ಬನ್ನೇರುಘಟ್ಟ ಲಯನ್ಸ್ ತಂಡದಿಂದ ದೀಪಾವಳಿ ಫೋಟೋ ಶೂಟ್ – ಗ್ರಾಮೀಣ ಮಹಿಳೆಯರೊಂದಿಗೆ ಸಂವಾದ

ಬೆಂಗಳೂರು : ಬೆಳಕಿನ ಹಬ್ಬವಾದ ದೀಪಾವಳಿ ಆಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಗ್ರೇಟರ್ ಬನ್ನೇರಘಟ್ಟ ಸದಸ್ಯರು ಕನಕಪುರದ ಸಮೀಪದ ಹೋರಳುಗಲ್ಲು ಗ್ರಾಮಕ್ಕೆ ಸ್ನೇಹ ಮತ್ತು ಸೇವೆಯ ಉದ್ದೇಶದ ಪ್ರವಾಸವನ್ನು ಆಯೋಜಿಸಿದರು.

ಈ ಸಂದರ್ಭದಲ್ಲಿ’ದೀಪದಿಂದ ದೀಪವಾ’ ಎಂಬಆಶಯದೊಂದಿಗೆ ಬೆಳಕನ್ನು ಮತ್ತು ಒಗ್ಗಟ್ಟಿನ ಶಕ್ತಿಯನ್ನು ಬಿಂಬಿಸುವ ವಿಂಟೇಜ್ ಶೈಲಿಯ ಫೋಟೋ ಶೂಟ್ ನಡೆಸಲಾಯಿತು.


ಇದೆ ವೇಳೆ ಹೋರಳುಗಲ್ಲು ಗ್ರಾಮದ ಗ್ರಾಮೀಣ ಮಹಿಳೆಯರು ಮತ್ತು ಹಿರಿಯರೊಂದಿಗೆ ಅವರ ವೈದ್ಯಕೀಯ, ಭಾವನಾತ್ಮಕ ಮತ್ತು ಸಾಮಾನ್ಯ ಅಗತ್ಯಗಳ ಬಗ್ಗೆ ಹೃದಯಸ್ಪರ್ಶಿ ಸಂಭಾಷಣೆ ನಡೆಸಿ ಅವರಿಗೆ ದೀಪಾವಳಿಯ ಸಿಹಿ ತಿಂಡಿ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬೆಂಗಳೂರು ಗ್ರೇಟರ್ ಬನ್ನೇರುಘಟ್ಟ ಘಟಕದ ಅಧ್ಯಕ್ಷೆ ರಜನಿ ಗೌಡ, ಲಯನ್ಸ್ ಮುಖಂಡರಾದ ರೇಣುಕಾ ಪ್ರಕಾಶ್, ರಾಣಿ ಶ್ರೀನಿವಾಸ್, ಚೈತ್ರ, ನವಿತಾ, ದಕ್ಷ, ಹೇಮಾ ಭಾಗವಹಿಸಿದ್ದರು.