ಹಿರಿಯ ದೈವ ಪಾತ್ರಿ ಲಾಡಿ ಅಣ್ಣು ಶೆಟ್ಟಿ ನಿಧನ
ಮೂಡುಬಿದಿರೆ: ಹಿರಿಯ ದೈವಪಾತ್ರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಾಡಿ ಅಣ್ಣು ಶೆಟ್ಟಿ (78ವ)ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಲಾಡಿ ಹಜಂಕಾಲಬೆಟ್ಟು, ಮಾರ್ನಾಡು, ತೋಡಾರು ಸಹಿತ ಜಿಲ್ಲೆಯ ಹಲವಾರು ದೈವಸ್ಥಾನಗಳಲ್ಲಿ ದೈವಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಮಾರ್ನಾಡು ಹೊಯಿಪಾಲಬೆಟ್ಟುವಿನ ಅನುವಂಶಿಕ ಮೊಕ್ತೇಸರ ರಾಜೇಶ್ ಬಲ್ಲಾಳ್ ಬೆಳಿಯಾರು ಗುತ್ತು, ಲಾಡಿ ಗುತ್ತಿನ ಪಾಶ್ವ ೯ನಾಥ ಬಲ್ಲಾಳ್ ಸಂತಾಪ ಸೂಚಿಸಿದ್ದಾರೆ.