ಅಮೆರಿಕ ; ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ವಿಮಾನ
![](https://v4news.com/wp-content/uploads/2023/11/1700564527974742-0.jpg)
ಅಮೆರಿಕ ನೌಕಾಪಡೆಯ ಬೃಹತ್ ಕಣ್ಗಾವಲು ವಿಮಾನವೊಂದು ರನ್‍ವೇಯಲ್ಲಿ ನಿಯಂತ್ರಣ ಕಳೆದುಕೊಂಡು ಸಮುದ್ರಕ್ಕೆ ಬಿದ್ದ ಘಟನೆ ನಡೆದಿದೆ. ವಿಮಾನದಲ್ಲಿ 9 ಜನರಿದ್ದು, ಎಲ್ಲರೂ ಈಜಿ ದಡ ತಲುಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಮಾನ ಸಮುದ್ರದಲ್ಲಿ ತೇಲುತ್ತಿದ್ದ ದೃಶ್ಯ ದೊರೆತಿದೆ. ಹವಾಯಿ ಮೆರೈನ್ ಕಾರ್ಪ್ಸ್ ಬೇಸ್‍ನಲ್ಲಿ ಈ ಘಟನೆ ನಡೆದಿದೆ. ಈ ಅಪಘಾತವನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.ಘಟನೆ ತಿಳಿದ ತಕ್ಷಣ ಕೋಸ್ಟ್ ಗಾರ್ಡ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಎಲ್ಲಾ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅವರು ತಾವಾಗಿಯೇ ಈಜಿ ದಡ ತಲುಪಿದರು.
![](https://v4news.com/wp-content/uploads/2023/11/WhatsApp-Image-2023-11-22-at-10.54.37-1024x1024.jpeg)