ಬಿಜೆಪಿ ಕಾರ್ಯಕರ್ತನ ಮೇಲೆ ಮಾರಕಾಯುಧಗಳಿಂದ ಹಲ್ಲೆಗೆ ಯತ್ನ : ನಟೋರಿಯಸ್ ಕ್ರಿಮಿನಲ್ ಗಳಿಗೆ ಸುಪಾರಿ ನೀಡಿದ ಸ್ಥಳೀಯ ಕಾಂಗ್ರೆಸ್ ಮುಖಂಡ

ಉಡುಪಿ : ಇತ್ತೀಚೆಗೆ ಉಡುಪಿ ಜಿಲ್ಲೆಯ ಉದ್ಯಾವರದ ಬೊಳ್ಜೆ ಪರಿಸರದಲ್ಲಿ ಬಿಜೆಪಿ ಕಾರ್ಯಕರ್ತ ರಕ್ಷಿತ್ ಸಾಲಿಯಾನ್ ಮೇಲೆ ಅಪರಿಚಿತರಾದ ಮೂವರು ಮಾರಕಾಯುಧಗಳಿಂದ ಹಲ್ಲೆ ಮಾಡಲು ಯತ್ನಿಸಿದ ಘಟನೆ ವರದಿಯಾಗಿತ್ತು. ಈ ಬಗ್ಗೆ ಉಡುಪಿ ಜಿಲ್ಲೆಯ ಕಾಪು ಪೋಲಿಸ್ ಠಾಣೆಯುಲ್ಲಿ ದೂರು ದಾಖಲಾಗಿದ್ದು ಈ ಕುರಿತಂತೆ ಪೋಲೀಸರು ವಿಚಾರಣೆ ನಡೆಸಲು ಪ್ರಾರಂಭಿಸಿದಾಗ ಈ ಹಿಂದೆ ಹಲವಾರು ದರೋಡೆ, ಕಳ್ಳತನ ಕೊಲೆ ಇತ್ಯಾದಿ ಆರೋಪಗಳನ್ನು ಹೊತ್ತು, ಇದೀಗ ಜಾಮೀನಿನ ಮೇಲೆ ತಿರುಗಾಡುತ್ತಿರುವ ವಾದಿರಾಜ, ಅಭಿಶೇಕ್, ಮತ್ತು ರಂಜಿತ್ ಎಂಬವರು ಈ‌ ಕೃತ್ಯ ಎಸಗಿರುವುದು ಕಂಡು ಬಂದಿದೆ. ತಾವು ಮಾಡಿದ ಕೃತ್ಯಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡ ನಿತಿನ ಜೆ ಸಾಲಿಯಾನ್ ಎಂಬವರು ಕಾರಣರಾಗಿದ್ದು ತಮಗೆ ಸುಪಾರಿ ಕೊಟ್ಟಿರುವುದಾಗಿ ಬಂಧಿತರು ಹೇಳಿಕೆ ನೀಡಿದ್ದು ಮೂರ್ನಾಲ್ಕು ದಿನ ಕಳೆದರೂ ಇನ್ನೂ ಕೂಡಾ ನಿತಿನ್ ಸಾಲ್ಯನ್ ಅನ್ನು ಬಂಧಿಸಲಾಗಿಲ್ಲ.

ಇದೀಗ ರಕ್ಷಿತ್ ಕೋಟ್ಯನ್ ಹಾಗೂ ಅವರ ಕುಟುಂಬಕ್ಕೆ ನಿತಿನ್ ನಿಂದ ಜೀವ ಬೆದರಿಕೆ ಇದ್ದು ನಟೋರಿಯಸ್ ಕ್ರಿಮಿನಲ್ ಗಳಿಗೆ ಸುಪಾರಿ ನೀಡಿದ ನಿತಿನ್ ಜೆ ಸಾಲಿಯನ್ ಇವರನ್ನು ಕೂಡಲೇ ಬಂಧಿಸಬೇಕಾಗಿ ಉಡುಪಿ ಪೊಲೀಸ್ ಅಧೀಕ್ಷಕರಿಗೆ ಕಾಪು ಮಂಡಲ ಬಿಜೆಪಿ ಹಾಗೂ ಉದ್ಯಾವರ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಲಾಲಾಜಿ ಆರ್ ಮೆಂಡನ್, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್, ಉಡುಪಿ ಜಿಲ್ಲಾ ಬಿಜೆಪಿ ಮಹಿಳಾಮೋರ್ಚ ಅಧ್ಯಕ್ಷೆ ವೀಣಾ ಶೆಟ್ಟಿ, ಜಿಲ್ಲಾ ಪ್ರಕೊಷ್ಠಗಳ ಸಂಯೋಜಕ ವಿಜಯ್ ಕುಮಾರ್, ಉದ್ಯಾವರ ಮಹಾಶಕ್ತಿಕೇಂದ್ರದ ಅಧ್ಯಕ್ಷ ರವಿ ಕೋಟ್ಯನ್, ಕಾಪು ಮಂಡಲ ಕಾರ್ಯದರ್ಶಿ ರಾಜೇಶ್ ಕುಂದರ್, ಪ್ರಮುಖರಾದ ಸಂತೋಷ್ ಸುವರ್ಣ, ಜಿತೇಂದ್ರ ಶೆಟ್ಟಿ, ಪ್ರಕಾಶ್ ಕುಮಾರ್, ರಮಾನಂದ, ಪ್ರವೀಣ್ ಪೂಜಾರಿ, ಉದ್ಯಾವರ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರಿಯಾನ್, ಯುವಮೋರ್ಚ ಅಧ್ಯಕ್ಷ ಸಚಿನ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.