ಕೂಳೂರು ರಾ.ಹೆ. ಅವ್ಯವಸ್ಥೆ ಖಂಡಿಸಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ನಾಗರಿಕ ಹಿತರಕ್ಷಣಾ ಸಮಿತಿ ಕೂಳೂರು ಇದರ ವತಿಯಿಂದ ಹೊಂಡ ಗುಂಡಿ ತಕ್ಷಣ ಮುಚ್ಚಿ ಹಾಗೂ 2 ವರ್ಷದಿಂದ ಅರ್ಧಕ್ಕೆ ನಿಂತಿರುವ ಕೂಳೂರು ಹೊಸ ಸೇತುವೆ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಈ ಬಗ್ಗೆ ನಾಗರೀಕ ಹಿತರಕ್ಷಣಾ ಸಮಿತಿಯ ಕೂಳೂರಿನ ಅಧ್ಯಕ್ಷರಾದ ವಿಜಿ ಗುರುಚಂದ್ರ ಹೆಗ್ಡೆ ಅವರು ಮಾತನಾಡಿ, ಎನ್‍ಹೆಚ್ 66ಲ್ಲಿ ಅವೈಜ್ಞಾನಿ ಕಾಮಗಾರಿ ಹಾಗೂ ಕೂಳೂರು ಹೊಸ ಸೇತುವೆ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಹೆದ್ದಾರಿ ಸರಿಪಡಿಸದೇ ಇದ್ದಲ್ಲಿ ಉಗ್ರ ರೀತಿಯ ಹೋರಾಟದ ಎಚ್ಚರಿಕೆಯನ್ನು ನೀಡಿದರು. ಪ್ರತಿಭಟನೆಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಕೂಳೂರಿನ ಪ್ರಮುಖರು ಸ್ಥಳೀಯರು ಪಾಲ್ಗೊಂಡಿದ್ದರು.

manjushree silk

Related Posts

Leave a Reply

Your email address will not be published.