ಹಿಂದುತ್ವದ ಹೆಸರಿನಲ್ಲಿ ಗೆದ್ದು ಹಿಂದೂಗಳಿಗೆ ದ್ರೋಹ ಬಗೆಯುವ ಬಿಜೆಪಿಯನ್ನು ಸೋಲಿಸಿ – ಅನುಪಮ ಶೆಣೈ

ಮಂಗಳೂರು: “10% ಸರಕಾರ ಎಂದು ಹಿಂದಿನ ಸರಕಾರವನ್ನು ದೂಷಿಸಿ ಹಿಂದುತ್ವದ ಹೆಸರಿನಲ್ಲಿ ಡಬಲ್ ಇಂಜಿನ್ ಸರಕಾರ ರಚಿಸಿ ಬ್ರಷ್ಟಾಚಾರವನ್ನು 40% ಗೆ ತಲುಪಿದ ಮೋದಿಯವರು ಇಂದು ಬ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲಾ ಕಡೆ ಭ್ರಷ್ಟರಿಗೆ ಪ್ರಾಶಸ್ತ್ಯ ನೀಡುವುದು ಕಾಣುತ್ತಿದೆ” ಎಂದು ಭ್ರಷ್ಟಾಚಾರದ ವಿರುದ್ಧ ಹೋರಾಡಿ ತನ್ನ ಡಿವೈಎಸ್ಪಿ ಪದವಿಯನ್ನು ತ್ಯಾಗ ಮಾಡಿದ್ದ ಅನುಪಮಾ ಶೆಣೈ ಅವರು ಹೇಳಿದ್ದಾರೆ. ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ 40 ಯೋಧರು ಸಾಯಲು ಮೋದಿ ಸರಕಾರದ ನಿರ್ಲಕ್ಷವೇ ಕಾರಣ ಎಂದು ಇತ್ತೀಚೆಗೆ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಹೇಳಿರುವುದನ್ನು ಉಲ್ಲೇಖಿಸಿದ ಅವರು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಮಂಗಳೂರು ದಕ್ಷಿಣ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಂತೋಷ ಕಾಮತ್ ಅವರ ಪರವಾಗಿ ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಎದುರು ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಅಭ್ಯರ್ಥಿ ಸಂತೋಷ ಕಾಮತ್ ಅವರು ಮಾತನಾಡಿ ಪ್ರಾಮಾಣಿಕ, ಸ್ವಚ್ಛ, ಬ್ರಷ್ಟಾಚರ ರಹಿತ ಆಡಳಿತ ನೀಡುವ ಆಶ್ವಾಸನೆ ನೀಡಿದರು.

ವೆಂಕಟೇಶ್ ಬಾಳಿಗಾ ಮತ್ತು ಜೆ.ಪಿ. ರಾವ್ ಮತ ಯಾಚಿಸಿದರು.ಪ್ರಾಸ್ತಾವಿಕ ಮಾತುಗಳನ್ನು ಆಡಿದ ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ತಾವರ್ಸ್ ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಆಗುತ್ತಿರುವ ಅನ್ಯಾಯಗಳನ್ನು ವಿವರಿಸಿದರು. ಜೇಮ್ಸ್ ಡೇಸಾ,ಪ್ರಸಾದ್ ಬಜೀಲಕೆರಿ,ನಝೀರ್ ಅಹ್ಮದ್ ಮತ್ತಿತರರು ಉಪಸ್ಥತರಿದ್ದರು. ಬಳಿಕ ಪರಿಸರದಲ್ಲಿ ಮನೆ ಮನೆ ಪ್ರಚಾರ ಜರಗಿತು.

Related Posts

Leave a Reply

Your email address will not be published.