Home Articles posted by v4team (Page 4)

ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ – ಲತಾಶ್ರೀ ಸುಪ್ರೀತ್

ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ ಇದರ 2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, 43 ವರ್ಷದ ಇತಿಹಾಸವಿರುವ ಜೇಸಿಐ ಭಾರತ ವಲಯ 15ರ ಪ್ರತಿಷ್ಠಿತ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ 2026ನೇ ಸಾಲಿನಲ್ಲಿ ಪ್ರಪ್ರಥಮ ಮಹಿಳಾ ಅಧ್ಯಕ್ಷರಾಗಿ ಸಾಹಿತಿ, ಲೇಖಕಿ, ಸಂಘಟಕಿ, ಜೇಸಿ. ಲತಾಶ್ರೀ ಸುಪ್ರೀತ್ ಮೋಂಟಡ್ಕರವರು 44ನೇ ಅಧ್ಯಕ್ಷರಾಗಿ

ಕೊರಗ ಸಮುದಾಯದ ಯುವ ಜನತೆಗೆ ಸರ್ಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿಗೆ ಒತ್ತಾಯಿಸಿ ಧರಣಿ-ಸತ್ಯಾಗ್ರಹ

ಕಾಪು: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ವತಿಯಿಂದ ಕೊರಗ ಸಮುದಾಯದ ಯುವ ಜನತೆಗೆ ಸರ್ಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿ ಒದಗಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ-ಸತ್ಯಾಗ್ರಹ ನಡೆಯುತ್ತಿದ್ದು, ಇಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭೇಟಿ ನೀಡಿ ಬೇಡಿಕೆಯ ಬಗ್ಗೆ ಚರ್ಚಿಸಿ ಮನವಿಯನ್ನು ಸ್ವೀಕರಿಸಿದರು.

ಶಿಕ್ಷಣ ತಜ್ಞರು, ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ನಿಟ್ಟೆ. ವಿನಯ್ ಹೆಗ್ಡೆ ಅವರಿಗೆ ಶಿರ್ವದಲ್ಲಿ ಶ್ರದ್ಧಾಂಜಲಿ ಸಭೆ

ಕಾಪು:ಸಮಾಜ ಸೇವಕರು, ಶಿಕ್ಷಣ ತಜ್ಞರು, ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ನಿಟ್ಟೆ ವಿನಯ್ ಹೆಗ್ಡೆ ಅವರಿಗೆ ವಿಧ್ಯಾವರ್ಧಕ ಸಂಘ (ರಿ.) ಶಿರ್ವದಲ್ಲಿ ಇಂದು ನಡೆದ ಶೃಧ್ಧಾಂಜಲಿ ಸಭೆಯಲ್ಲಿ ಶಾಸಕರು, ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧ್ಯಾವರ್ಧಕ ಸಂಘ ಸಂಚಾಲಕರಾದ ಮಟ್ಟಾರು ರತ್ನಾಕರ್ ಹೆಗ್ಡೆ, ಸದಸ್ಯರುಗಳಾದ ನಿತ್ಯಾನಂದ ಹೆಗ್ಡೆ, ಜಗದೀಶ್ ಅರಸ್,

ಹೊಸ ವರ್ಷದ ಸಂದರ್ಭದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ:ರಾಜ್ಯಾದ್ಯಂತ ಸೇವೆ ನೀಡಲಿರುವ ಇಎಮ್‌ಆರ್‌ಐ ಗ್ರೀನ್ ಹೆಲ್ತ್ ಸರ್ವೀಸಸ್

ಹೊಸ ವರ್ಷಚಾರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನು ತಡೆಯುವ ದೃಷ್ಟಿಯಿಂದ 108 ಆರೋಗ್ಯ ಕವಚ ಅಂಬುಲೆನ್ಸ್, ಇಎಮ್‌ಆರ್‌ಐ EMRI GREEN HEALTH SERVICES ಕರ್ನಾಟಕ ರಾಜ್ಯಾದ್ಯಂತ ಸುಸಜ್ಜಿತಗೊಂಡಿರುತ್ತದೆ. ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆಗಳಲ್ಲಿ ಸರಾಸರಿ ೩೦ರಿಂದ ೩೫ ಪರ್ಸೆಂಟ್ ಅಪಘಾತ ಪ್ರಕರಣಗಳು ವರದಿಯಾಗಿವೆ. 108 ಅಂಬುಲೆನ್ಸ್ ಸೇವೆಯು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಹಕಾರವನ್ನು ಹೊಂದಿರುತ್ತದೆ.

ಕಾಪು ಪುರಸಭೆಯ ಸಾಮಾನ್ಯ ಸಭೆ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ

ಕಾಪು ಪುರಸಭೆಯ ಸಾಮಾನ್ಯ ಸಭೆ ದಿನಾಂಕ 30-12-2025 ರಂದು ಕಾಪು ಪುರಸಭೆಯ ಇಂದಿರಾಗಾಂಧಿ ಸಭಾಂಗಣದಲ್ಲಿ ನಡೆಯಿತು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಕಾಪು ಪುರಸಭೆಯ ವಿವಿಧ ಕಾಮಗಾರಿಗಳ ಪ್ರಗತಿಯ ಬಗ್ಗೆ ಹಾಗೂ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಬಗ್ಗೆ ಚರ್ಚಿಸಿದರು. ಸಭೆಯಲ್ಲಿ ಕಾರ್ಯಸೂಚಿಯಲ್ಲಿ ತಿಳಿಸಿದಂತೆ ಪುರಸಭೆಯ ವಿವಿಧ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ

ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ರೈಲ್ವೆ ಮಾರ್ಗ ವಿದ್ಯುದ್ದೀಕರಣ: ಹರ್ಷ ವ್ಯಕ್ತಪಡಿಸಿದ ಸಂಸದ ಬ್ರಿಜೇಶ್ ಚೌಟ

ಮಂಗಳೂರು: ಅತ್ಯಂತ ಕಠಿಣ ಹಾಗೂ ಸವಾಲಿನ ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ವಿಭಾಗದ 55ಕಿ.ಮೀ. ಮಾರ್ಗದ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿರುವುದು ಈ ಭಾಗದ ಜನರ ದೀರ್ಘಕಾಲದ ರೈಲ್ವೆ ಮೂಲಸೌಕರ್ಯದ ಬೇಡಿಕೆ ಈಡೇರಿಕೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು ಆಗಿದೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ. ಘಾಟ್ ಮಾರ್ಗದ ವಿದ್ಯುದ್ದೀಕರಣ ಯೋಜನೆಯು ನಮ್ಮ ಭಾಗದ ರೈಲ್ವೆ ಮೂಲಸೌಕರ್ಯಗಳ ಪ್ರಗತಿಗೆ ದೊಡ್ಡ ಮಟ್ಟದ ವೇಗ ನೀಡಲಿದ್ದು, ಕರಾವಳಿಗೆ ಸರಕು

ಕವಿ, ಲೇಖಕ, ನಾಟಕಕಾರ ಯೋಗೀಶ್ ಕಾಂಚನ್ ಬೈಕಂಪಾಡಿ ನಿಧನ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರೂ ಆಗಿರುವ ಯಕ್ಷಗಾನ ಕಲಾವಿದ, ಕವಿ,ಲೇಖಕ, ನಾಟಕಕಾರ, ಸಂಘಟಕ ಯೋಗೀಶ್ ಕಾಂಚನ್‌ಬೈಕಂಪಾಡಿ ಅವರು ನಿಧನರಾಗಿದ್ದಾರೆ.ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2023-2024ರ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಸಾಹಿತಿ ಯೋಗೀಶ್ ಕಾಂಚನ್ ಬೈಕಂಪಾಡಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಡೆದಿದ್ದರು.ಬೈಕಂಪಾಡಿಯ ಮೀನಕಳಿಯದ ನಿವಾಸಿಯಾದ ಇವರು ಹವ್ಯಾಸಿ ಯಕ್ಷಗಾನ ಕಲಾವಿದ. ತುಳುವಿನಲ್ಲಿ ‘ಮಣ್ಣ್

ಹಿನ್ನೋಟ”- ಇದು ನೆನಪಿನ ಬುತ್ತಿ ಕೃತಿ ಅನಾವರಣ

ಅರಂತೋಡಿನ ನಿವೃತ್ತ ರೇಂಜರ್ ಹೂವಯ್ಯ ಗೌಡ ಉಳುವಾರು ಅವರ ಬದುಕು ಹಾಗೂ ವೃತ್ತಿ ಬದುಕನ್ನು ಪರಿಚಯಿಸುವ ಅಭಿನಂದನಾ ಗ್ರಂಥ “ಹಿನ್ನೋಟ- ಇದು ನೆನಪಿನ ಬುತ್ತಿ” ಯ ಅನಾವರಣ ಕಾರ್ಯಕ್ರಮವು ಇತ್ತೀಚೆಗೆ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಕೃಷ್ಣ ಗೌಡ ಮೂಲೆಮನೆ ವಹಿಸಿದ್ದರು. ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲರಾದ ಕೆ ಆರ್ ಗಂಗಾಧರ ಉದ್ಘಾಟಿಸಿದರು. ಎಂ ಬಿ ಫೌಂಡೇಶನ್ ಅಭ್ಯಕ್ಷರಾದ ಎಂ ಬಿ ಸದಾಶಿವ ಕೃತಿಯನ್ನು

ಶಿರ್ವ: ಹಿಂದೂ ಜೂನಿಯ‌ರ್ ಕಾಲೇಜು ಹೊಸ ಅಕಾಡೆಮಿಕ್ ಬ್ಲಾಕ್ ಮತ್ತು ಎಐ ಕೊಠಡಿ ಉದ್ಘಾಟನೆ

ಕಾಪು:ಹಿಂದೂ ಜೂನಿಯ‌ರ್ ಕಾಲೇಜು, ಶಿರ್ವ ಇದರ ಹೊಸ ಅಕಾಡೆಮಿಕ್ ಬ್ಲಾಕ್ ಮತ್ತು ಎಐ ಕೊಠಡಿ ಉದ್ಘಾಟನೆ ಮತ್ತು ಕಾಲೇಜು ವಾರ್ಷಿಕೋತ್ಸವು ಸೋಮವಾರದಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಂ.ಎ ಗಫೂರ್, ಜ್ಞಾನ ಚೈತನ್ಯ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಶಿರ್ವ ಗ್ರಾಮ ಪಂಚಾಯತ್

ಪಡುಬಿದ್ರಿ:ಚಂದ್ರಾವತಿ ವಿ.ಆಚಾರ್ಯಗೆ ಬೀಳ್ಕೊಡುಗೆ ಹಾಗೂ ಸಮ್ಮಾನ

ಪಡುಬಿದ್ರಿ:ಉಚ್ಚಿಲ ಬಡಾ ಗ್ರಾಮ ಪಂಚಾಯತ್ ನಲ್ಲಿ ಎಟೆಂಡರ್, ಕ್ಲರ್ಕ್ ಆಗಿ 31 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿ ಇದೀಗ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿ ಬೆಳಪು ಗ್ರಾ.ಪಂ.ಗೆ ನಿಯುಕ್ತಿಗೊಂಡಿರುವ ಚಂದ್ರಾವತಿ ವಿ. ಆಚಾರ್ಯ ಉಚ್ಚಿಲ ಅವರನ್ನು ಬಡಾ ಗ್ರಾಮ ಪಂಚಾಯತ್ ವತಿಯಿಂದ ಅಭಿನಂದಿಸಿ, ಸಮ್ಮಾನಿಸಿ ಬೀಳ್ಕೊಡಲಾಯಿತು. ಡಿ.29ರಂದು ಉಚ್ಚಿಲ ಬಡಾ ಗ್ರಾ.ಪಂ. ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಶಿವ ಕುಮಾರ್ ಮೆಂಡನ್,