ಬಹರೀಕ್‍ನ ದಾಕಿಯಾ ಗ್ರಾಮ:ಐದರ ಹುಡುಗನ ಹಿಡಿದ ಮೊಸಳೆ ಬಡಿದು ಹೋರಾಡಿದ ಮಹಿಳೆ ಮಗನನ್ನು ಉಳಿಸಿಕೊಂಡ ವನಿತೆ

ಉತ್ತರ ಪ್ರದೇಶ ರಾಜ್ಯದ ಬಹರೀಕ್‍ನ ದಾಕಿಯಾ ಗ್ರಾಮದಲ್ಲಿ ಹುಡುಗನೊಬ್ಬನನ್ನು ಹಿಡಿದ ಮೊಸಳೆಯ ಜೊತೆಗೆ ಹೋರಾಡಿ ಮಹಿಳೆಯೊಬ್ಬಳು ಮಗನನ್ನು ರಕ್ಷಿಸಿಕೊಂಡ ಸಾಹಸಗಾತೆ ನಡೆದಿದೆ.ದಾಕಿಯಾ ಗ್ರಾಮದ ವೀರೂ ಎಂಬ ಬಾಲಕನು ಕಾಲುವೆಯ ಪಕ್ಕದಲ್ಲಿ ಆಟವಾಡುತ್ತಿದ್ದ.

ಆಗ ಹಾರಿ ಬಂದ ಮೊಸಳೆಯೊಂದು ಐದರ ಆ ಹುಡುಗನ್ನು ಲಬಕ್ಕ ಹಿಡಿದು ನೀರಿಗೆ ಎಳೆಯಿತು. ಹುಡುಗ ಕೂಗಿಕೊಂಡಾಗ ತಾಯಿ ಮಾಯಾ ಓಡಿ ಬಂದಿದ್ದಾಳೆ. ಏಳು ಅಡಿ ಉದ್ದದ ಮೊಸಳೆಯನ್ನ ಹಿಡಿದು ಗುದ್ದಿದ ಮಹಿಳೆ ಮಾಯಾ ಅದರ ಬಾಯಿಯನ್ನು ಅಗಲಿಸಿ ದವಡೆಗೆ ಮುಂಗೈಯಿಂದ ಗುದ್ದಿದಳು.

ನೀರಿನಲ್ಲಿ ಮೊಸಳೆಯು ಹುಡುಗನನ್ನು ಆಳಕ್ಕೆ ಎಳೆಯಲು ನೋಡುತ್ತಿತ್ತು. ಒಂದು ಕಡೆ ಮೊಸಳೆ ನೀರಿನ ಆಳಕ್ಕೆ ಹೋಗದಂತೆ ದಡದತ್ತ ಎಳೆಯುವಲ್ಲಯೂ ಆ ತಾಯಿ ಸಫಲರಾದರು. ಅಂತಿಮವಾಗಿ ಹತ್ತಿರದಲ್ಲಿದ ರಾಡ್ ಒಂದರಿಂದ ಮೊಸಳೆಗೆ ಬಡ ಬಡ ಬಡಿದಳು ನಾರಿ. ಇದರಿಂದ ಸುಸ್ತಾದ ಮೊಸಳೆಯು ಸೋಲೊಪ್ಪಿಕೊಂಡು, ಹುಡುಗನನ್ನು ಬಿಟ್ಟು ನೀರಿನಾಳಕ್ಕೆ ಹೋಯಿತು.
ಐದು ನಿಮಿಷಗಳ ಹೋರಾಟದಲ್ಲಿ ಮಹಿಳೆ ಮಾಯಾ ಗೆದ್ದರೂ ಹುಡುಗನಿಗೆ ತೀವ್ರ ಗಾಯವಾಗಿದೆ; ಜೀವಕ್ಕೆ ಅಪಾಯವಾಗಿಲ್ಲ. ಚಿಕಿತ್ಸೆ ನಡೆದಿದೆ.
