Home Articles posted by v4team (Page 9)

ತುಳು ನಾಡು ನುಡಿಗೆ ಜೈನರ ಕೊಡುಗೆ ಚಾರಿತ್ರಿಕವಾದುದು: ಅಭಯಚಂದ್ರ ಜೈನ್

ಮಂಗಳೂರು : ತುಳುನಾಡು ನುಡಿಗೆ ಜೈನ ವಿದ್ವಾಂಸರು, ಜೈನ ರಾಜರು, ರಾಜ ಮನೆತನಗಳು, ಜಿನಲಾಯಗಳು ಚಾರಿತ್ರಿಕವಾದ ಕೊಡುಗೆಗಳನ್ನು ನೀಡಿವೆ. ಶಾಂತಿ ಸಾಮರಸ್ಯ ಹಾಗೂ ಸಾಮಾಜಿಕ ಸಮನ್ವಯತೆಗೂ ಜೈನರ ಕೊಡುಗೆ ಅನನ್ಯವಾದುದು ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮೂಡಬಿದಿರೆ ಶ್ರೀ ಜೈನ ಮಠದಲ್ಲಿ ನಾದ ನೂಪುರ ಯಕ್ಷೋತ್ಥಾನ

ಮಂಗಳೂರು – ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ – ಡಿಜೆ ನಿಷೇಧ

ಮಂಗಳೂರು, ಡಿಸೆಂಬರ್ 17 : ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮುಂಬರುವ ಹೊಸವರ್ಷಾಚರಣೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಯವರು ಪ್ರಕಟಿಸಿದ್ದಾರೆ. ಹೊಸ ವರ್ಷಾಚರಣೆ ಸಂದರ್ಭ ಡಿಜೆಯನ್ನು ಸಂಪೂರ್ಣ ಬ್ಯಾನ್ ಮಾಡಲಾಗಿದೆ. 1. ಹೊಸ ವರ್ಷಾಚರಣೆ ಆಯೋಜಿಸುವ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಹಾಗೂ ಇತರ ಸಂಸ್ಥೆಗಳು ಮಂಗಳೂರು ಪೊಲೀಸ್ ಕಮಿಷನರೇಟ್

ಅಂತರ್ ಜಿಲ್ಲಾ ಮಟ್ಟದ ಕ್ರೀಡಾಕೂಟ ಕೇಮಾರಿನ ರಶ್ಮಿತಾ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ : ದ.ಕ ಉಡುಪಿ ಮತ್ತು ‌ಕೊಡಗು ಅಂತರ್ ಜಿಲ್ಲಾ ಮಟ್ಟದ 18ನೇ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೇಮಾರಿನ ರಶ್ಮಿತಾ ಶೆಟ್ಟಿ ಯವರು ತ್ರಿವಿಧ ಜಿಗಿತ ಪ್ರಥಮ,ಈಟಿ ಎಸೆತದಲ್ಲಿ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಮಾಸ್ಟರ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಹಲವಾರು ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುವ ಇವರು ಕಳೆದ ವರ್ಷವೂ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ವನ್ನು

ಮೈಕಲ್ ಡಿ’ಸೋಜಾ ವಿಶನ್ 2030 ಕಾರ್ಯಯೋಜನೆಗೆ ಚಾಲನೆ

ಮಂಗಳೂರು, ಡಿಸೆಂಬರ್ 16, 2025 – ಪ್ರಸಿದ್ಧ ಅನಿವಾಸಿ ಉದ್ಯಮಿ ಮತ್ತು ಮಹಾದಾನಿ ಶ್ರೀ ಮೈಕಲ್ ಡಿ’ಸೋಜಾ ಅವರ ಕಾರವಾರ ಮತ್ತು ಗುಲ್ಬರ್ಗಾ ಜೋಡಿ ಧರ್ಮಪ್ರಾಂತ್ಯಗಳ ಸಮುದಾಯಗಳನ್ನು ಸಮರ್ಥಗೊಳಿಸುವ ಗುರಿಯುಳ್ಳ ಮಹತ್ವಾಕಾಂಕ್ಷಿ ವಿಶನ್ 2030 ಕಾರ್ಯಯೋಜನೆಗೆ ಮಂಗಳೂರು ಧರ್ಮಕ್ಷೇತ್ರದ, ಧರ್ಮಾಧ್ಯಕ್ಷರ ನಿವಾಸದಲ್ಲಿ ತಿಳುವಳಿಕೆ ಒಡಂಬಡಿಕೆಗೆ (MoU) ಸಹಿ ಮಾಡುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕಾರವಾರ ಮತ್ತು ಗುಲ್ಬರ್ಗಾ ಧರ್ಮಕ್ಷೇತ್ರಗಳಿಗಾಗಿ ಮೈಕಲ್

ಫೇಮಸ್ ಯೂತ್ ಕ್ಲಬ್ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಣೆ

ತೋಕೂರು: ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಮೈ ಭಾರತ್ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು ಇವರ ಮಾರ್ಗದರ್ಶನದಲ್ಲಿ ರೋಟರಿ ಕ್ಲಬ್ ಬೈಕಂಪಾಡಿ ಪ್ರಿಯದರ್ಶಿನಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಪೂಜಾ ಫ್ರೆಂಡ್ಸ್ ಹಳೆಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಕುಳಾಯಿ ಇವರ ಸಹಕಾರದಲ್ಲಿ ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ 10ನೇ ತೋಕೂರು ಹಳೆಯಂಗಡಿ ಇವರ ಪ್ರಾಯೋಜಕತ್ವದಲ್ಲಿ ಗೋವಿಂದ

ರೈತರಿಗೆ ಬೆಳೆವಿಮೆ ಕುರಿತು ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರ ಸಭೆ

ರೈತರಿಗೆ ಬೆಲೆ ವಿಮೆ ಹಣ ಜಮಾ ಕಡಿಮೆ ಪಾವತಿಯ ಕುರಿತು ಬಿಜೆಪಿ ಸತ್ಯಶೋಧನಾ ಸಮಿತಿಯಿಂದ ಮಾಜಿ ಶಾಸಕರಾದ ಸಂಜೀವ ಮಠಂದೂರು ರವರು ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಹಾಗೂ ಸುಳ್ಯ ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರ ಸಭೆ ನಡೆಸಿ, ತೋಟಗಾರಿಕಾ ಇಲಾಖೆಯ ನಿರ್ಲಕ್ಷದಿಂದ ರೈತರಿಗೆ ಆದ ಅನ್ಯಾಯದ ಕುರಿತು ಗ್ರಾಮ ಮಟ್ಟದಿಂದ ಸಂಗ್ರಹಿಸಿದ ಮಾಹಿತಿಯನ್ನು, ಬೆಳಗಾವಿ ಅಧಿವೇಶನದಲ್ಲಿ ರೈತರ ಬೆಲೆ ವಿಮೆ ಪಾವತಿ ವಿಳಂಬ ಹಾಗೂ ತಾರತಮ್ಯದ ವಿರುದ್ಧ

ಕಾಫಿ ಟೇಬಲ್ ಪುಸ್ತಕಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

ಸೈಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಪರಂಪರೆ ಮತ್ತು ಗುರುತುಗಳನ್ನು ಚಿತ್ರಿಸುವ ದಿ ಎಕೋಸ್ ಆಫ್ ದ ಕಾರಿಡಾರ್ಸ್ – ಎ ಪೋರ್ಟ್ರೇಟ್ ಆಫ್ ಸೈಂಟ್ ಅಲೋಶಿಯಸ್ ಯುನಿವರ್ಸಿಟಿ ಹಾಗೂ ಫಾದರ್ ಮಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್‌ನ ಪರಂಪರೆ ಮತ್ತು ಸೇವೆಯನ್ನು ದಾಖಲಿಸುವ ಟಚ್ಡ್ ಬೈ ಏಂಜಲ್ಸ್ – ಎ ಪೋರ್ಟ್ರೇಟ್ ಆಫ್ ಫಾದರ್ ಮಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ ಎಂಬ ಎರಡು ಕಾಫಿ ಟೇಬಲ್ ಪುಸ್ತಕಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಕ್ಷತಾ ಪೂಜಾರಿಗೆ ಮನೆಗೆ ನುಗ್ಗಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಿ : ಯಶ್ ಪಾಲ್ ಸುವರ್ಣ ಆಗ್ರಹ

ಉಡುಪಿ: ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂಬೆಳಗ್ಗೆ 4.30 ರ ಸುಮಾರಿಗೆ ನುಗ್ಗಿ ಯುವತಿಗೆ ಹಲ್ಲೆ ನಡೆಸಿರುವ ಪೊಲೀಸ್‌ ಅಧಿಕಾರಿಗಳ ವಿರುದ್ದ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ. ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿರುವ ಆರೋಪಿಯ ಚಿಕ್ಕಮ್ಮನ ಮನೆಗೆ ಮಹಿಳಾ ಪೋಲಿಸರು ಇಲ್ಲದೇ, ಕೇವಲ ಪುರುಷ ಪೋಲಿಸರು ನುಗ್ಗಿ,

ಚೊಕ್ಕಬೆಟ್ಟು ಮಾಹಿತಿ ಮತ್ತು ನಾಗರಿಕ ಕೇಂದ್ರದ 15 ನೇ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಸನ್ಮಾನ

ಸುರತ್ಕಲ್‌: ಸುರತ್ಕಲ್: ಚೊಕ್ಕಬೆಟ್ಟು ಮಾಹಿತಿ ಮತ್ತು ನಾಗರಿಕ ಕೇಂದ್ರದ 15 ನೇ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆದಿತ್ಯವಾರ ಸಂಜೆ ಕಚೇರಿ ಮುಂಭಾಗದಲ್ಲಿ ಜರುಗಿತು. ಉದ್ಘಾಟನೆ ನೆರವೇರಿಸಿ ಮಾತಾಡಿದ ಅಬ್ದುಲ್ ಅಝೀಝ್ ದಾರಿಮಿ ಅವರು, “ಮಾದಕ ದ್ರವ್ಯ ಮುಕ್ತ ಸ್ವಸ್ಥ ಸಮಾಜದ ನಿರ್ಮಾಣವಾಗಬೇಕು. ಇದಕ್ಕಾಗಿ ಜಾತಿ ಪಂಗಡ ಮರೆತು ಒಗ್ಗೂಡಬೇಕು. ಮಾದಕ ದ್ರವ್ಯ, ಮದ್ಯಪಾನದಂತಹ ದುಷ್ಚಟಗಳಿಂದ ನಾವು ನಮ್ಮ ಮನೆಯ ಮಕ್ಕಳನ್ನು ದೂರವಿಡಬೇಕು. ನಾವು

ಉಡುಪಿ:- ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಹೊಡೆದಾಟ ಓರ್ವ ಸಾವು

ಉಡುಪಿ:- ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಹೊಡೆದಾಟ ನಡೆದು ಓರ್ವ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕರೆಯ ಐದು ಸೆಂಟ್ಸ್ ಬಳಿ ಭಾನುವಾರ ತಡರಾತ್ರಿ ನಡೆದಿದೆ.ಮೃತನನ್ನು ಪಡುಕರೆ ಸಂತೋಷ್ ಮೊಗವೀರ (30) ಎಂದು ಗುರುತಿಸಲಾಗಿದೆ. ಶಬರಿಮಲೆಗೆ ಹೋಗಿ ಬಂದಿದ್ದ ಯುವಕರು ಭಾನುವಾರ ರಾತ್ರಿ ಎಣ್ಣೆ ಪಾರ್ಟಿ ಮಾಡಿ ಕ್ಷುಲ್ಲಕ ವಿಚಾರಕ್ಕೆ ಹೊಡೆದಾಡಿಕೊಂಡಿದ್ದಾರೆ. ಸಂತೋಷ ಮೊಗವೀರನಿಗೆ ನಾಲ್ವರು ಮಾರಣಾಂತಿಕ ಹಲ್ಲೆ ಮಾಡಿದ್ದು ಆತ ಸ್ಥಳದಲ್ಲೇ