ಬಹರೈನ್ : ಫೆ.24ರಂದು ಕೋಟಿ ಚೆನ್ನಯ ತುಳು ಯಕ್ಷಗಾನ ಪ್ರದರ್ಶನ

ಬಹರೈನ್ ಅನಿವಾಸಿ ಬಿಲ್ಲವ ಸಮುದಾಯವಾದ “ಬಹರೈನ್ ಬಿಲ್ಲವಾಸ್ ” ಯಕ್ಷ ದುನಿಪು -2023″ಎನ್ನುವಂತಹ ತುಳು ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಯಕ್ಷಗಾನ ಪ್ರದರ್ಶನ ಫೆಬ್ರವರಿ 24ರ ಶುಕ್ರವಾರದಂದು ಸಂಜೆ 5 ಘಂಟೆಗೆ ಸರಿಯಾಗಿ ಮಾನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಜರುಗಲಿರುವುದು.

“ಯಕ್ಷ ದುನಿಪು -2023” ಕಾರ್ಯಕ್ರಮದಲ್ಲಿ ಇಲ್ಲಿನ ಯಕ್ಷ ಕಲಾವಿದರು ಹಾಗು ನಾಡಿನ ಜನಪ್ರಿಯ ಅತಿಥಿ ಕಲಾವಿದರುಗಳ ಸಮಾಗಮದೊಂದಿಗೆ ತುಳು ನಾಡಿನ ಅಮರವೀರರ ಪುಣ್ಯ ಕಥಾನಕ “ಕೋಟಿ ಚೆನ್ನಯ ” ಕಥಾ ಪ್ರಸಂಗವನ್ನು ಆಡಿತೋರಿಸಲಿದ್ದಾರೆ . ನಾಡಿನ ಖ್ಯಾತ ಯಕ್ಷಗಾನ ಕಲಾವಿದ ಇದೀಗ ಬಹರೈನ್ ನಲ್ಲಿ ನೆಲೆಸಿರುವ ಯಕ್ಷಪುರುಷೋತ್ತಮ ಶ್ರೀ ದೀಪಕ್ ಪೇಜಾವರ್ ರವರ ದಿಗ್ದರ್ಶನದಲ್ಲಿ ಈ ಯಕ್ಷಗಾನ ಕಥಾ ಪ್ರಸಂಗವು ರಂಗದಲ್ಲಿ ಮೂಡಿಬರಲಿದ್ದು ,ಇನ್ನೋರ್ವ ಯಕ್ಷಗಾನ ಕಲಾವಿದರಾದ ಶ್ರೀ ರಾಮ್ ಪ್ರಸಾದ್ ಅಮ್ಮೆನಡ್ಕ ಇದರ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ದ್ವೀಪದ ಪ್ರಭುದ್ದ ಯಕ್ಷ ಕಲಾವಿದರ ಜೊತೆಗೆ ನಾಡಿನ ಸುಪ್ರಸಿದ್ಧ ಭಾಗವತರಾದ ಶ್ರೀ ದಯಾನಂದ್ ಕೋಡಿಕಲ್, ನುರಿತ ಹಿಮ್ಮೇಳನ ವಾದಕ ಮಧುಸೂದನ್ ಪಾಲನ್ ಹಾಗು ಸೌದಿ ಅರೇಬಿಯಾದ ಯುವ ಭಾಗವತ ರೋಷನ್ .ಎಸ್ .ಕೋಟ್ಯಾನ್ ರವರು ತಮ್ಮ ಕಲಾ ಪ್ರೌಢಿಮೆಯನ್ನು ರಂಗದಲ್ಲಿ ಮೆರೆಯಲಿದ್ದಾರೆ.

ನಾಡಿನ ಕಲಾವಿದರುಗಳು ಇದಾಗಲೇ ದ್ವೀಪ ರಾಷ್ಟ್ರಕ್ಕೆ ಆಗಮಿಸಿದ್ದು ಬಿರುಸಿನ ಅಭ್ಯಾಸ ನಡೆಯುತ್ತಿದೆ . ಈ ಯಕ್ಷಗಾನ ಪ್ರದರ್ಶನವು ಕ್ಲಪ್ತ ಸಮಯಕ್ಕೆ ಸರಿಯಾಗಿ ಆರಂಭವಾಗಲಿದ್ದು, ದ್ವೀಪದ ಎಲ್ಲಾ ಯಕ್ಷಗಾನ ಪ್ರೇಮಿಗಳಿಗೂ ಮುಕ್ತ ಪ್ರವೇಶವಿರುವುದಾಗಿ “ಬಹರೈನ್ ಬಿಲ್ಲವಾಸ್ ” ನ ಅಧ್ಯಕ್ಷರಾದ ಶ್ರೀ ಹರೀಶ್ ಪೂಜಾರಿ ಯವರು ತಿಳಿಸಿದ್ದಾರೆ . ಕಾರ್ಯಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಶ್ರೀ ಹರೀಶ್ ಪೂಜಾರಿ ಯವರನ್ನು ದೂರವಾಣಿ ಸಂಖ್ಯೆ 39049132 ಮೂಲಕ ಸಂಪರ್ಕಿಸಬಹುದು .

Related Posts

Leave a Reply

Your email address will not be published.