೆಂಗಿನ ಗರಿಗಳಿಂದ ಮುಚ್ಚಿದ ಈ ಹಳೆ ಸೂರಲ್ಲಿಯೇ ತನ್ನ ಬದುಕು ಕಳೆದಿದ್ದಾರೆ.
ವಯಸ್ಸಾದ ಅಜ್ಜಿಗೆ ಹಿಂದು… ಮುಂದು ಅಂತಾ ಯಾರು ಇಲ್ಲ.ಇರುವ ಒಬ್ಬ ಮಗನೂ ಯಾವುದೇ ಪ್ರಯೋಜನಕ್ಕಿಲ್ಲ. ಪ್ರತಿ ಬಾರಿಯೂ ಬೀಸುವ ಗಾಳಿ ಅಬ್ಬರದ ಮಳೆಗೆ ತಗಡು ಶೀಟುಗಳು ಹಾರಿ, ಮಳೆ ನೀರಿನಲ್ಲಿಯೇ ಒದ್ದೆಯಾಗಿ ಜೀವನ ಕಳೆದಿದ್ದಾರೆ. ರಕ್ಷಣೆಗೆ ಹಾಕಿದ ತೆಂಗಿನ ಗರಿಗಳು ವರುಣನ ರುದ್ರ ನರ್ತನ ಕಿತ್ತು ಹೋಗಿವೆ. ಈ ಹರಕಲು ಪಾಳು ಸೂರಿನಲ್ಲೇ ಅಜ್ಜಿಯ ನರಕಮಯ ಬದುಕು ಸಾಗಿಸುತ್ತಿದ್ದಾರೆ.
ಸರಕಾರದಿಂದಲೂ ಅಜ್ಜಿಗೆ ಈವರೆಗೆ ಯಾವುದೇ ಸಹಾಯಗಳು ಸಿಕ್ಕಿಲ್ಲ.ಅಧಾರ್ ಕಾರ್ಡ್ ರೇಶನ್ ಕಾರ್ಡ್ ಕೂಡ ಇವರ ಬಳಿಯಿಲ್ಲ. ಕಷ್ಟ ಇದ್ರೂ ಈವರೆಗೂ ಅಜ್ಜಿ ಯಾರ ಬಳಿಯೂ ಬೇಡಿದ್ದು ಕೂಡ ಇಲ್ಲವಂತೆ. ಅಷ್ಟು ಸ್ವಾಭಿಮಾನಿ ಈ ಮುತ್ತಜ್ಜಿ.ಅದ್ರೂ ಜೀವನದಲ್ಲಿ ಸ್ವಂತದ್ದೊಂದು ಮನೆಯಲ್ಲಿ ಬದುಕಬೇಕು ಎನ್ನುವ ಅಸೆ ಅಜ್ಜಿಯದ್ದು.
ಅಜ್ಜಿಯ ಸಂಕಷ್ಟಗಳನ್ನ ಕಂಡ ಪೆರ್ಡೂರಿನ “ವಿ ಲವ್ ಹ್ಯೂಮನಿಟಿ ಯುವಕರ ತಂಡ ಅಜ್ಜಿಗೊಂದು ಪುಟ್ಟದೊಂದು ಸೂರು ಕಟ್ಟಿಕೊಡಲು ಮುಂದಾಗಿದ್ದಾರೆ.ಈ ಯುವಕರಿಗೆ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಕೂಡ ಬೆಂಬಲಕ್ಕೆ ನಿಂತಿದ್ದಾರೆ.
ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಮುತ್ತಜ್ಜಿಗೊಂದು ಸೂರು ಕಟ್ಟಿಕೊಡುವ ಅಭಿಯಾನ ಕೂಡ ಅರಂಭಿಸಿದ್ದಾರೆ.ಲಾಕ್ ಡೌನ್ ಮುಗಿಯೊದರೊಳಗೆ ಅಜ್ಜಿಯ ಕನಸಿನ ಸೂರು ಕಟ್ಟಿ ಮುಗಿಸಲು ಯುವಕರು ಕೂಡ ಪಣ ತೊಟ್ಟಿದ್ದಾರೆ.ಹೀಗಾಗಿ ಮನೆ ಕಟ್ಟಲು ಸಹಾಯ ಧನಕ್ಕಾಗಿ ದಾನಿಗಳ ಮೊರೆ ಹೊಗಿದ್ದಾರೆ.ಅಜ್ಜಿಯ ಕನಸಿನ ಸೂರನ್ನು ಕಟ್ಟಲು ಎಲ್ಲರು ಕೈ ಜೋಡಿಸುವಂತೆ ವಿ ಲವ್ ಹ್ಯೂಮನಿಟಿ ತಂಡ ಮನವಿ ಮಾಡಿಕೊಂಡಿದ್ದಾರೆ.ಸಹಾಯ ಮಾಡಲಿಚ್ಚಿಸುವ ದಾನಿಗಳು ಹಣದ ರೂಪದಲ್ಲಿ ಅಥವಾ ಮನೆ ಕಟ್ಟಲು ಬೇಕಾದ ಸಾಮಗ್ರಿಗಳನ್ನು ನೀಡುವ ಮೂಲಕ ಸಹಾಯ ಮಾಡಬಹುದು. ಅಥವಾ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಬಹುದು.
ತುಕಾರಾಮ್ ನಾಯಕ್: 9845906898
ಸಚಿನ್ ಪಾಡಿಗಾರ:9741359758
ಗೂಗಲ್ ಪೇ, ಫೆÇೀನ್ ಪೇ ಮೂಲಕನೂ ಸಹಾಯ ಮಾಡಬಹುದು.
 


							
							














