Home Articles posted by v4team (Page 6)

ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಹುಬ್ಬಳ್ಳಿಯ ಡಾ ಅಶೋಕ ಹುಗ್ಗಣ್ಣನವರ್ ನಿಧನ

ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಹುಬ್ಬಳ್ಳಿಯ ಡಾ ಅಶೋಕ ಹುಗ್ಗಣ್ಣನವರ್ ಅವರು ಸಂಗೀತ ಲೋಕದಿಂದ ಅಗಲಿದ್ದಾರೆ. ಹೊನ್ನಾವರ ಎಸ್‍ಡಿಎಮ್ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿದ್ದ ಇವರು ಕಿರಾನ ಹಾಗೂ ಗ್ವಾಲಿಯಾರ್ ಘರಾನ ಶೈಲಿಯ ಹಾಡುಗಾರಿಕೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ದೇಶ ವಿದೇಶಗಳಲ್ಲಿ ಆಪಾರ ಶಿಷ್ಯ ವರ್ಗ ಅಭಿಮಾನಿಗಳನ್ನು ಹೊಂದಿದ್ದ

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು -ವಿಶ್ವ ವಿದ್ಯಾಲಯದ ರಾಜ್ಯ ಮಟ್ಟದ ಪುರುಷರ ಹಗ್ಗ ಜಗ್ಗಾಟ ಪಂದ್ಯದಲ್ಲಿ ದ್ವಿತೀಯ ಸ್ಥಾನ

ಡಿ. 23 ರಂದು ಕೆ ವಿ ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದ ಆತಿಥ್ಯದಲ್ಲಿ ಆಯೋಜಿಸಲಾದ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ರಾಜ್ಯ ಮಟ್ಟದ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದ ವಿಧ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಪಂದ್ಯಾಟವು ಸುಳ್ಯದ ನೆಹರೂ ಮೆಮೋರಿಯಲ್ ಮೈದಾನದಲ್ಲಿ ನಡೆದಿದ್ದು ರಾಜ್ಯ ಮಟ್ಟದಿಂದ ಹತ್ತಾರು ತಂಡಗಳು ಭಾಗವಹಿಸಿದ್ದವು.

ಕಡಬ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಕೆ.ಎಸ್. ಕಾರ್ಯದರ್ಶಿಯಾಗಿ ಪ್ರವೀಣ್ ಚೆನ್ನಾವರ ಆಯ್ಕೆ

ಕಡಬ: ಕಡಬ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ 2025–28ನೇ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅಧ್ಯಕ್ಷರಾಗಿ ಬಾಲಕೃಷ್ಣ ಕೊಯಿಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಚೆನ್ನಾವರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಲೋಕೇಶ್ ಬಿ.ಎನ್., ಕಾರ್ಯದರ್ಶಿಯಾಗಿ ಸುಧಾಕರ ಆಚಾರ್ಯ, ಕೋಶಾಧಿಕಾರಿಯಾಗಿ ಪ್ರವೀಣ್ ರಾಜ್ ಕೊಯಿಲ ಅವರು ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿಜಯ

ಉಡುಪಿ: ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರ ವಿರುದ್ದ ಅಪಪ್ರಚಾರ: ಗಜೇಂದ್ರ ಎಸ್ ಬೇಲೆಮನೆ ಆಕ್ರೋಶ

ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲಾ ಅದ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ವಿದ್ಯಾರ್ಥಿ ಜೀವನದಲ್ಲೇ ರಾಜಕೀಯ ಆರಂಭಮಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಪೇಜಾವರ ವಿಶ್ವಪ್ರಸನ್ನರ ಮಾರ್ಗದರ್ಶನದಲ್ಲಿ ಗೋವಿಗಾಗಿ ಮೇವು ಸಂಘಟನೆಮೂಲಕ ರಾಜ್ಯದ ಮನೆಮಾತದವರು ಯುವಮೋರ್ಚಾ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಪಾದರಸದಂತೆ ಸದಾ ಕಾಂಗ್ರೇಸ್ ಪಕ್ಷದ ವಿರುದ್ದ ಗುಡುಗುವ ಇವರನ್ನು ಹತ್ತಿಕ್ಕಲು ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಬಾರ್ಕೂರಿನಲ್ಲಿ ಇವರ ಮಾಲಕತ್ವದ ಸಂಕಮ್ಮ

ಮೂಡುಬಿದಿರೆ ತಾ.ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷರಾಗಿ ನವೀನ್ ಸಾಲ್ಯಾನ್ ಆಯ್ಕೆ

ಮೂಡುಬಿದಿರೆ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನವೀನ್ ಸಾಲ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜೈಸನ್ ತಾಕೊಡೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಣೇಶ್ ಕಾಮತ್ ಎಂ., ಕಾರ್ಯದರ್ಶಿಯಾಗಿ ಶರತ್ ದೇವಾಡಿಗ, ಕೋಶಾಧಿಕಾರಿಯಾಗಿ ರಾಘವೇಂದ್ರ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬೆಳುವಾಯಿ ಸೀತಾರಾಮ ಆಚಾರ್ಯ, ಪ್ರಸನ್ನ ಹೆಗ್ಡೆ, ಅಶ್ರಫ್ ವಾಲ್ಪಾಡಿ, ಪ್ರೇಮಶ್ರೀ ಕಲ್ಲಬೆಟ್ಟು, ಪುನೀತ್ ಆಯ್ಕೆಗೊಂಡಿದ್ದಾರೆ. ಮೂಡುಬಿದ್ರಿ

ಕಾಪು: ಮಾರಿಯಮ್ಮ ದೇವಸ್ಥಾನಕ್ಕೆ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಭೇಟಿ

ಕಾಪು:ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಇಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು. ಬಸವರಾಜ ಹೊರಟ್ಟಿ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಸ್ವಾಗತಿಸಿ ಗೌರವಿಸಲಾಯಿತು. ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ

ಮಂಗಳೂರು:ಬಂದರು ನಗರಿಗೆ ಆಗಮಿಸಿದ ವಿಲಾಸಿ ಹಡಗು

 ಬಂದರು ನಗರಿ ಮಂಗಳೂರಿಗೆ ವಿದೇಶಿ ಪ್ರವಾಸಿ ಹಡಗುಗಳ (ವಿಲಾಸಿ ಹಡಗುಗಳು) 2025-26ನೆ ಸಾಲಿನ ಭೇಟಿ ಋತು ಆರಂಭಗೊಂಡಿದ್ದು, ಪ್ರಥಮ ವಿಲಾಸಿ ಹಡಗು ಎಂಎಸ್ ಸೆವೆನ್ ಸೀಸ್ ನೇವಿಗೇಟರ್ ಆಗಮಿಸಿದೆ. 450 ಪ್ರಯಾಣಿಕರು ಮತ್ತು 360 ಸಿಬ್ಬಂದಿಯನ್ನು ಹೊತ್ತ ಐಷಾರಾಮಿ ಕ್ರೂಸ್ ಹಡಗು ಬೆಳಗ್ಗೆ 6:15ಕ್ಕೆ ನವಮಂಗಳೂರು ಬಂದರಿಗೆ ಆಗಮಿಸಿತು, ಬಹಾಮಾಸ್‌ನ ಧ್ವಜವನ್ನು ಹೊತ್ತ ಎಂಎಸ್ ಸೆವೆನ್ ಸೀಸ್ ಹಡಗು ಮರ್ಮುಗಾಂವೊ ಬಂದರಿನಿಂದ ಆಗಮಿಸಿದೆ. ಮಂಗಳೂರು ಕಸ್ಟಮ್ಸ್ ಆಯುಕ್ತೆ

ಶಂಕಿತ ವಿದೇಶಿ ಪ್ರಜೆಗೆ ಸಹಾಯ ನೀಡಿದ ಆರೋಪ:ವಿಟ್ಲ ಪೊಲೀಸ್ ಕಾನ್‌ಸ್ಟೇಬಲ್ ಬಂಧನ

ವಿಟ್ಲ: ಶಂಕಿತ ಬಾಂಗ್ಲಾ ಪ್ರಜೆಗೆ ಪಾಸ್ ಪೋರ್ಟ್ ಮಾಡಿಕೊಡಲು ಸಹಾಯ ಮಾಡಿದ ಆರೋಪದ ಮೇಲೆ ವಿಟ್ಲ ಪೋಲೀಸ್ ಠಾಣೆಯ ಸಿಬ್ಬಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಪೋಲೀಸ್ ಕಾನ್ಸ್ಟೇಬಲ್ ಪ್ರದೀಪ್ ಎಂದು ಗುರುತಿಸಲಾಗಿದೆ. ಶಂಕಿತ ಬಾಂಗ್ಲಾ ಪ್ರಜೆ ಶಕ್ತಿದಾಸ್ ಎಂಬಾತನಿಗೆ ಪಾಸ್ ಪೋರ್ಟ್ ಪಡೆಯಲು ಸಹಾಯ ಆರೋಪ ಇವರ ಮೇಲಿದೆ. ಅದೇ ವಿಟ್ಲ ಠಾಣೆಯ ಕಾನ್ಸ್ಟೇಬಲ್ ಸಾಬೀ ಮಿರ್ಜಿ ನೀಡಿದ ದೂರಿನ ಆದಾರದ ಮೇಲೆ ಕಾನ್ಸ್ಟೇಬಲ್ ಪ್ರದೀಪ್ ನನ್ನು ಅರೆಸ್ಟ್

ಡಿ. 25: ಸಾವಿರ ಕಂಬದ ಬಸದಿಯಲ್ಲಿ ಲಕ್ಷ ದೀಪೋತ್ಸವ

ಮೂಡುಬಿದಿರೆ: ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ವಿಶ್ವಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಡಿಸೆಂಬರ್ 25 ರಂದು ಲಕ್ಷ ದೀಪೋತ್ಸವ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಲಿದೆ.​ಅತಿಶಯ ಸಿದ್ಧಕ್ಷೇತ್ರವಾದ ಮೂಡುಬಿದಿರೆಯ ಈ ಪುಣ್ಯಕ್ಷೇತ್ರದಲ್ಲಿ ಅಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿವೆ. ​​ಸಂಜೆ 6 ರಿಂದ: ವಿವಿಧ ಭಜನಾ ತಂಡಗಳಿಂದ ಭಕ್ತಿ ಸುಧೆ – ಜಿನ ಭಜನಾ

ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟ 2025-26 ಉದ್ಘಾಟನಾ ಸಮಾರಂಭ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ

ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ, ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಉಡುಪಿ ಜಿಲ್ಲೆ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಹಾಗೂ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು, ಕಟಪಾಡಿ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ದಿನಾಂಕ 22-12-2025 ರಂದು ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ “ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟ 2025-26″ರ