ವಿಟ್ಲದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಇದರ ವತಿಯಿಂದ ಮಹಿಳಾ ಘಟಕದ ನೇತೃತ್ವದಲ್ಲಿ ಆಟಿಡೊಂಜಿ ದಿನ ವಿಟ್ಲದ ಶಾಂತಿನಗರ ಅಕ್ಷಯ ಸಭಾಭವನದಲ್ಲಿ ನಡೆಯಿತು. ಪುತ್ತೂರು ಉಪತಹಶೀಲ್ದಾರ್ ಸುಲೋಚನಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಸತ್ಕಾರ್ಯಗಳಿಗೆ ಸ್ಪಂದಿಸಬೇಕು. ಹಳ್ಳಿಯಲ್ಲಿ ಮಳೆಗಾಲಕ್ಕೆ ಅವಶ್ಯವಿರುವ ವಿವಿಧ ವಸ್ತುಗಳನ್ನು ಸಂಗ್ರಹಿಸಿಡುವುದು ವಾಡಿಕೆ. ಆಟಿ ತಿಂಗಳ ಕಾಲಕ್ಕೆ ಇದು ಪೂರ್ವಸಿದ್ಧತೆ. ಗೌಡ ಸಮುದಾಯ ಹಿಂದಿನ ಸಂಪ್ರದಾಯ ಉಳಿಸಬೇಕು ಎಂದು ಹೇಳಿದರು.

ಬೆಳ್ತಂಗಡಿ ಪದವಿ ಪೂರ್ವ ಕಾಲೇಜ್ ನ ಉಪನ್ಯಾಸಕಿ ನಮಿತಾ ಪುಷ್ಪರಾಜ್ ಕೊಂಗಲಾಯಿ ಅವರು ಉಪನ್ಯಾಸ ನೀಡಿದರು. ವಿಟ್ಲ ಮಹಿಳಾ ಘಟಕದ ಅಧ್ಯಕ್ಷೆ ಜಲಜಾಕ್ಷಿ ಬಾಲಕೃಷ್ಣ ಗೌಡ ಪೊನ್ನೆತ್ತಡಿ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಬಾಂಧವರಿಂದ ಜನಪದ ಹಾಡು ಹಾಗೂ ನೃತ್ಯ ನಡೆಯಿತು. ಈ ಸಂದರ್ಭ ಗೌಡ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಮೋಹನ್ ಕಾಯಾರ್ ಮಾರ್ , ಗೌರವಾಧ್ಯಕ್ಷ ಕೆ.ಲಿಂಗಪ್ಪ ಗೌಡ ಶುಭೋದಯ ಅಳಿಕೆ, ವಿಟ್ಲ ಯುವ ಘಟಕ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ವಿಶ್ವನಾಥ ವರಪ್ಪಾದೆ, ಉಪಸ್ಥಿತರಿದ್ದರು. ಧರ್ಮವತಿ, ಧರ್ಣಮ್ಮ ಜಲಕದ ಗುಂಡಿ, ದಿವ್ಯಾ ವಿಶ್ವನಾಥ, ಜಯಲಕ್ಷ್ಮೀ ಮಹೇಶ್ ಅಳಿಕೆ ಮತ್ತು ಮಲ್ಲಿಕಾ ಲಿಂಗಪ್ಪ ಗೌಡ ಅಳಿಕೆ ಭಾಗವಹಿಸಿದ್ದರು.