ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ : ಸೆ.27ರಂದು ಭಾರತ್ ಬಂದ್ಗೆ ಕರೆ
10 ತಿಂಗಳಿಂದ ದೆಹಲಿಯ ಗಡಿಗಳಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆಕಾಳಜಿ ತೋರಿಸುತ್ತಿಲ್ಲ.ನಿರ್ಲಕ್ಷ್ಯ ತೋರುತ್ತಿದೆ. ಇದರಿಂದ ರೈತರ ಬಗ್ಗೆ ಒಂದು ಕೆಟ್ಟ ವಾತಾವರಣನಿರ್ಮಾಣವಾಗಿದೆ.ಇದರಿಂದ 600 ರಷ್ಟು ರೈತರು ತೀರಿಕೊಂಡಿದ್ದು, ಅವರಿಗೆ ಪರಿಹಾರ ಏನೂ ಕೊಟ್ಟಲ್ಲ. ರೈತರನ್ನು ಸಮಾಧಾನಪಡಿಸುವ ಪ್ರಯತ್ನ ಕೂಡಾ ಸರಕಾರ ಮಾಡಿಲ್ಲ. ಹಾಗಾಗಿ ಸಂಯುಕ್ತ ಕಿಸಾನ್ ಮೋರ್ಚಾ ಇಡೀ ದೇಶಾದ್ಯಂತ ಭಾರತ ಬಂದ್ಗೆ ಕರೆ ಕೊಟ್ಟದೆ. ಅದರ ಪ್ರಯುಕ್ತ ನಾವು ಇಲ್ಲ ಧರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಯ ಜಿಲ್ಲಾಧ್ಯಕ್ಷರಾದ ಬಿ. ಶ್ರೀಧರ ಶೆಟ್ಟಿ ಪುತ್ತೂರಿನಲ್ಲಿ ತಿಳಿಸಿದರು.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹಲವು ಬೇಡಿಕೆಗಳನ್ನು ಮುಂದಿಟ್ಟು ಸತ್ಯಾಗ್ರಹ ಮಾಡಲಿದ್ದೇವೆ. ಕೇಂದ್ರ ಸರಕಾರ ಜಾರಿಗೆ ತಂದ 3 ಕೃಷಿ ಕಾಯ್ದೆಗಳ ರದ್ದತಿ, ವಿದ್ಯುತ್ ಖಾಸಗೀಕರಣ ರದ್ಧತಿ, ಜಮೀನುದಾರನ ಆರ್.ಟಿ.ಸಿ.ಯಲ್ಲಿ ಸಾಲಗಾರರ ಸಾಲವನ್ನು ನಮೂದಿಸಬಾರದು. 400 ಕೆ. ವಿ.ವಿದ್ಯುತ್ ಪ್ರಸರಣ ಯೋಜನೆಯು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೃಷಿಕರ ಭೂಮಿ ಹಾದು ಹೋಗ ಬಾರದು. ರೈತರ ಎಲ್ಲಾ ಸುಸ್ತಿ ಬೆಳೆಸಾಲಗಳ ಮನ್ನಾ ಮಾಡಬೇಕು.ಯಶಸ್ವಿನಿ ಯೋಜನೆ ಮೊದಲಿನ ಹಾಗೆ ಜಾರಿಯಾಗಬೇಕು ಇತ್ಯಾದಿ ಬೇಡಿಕೆ ಮುಂದಿಟ್ಟುಕೊಂಡು ಧರಣಿ ಸತ್ಯಾಗ್ರಹ ಮಾಡಲಿದ್ದೇವೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ರೈತ ಸಂಘ ದ ಪ್ರದಾನ ಕಾರ್ಯದರ್ಶಿ ಈಶ್ವರ ಭಟ್ಟ, ಹೊನ್ನಪ್ಪ ಗೌಡ, ವಲಯ ಅಧ್ಯಕ್ಷ ಶೇಖರ ರೈ ಕುಂಬ್ರ, ಪುಣಚ ವಲಯ ಅಧ್ಯಕ್ಷ ಇಸುಬು ಪುಣಚ ಉಪಸ್ಥಿತರಿದ್ದರು.


















