ಮಂಗಳೂರು : ಶ್ರೀ ವೀರನಾರಾಯಣ ಕ್ಷೇತ್ರದ ಬ್ರಹ್ಮ ಕಳಸದ ಅಭಿನಂದನ ಸಭೆ
ಮಂಗಳೂರು : ಗ್ರಾಮದ ದೇವಸ್ಥಾನ ಅಭಿವೃದ್ಧಿಗೊಂಡಾಗ ಊರು ಅಭಿವೃದ್ಧಿಗೊಳ್ಳುತ್ತದೆ, ಜನ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಲು ಮತ್ತಷ್ಟು ಪ್ರೇರಣೆ ಶಕ್ತಿಯಾಗುತ್ತದೆ, ಕುಲಾಲ ಸಮಾಜದ ಬಂಧುಗಳು ಶ್ರದ್ದೆಯಿಂದ ತ್ಯಾಗದ ಭಾವನೆಯಿಂದ ಸೇವೆಯನ್ನು ಮಾಡಿ ದೇವರಿಗೆ ಬ್ರಹ್ಮಕಲಸವನ್ನು ಮಾಡಿದ್ದಾರೆ, ಇದು ಸಮಾಜದ ಅಭಿವೃದ್ಧಿಗೆ ಕಳಸಅಭಿಷೇಕವಾಗಿದೆ,ಕ್ಷೇತ್ರವನ್ನು ಉಳಿಸಿಬೆಳೆಸಿಕೊಂಡು ಹೋಗುವ ಜವಾಬ್ದಾರಿ ಇಡೀ ಸಮಾಜಕ್ಕಿದೆ ಎಂದು ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಅವರು ಜೂನ್ 11ರಂದು ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ದಲ್ಲಿ 12 ದಿನಗಳು ಪರ್ಯಂತ ನಡೆದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಯಶಸ್ವಿಗೆ ಶ್ರಮಿಸಿದ ಭಕ್ತರಿಗೆ ಅಭಿನಂದನೆ ಸಲ್ಲಿಸುವ ಅಭಿನಂದನ ಕಾರ್ಯಕ್ರಮದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು, ದೇವಸ್ಥಾನದ ಆಡಳಿತ ಮೊಕ್ತೇಸರರು ಪುರುಷೋತ್ತಮ ಕುಲಾಲ್ ಕಲ್ಪಾವಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಸಮಾಜ ಬಂಧುಗಳಲ್ಲಿ ಆಧ್ಯಾತ್ಮಿಕದ ಬೆಳಕು ಪ್ರಕಾಶಮಾನವಾಗಿದೆ, ಸಂಘಟನೆ ಬಲಿಷ್ಠಗೊಂಡಿದೆ ಕಾರ್ಯಕರ್ತರ ಶ್ರಮ ಯಶಸ್ವಿಯಾಗಿದೆ ಎಂದು ನುಡಿದರು,
ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡುತ್ತಾ ಬ್ರಹ್ಮಕಲಸದಲ್ಲಿ ಪಾಲ್ಗೊಂಡ ಭಕ್ತರೆಲ್ಲರೂ ಕುಲಾಲ ಸಮಾಜದ ತ್ಯಾಗ ದ ಸೇವಾ ಕಾರ್ಯಗಳನ್ನು ಪ್ರಶಾಂಸಿಸಿದ್ದಾರೆ ಎಂದರು, ಬ್ರಹ್ಮಕಲಕೋತ್ಸವ ಸಮಿತಿಯ ಸಮಿತಿಯ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್ ಮಾತನಾಡುತ್ತಾ ಲಕ್ಷಾಂತರ ಭಕ್ತರನ್ನು ಸಂತೃಪ್ತಿ ಗೊಳಿಸಿದ ಎಲ್ಲಾ ಸೇವಕರು ತಾಳ್ಮೆ ಮತ್ತು ಶಿಸ್ತಿನಿಂದ ಸೇವೆ ಮಾಡಿದ್ದಾರೆ ಎಂದು ನುಡಿದರು
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಾಮೋದರ ಎ. ಮಾತನಾಡಿ ಸೇವಾಕತ್ತರೆಲ್ಲರೂ ಸೇವೆಯಲ್ಲಿಯೇ ಭಗವಂತನನ್ನು ಸಾಕ್ಷಾತ್ಕರಿಸಿದ್ದಾರೆ ಇದರಿಂದಾಗಿ ಎಲ್ಲಾ ಕಾರ್ಯಗಳು ಯಶಸ್ವಿಗೊಂಡಿದೆ ಎಂದು ನುಡಿದರು, ವೇದಿಕೆಯಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಸುಂದರ ಕುಲಾಲ್ ಶಕ್ತಿನಗರ , ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಎಂ.ಪಿ. ಬಂಗೇರ ಬಿಜೈ, ಕುಲಾಲರ ಮಾತೃಸಂಘದ ಕಾರ್ಯದರ್ಶಿ ಸದಾಶಿವ ಕುಲಾಲ್ . ದೇವಸ್ಥಾನದ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮನೋಜ್, ಮಾತೃಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಜಲಜಾಕ್ಷಿ ಕುಲಾಲ್ ಪಿ.ಬ್ರಹ್ಮಕಲಸದ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರಿಧರ ಜೆ. ಮೂಲ್ಯ, ಕುಲಾಲರ ಮಾತೃಸಂಘದ ಸೇವಾದಳದ ದಳಪತಿ ಕಿರಣ್ ಅಟ್ಲೂರು, ಬೆಂಗಳೂರು ಸಮಿತಿಯ ಪುರುಷೋತ್ತಮ್ ಚೆಂಡೇಲ್, ಮುಂಬೈ ಸಮಿತಿಯ ಅಧ್ಯಕ್ಷ, ಬಿ. ದಿನೇಶ್ ಕುಲಾಲ್, ಉಪಸ್ಥಿತರಿದ್ದರು. ಬ್ರಹ್ಮಕಲಶ ದ ಸಾಂಸ್ಕೃತಿಕ ಸಮಿತಿಯ ಪ್ರವೀಣ್ ಬಸ್ತಿ ನವೀನ್ ಕುಲಾಲ್ ಪುತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು, ಗಿರಿಧರ ಮೂಲ್ಯ ಧನ್ಯವಾದ ನೀಡಿದರು,
ಕ್ಷೇತ್ರದಲ್ಲಿ ವಿಶೇಷ ಪೂಜೆಯನ್ನು ದೇವರಿಗೆ ಸಲ್ಲಿಸಲಾಯಿತು