Home Articles posted by v4team (Page 3)

ಎಂಆರ್‌ಪಿಎಲ್‌ಗೆ ರಿಫೈನರಿ ಟೆಕ್ನಾಲಜಿಯ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಇನ್ನೋವೇಷನ್ ಪ್ರಶಸ್ತಿ

ಮಂಗಳೂರು: ಹೈದರಾಬಾದ್‌ನಲ್ಲಿ ನಡೆದ 28ನೇ ಎನರ್ಜಿ ಟೆಕ್ನೋಲಜಿ ಮೀಟ್-2025ರಲ್ಲಿ ದೇಶದ ಪ್ರಮುಖ ಪೆಟ್ರೋಲಿಯಂ ರಿಫೈನರಿಗಳಲ್ಲೊಂದಾದ ಎಂಆರ್‌ಪಿಎಲ್ 2024-25ನೇಸಾಲಿನ ರಿಫೈನರಿ ಟೆಕ್ನಾಲಜಿಯಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಇನ್ನೋವೇಷನ್ ಅವಾರ್ಡ್ ಗೆದ್ದುಕೊಂಡಿದೆ. ಈ ಮೂಲಕ ಕಂಪೆನಿಯು ಭಾರತ ಸರಕಾರ ಪ್ರಾಯೋಜಿತ ನಾಲ್ಕನೇ ಪ್ರಶಸ್ತಿಗಳನ್ನು

ನ. 28 : ಪ್ರಧಾನಿ ಮೋದಿ ಉಡುಪಿ ಮಠಕ್ಕೆ ಭೇಟಿ

ಉಡುಪಿ : ಪ್ರಧಾನಿ ನರೇಂದ್ರ ಮೋದಿ ಅವರು ನ. 28 ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಮಠಕ್ಕೆ ಆಗಮಿಸಲಿರುವ ಮೋದಿಯವರು ದೇವರ ದರ್ಶನ ಪಡೆದು ಬಳಿಕ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಭೇಟಿಯಾಗಲಿದ್ದಾರೆ. ಗೀತಾ ಜಯಂತಿ ಯ ಹಿನ್ನೆಲೆಯಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ – ಬೃಹತ್ ಗೀತೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಲಂಡನ್ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಡಾ. ಪ್ರಭಾ ಶೆಟ್ಟಿ ಆಯ್ಕೆ

ಲಂಡನ್ ಬಂಟ್ಸ್ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಡಾ. ಪ್ರಭಾ ಶೆಟ್ಟಿ, ಕಾರ್ಯದರ್ಶಿಯಾಗಿ ಜೀವಿತ ಚೌಟ, ಕೋಶಾಧಿಕಾರಿಯಾಗಿ ಧೀರಜ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅರ್ಚನಾ ಶೆಟ್ಟಿ, ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಅಭಿನಂದನಾ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲತಾ ಶೆಟ್ಟಿ, ಸಬೀನಾ ಶೆಟ್ಟಿ, ಅಕ್ಷತಾ ಶೆಟ್ಟಿ, ದಿವ್ಯ ಶೆಟ್ಟಿ, ರಮೇಶ್ ಶೆಟ್ಟಿ, ಸೊಲ್ಮೆ ಶೆಟ್ಟಿ, ಧ್ವನಿ ಹೆಗ್ಡೆ ಆಯ್ಕೆಯಾಗಿದ್ದಾರೆ.

ಶಿಸ್ತಿನೊಂದಿಗೆ ಸಕಾರಾತ್ಮಕ ಮನೋಭಾವವೇ ಯಶಸ್ಸಿನ ಕೀಲಿಕೈ: ವಿವೇಕ್ ಆಳ್ವ

ಮೂಡುಬಿದಿರೆ: ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯಲ್ಲಿ ವಿದ್ಯಾರ್ಥಿಗಳು ತೊಡಗುವುದರಿಂದ ಶಿಸ್ತಿನ ಜೀವನಶೈಲಿಯನ್ನು ಬೆಳೆಸಿಕೊಳ್ಳಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.ಅವರು ಮೂಡುಬಿದಿರೆ ಕನ್ನಡಭವನದಲ್ಲಿ ಸೋಮವಾರ ನಡೆದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಷ್ಟ್ರೀಯ ಪ್ರಧಾನ ಕಚೇರಿ, ರಾಜ್ಯ ಪ್ರಧಾನ ಕಚೇರಿ, ದಕ್ಷಿಣ ಕನ್ನಡ ಘಟಕ, ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ ಸಂಯುಕ್ತ ಆಶ್ರಯದಲ್ಲಿ ನಡೆದ

ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಆಳ್ವಾಸ್‌ಗೆ 20ನೇ ಬಾರಿಗೆ ಅವಳಿ ಪ್ರಶಸ್ತಿ

ಮೂಡಬಿದಿರೆ: ಮಂಗಳೂರಿನ ಬೆಸೆಟ್ ರಾಷ್ಟ್ರಿಯ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ತಂಡವು 20ನೇ ಬಾರಿಗೆ ಅವಳಿ ಚಾಂಪಿಯನ್ಸ್ ಪ್ರಶಸ್ತಿಯನ್ನು ಪಡೆಯಿತು.ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಮಂಗಳೂರು ತಾಲೂಕನ್ನು ಪ್ರತಿನಿಧಿಸಿದ ಬೆಸೆಂಟ್ ರಾಷ್ಟ್ರಿಯ ಪದವಿಪೂರ್ವ ಕಾಲೇಜು ತಂಡವನ್ನು 35-13, 35-14 ಅಂಕಗಳಿAದ ಸೋಲಿಸಿ ಪ್ರಶಸ್ತಿಯನ್ನು

ಕಿನ್ನಿಗೋಳಿಯಲ್ಲಿ ಐದು ಮಹಾಶಕ್ತಿ ಕೇಂದ್ರಗಳ ಬಿಎಲ್ ಬಿ-2 ಕಾಯಾ೯ಗಾರ

ಮೂಡುಬಿದಿರೆ : ಬಿಜೆಪಿ ಮೂಲ್ಕಿ – ಮೂಡುಬಿದಿರೆ ಮಂಡಲದ ಕಿನ್ನಿಗೋಳಿ, ಮೂಲ್ಕಿ, ಹಳೆಯಂಗಡಿ, 62ನೇ ತೋಕೂರು ಹಾಗೂ ಬಜ್ಪೆ ಮಹಾಶಕ್ತಿಕೇಂದ್ರ ವ್ಯಾಪ್ತಿಯ ಬಿಎಲ್ ಎ-2 ಕಾರ್ಯಾಗಾರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಬುಧವಾರ ನಡೆಯಿತು. ದ. ಕ ಲೋಕಸಭಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಎ.ಕೋಟ್ಯಾನ್, ಜಿಲ್ಲಾ‌ ಬಿಜೆಪಿ ಉಪಾಧ್ಯಕ್ಷರಾದ ಜಯಂತ್ ಕೋಟ್ಯಾನ್, ಸುನೀಲ್ ಅಳ್ವ, ಶಾಂತಿಪ್ರಸಾದ್ ಹೆಗ್ಡೆ, ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಮಂಡಲ

ಚೆಕ್ ಬೌನ್ಸ್ : ಆರೋಪಿಗೆ ನ್ಯಾಯಾಂಗ ಬಂಧನ

ಮೂಡುಬಿದಿರೆ : ಕಡಿಮೆ ಬಡ್ಡಿಯಲ್ಲಿ ಹೆಚ್‌.ಡಿ.ಎಫ್.ಸಿ.ಬ್ಯಾಂಕಲ್ಲಿ ಲೋನ್ ಮಾಡಿ ಕೊಡುತ್ತೇನೆಂದು ನಂಬಿಸಿ ವ್ಯಕ್ತಿಯೋರ್ವರಿಂದ ಹಣ ಪಡೆದು ಪರಾರಿಯಾಗಿದ್ದ ವ್ಯಕ್ತಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಟ್ವಾಳ ಕಲ್ಲಡ್ಕ ಬಾಳ್ತಿಲದ ಶರತ್ ಕುಮಾರ್ ಗೆ ಮೂಡುಬಿದಿರೆ ನ್ಯಾಯಾಲಯವು ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. 2021 ರಲ್ಲಿ ಶರತ್ ಕುಮಾರ್ ತಾನು ಎಚ್.ಡಿ.ಎಫ್.ಸಿ.ಬ್ಯಾಂಕಲ್ಲಿ ಉದ್ಯೋಗಿಯಾಗಿದ್ದು ಕಡಿಮೆ ಬಡ್ಡಿಯಲ್ಲಿ ಲೋನ್ ಮಾಡಿ

ತುಳುನಾಡಿನ ಮೌಖಿಕ ಸಾಹಿತ್ಯ : ಇತಿಹಾಸ, ಪರಂಪರೆಯ ಕೊಂಡಿಗಳು ; ಡಾ .ತುಕರಾಮ ಪೂಜಾರಿ

ಮಂಗಳೂರು : ತುಳುನಾಡಿನ ಮೌಖಿಕ ಸಾಹಿತ್ಯಿಕ ರೂಪಕಗಳನ್ನು ಉಲ್ಲೇಖ ಮಾಡದೆ ತುಳುನಾಡಿನ ಇತಿಹಾಸವನ್ನು ಕಟ್ಟಿಕೊಡಲು ಸಾಧ್ಯವಿಲ್ಲ ಎಂದು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ತುಕರಾಮ ಪೂಜಾರಿ ಅವರು ಹೇಳಿದರು.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕೂಳೂರಿನ ಯೆನೆಪೋಯ ಕಾಲೇಜಿನ ಭಾಷಾಶಾಸ್ತ್ರ ವಿಭಾಗ ಹಾಗೂ ಸಾಹಿತ್ಯ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ‘ತುಳು ಸಾಹಿತ್ಯ ಸಾಂಸ್ಕೃತಿಕ ಬದುಕು’ ವಿಚಾರ ಕೂಟದಲ್ಲಿ ಅವರು ದಿಕ್ಸೂಚಿ ಭಾಷಣ

ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ “ಪದವಿ ಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ

ಉಡುಪಿ:ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ರಜತಾದ್ರಿ, ಮಣಿಪಾಲ, ಉಡುಪಿ ಹಾಗೂ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ದಿನಾಂಕ 29-10-2025 ರಂದು ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ “ಪದವಿ ಪೂರ್ವ” ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ 2025-26 ನಡೆಯಿತು. ಪದವಿ ಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ 2025-26″ ಕಾರ್ಯಕ್ರಮದಲ್ಲಿ ಕಾಪು

ಮಲ್ಲಾರು ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಎಂ.ಆ‌ರ್.ಪಿ.ಎಲ್‌ (ಸಿಎಸ್ಆರ್) ಫಂಡ್‌ನಿಂದ 12.45 ಲಕ್ಷ ರೂಪಾಯಿ ಮಂಜೂರು

ಕಾಪು:ಕಾಪು ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ಮಲ್ಲಾರು ಆಯುಷ್ಮಾನ್ ಆರೋಗ್ಯ ಕೇಂದ್ರದ ದುರಸ್ತಿ ಕಾಮಗಾರಿಗಳಿಗೆ ಶಾಸಕರ ಶಿಫಾರಸ್ಸಿನ ಮೇರೆಗೆ ಎಂ.ಆ‌ರ್.ಪಿ.ಎಲ್‌ (ಸಿಎಸ್ಆರ್) ಫಂಡ್‌ನಿಂದ 12.45ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು, ಈ ಕಾಮಗಾರಿಗೆ ಇಂದು ದಿನಾಂಕ 29-10-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಹರೀಣಾಕ್ಷಿ ದೇವಾಡಿಗ, ಉಪಾಧ್ಯಕ್ಷರಾದ ಸರೀತಾ ಶಿವಾನಂದ, ಸ್ಥಾಯಿ