*ಬಂಟ್ವಾಳ: ತುಂಬೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ
ಬಂಟ್ವಾಳ: ತುಂಬೆ ನೇತ್ರಾವತಿ ನದಿ ತೀರದಲ್ಲಿ ಸುಮಾರು ೫ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಗೊಂಡಿರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.೧೩ರಿಂದ ೨೩ರವರೆಗೆ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ಧ್ವಜಸ್ತಂಭ ಪ್ರತಿಷ್ಠೆ ಸಹಿತ ವಾರ್ಷಿಕ ಜಾತ್ರಾ ಮಹೋತ್ಸವವು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹೇಳಿದರು.
ದೇವಸ್ಥಾನದಲ್ಲಿ ಸೋಮವಾರ ನಡೆದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಆದ್ಯಪಾಡಿ ನೀಲಕಂಠ ಉಮಾ ಮಹೇಶ್ವರ ದೇವಸ್ಥಾನ ಆಡಳಿತ ಮೊತ್ತೇಸರ ಮಂಜುನಾಥ ಭಂಡಾರಿ ಶೆಡ್ಡೆ ಆಮಂತ್ರಣಪತ್ರ ಬಿಡುಗಡೆ ಮಾಡಿ ದರು. ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ, ಬ್ರಹ್ಮಕಲಶ ಸಮಿತಿ
ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಉದ್ಯಮಿ ದಿವಾಕರ ಮಂಗಳೂರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಕಂಬಳಿ ಮಾತನಾಡಿದರು.
ಸಮಿತಿ ಉಪಾಧ್ಯಕ್ಷ ಉಮೇಶ ಸುವರ್ಣ ತುಂಬೆ, ಅರುಣ್ ಅಳ್ವ ತುಂಬೆಗುತ್ತು, ಜಯಪ್ರಕಾಶ್ ತುಂಬೆ, ಕೋಶಾಧಿಕಾರಿ ಜಗನ್ನಾಥ ಶೆಟ್ಟಿ ತುಂಬೆಗುತ್ತು, ಉಮೇಶ್ ರೆಂಜೋಡಿ, ಪ್ರಮುಖರಾದ ಶ್ರೀಧರ ರಾವ್, ಗೋಪಾಲಕೃಷ್ಣ ಸುವರ್ಣ, ಪ್ರಕಾಶ್ ಶೆಟ್ಟಿ ತುಂಬೆ, ಸದಾಶಿವ ಡಿ.ತುಂಬೆ, ಲೋಲಾಕ್ಷ ಶೆಟ್ಟಿ, ಮೋನಪ್ಪ ಮಜಿ, ಚಿದಾನಂದ, ಪ್ರಚಾರ ಸಮಿತಿ ಸಂಚಾಲಕ ಪ್ರವೀಣ ಬಿ.ತುಂಬೆ, ಅರ್ಚಕ ಅಭಿಲಾಷ್ ಭಟ್ ಭಾಗವಹಿಸಿದ್ದರು.