ಕಡಬ: :ಶಾರೀರಿಕ ಅಸಕ್ತರಿಗೆ ಸಲಕರಣೆ ವಿತರಣೆ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕಿನ ಕಡಬ ವಲಯದಲ್ಲಿ ಶಾರೀರಿಕ ಅಸಕ್ತರಿಗೆ ಸಲಕರಣೆ ವಿತರಣೆ ಹಾಗೂ ಮಾರಣಾಂತಿಕ ಕಾಯಿಲೆಯಿಂದ ಬಲಳುತ್ತಿರುವ ಕುಟುಂಬಕ್ಕೆ ಸಹಾಯಧನ ವಿತರಣೆ ಮಾಡಲಾಯಿತು. ಕಡಬ ವಲಯದ ಕಡಬ ಜನನಿ ಪ್ರಗತಿಬಂಧು ಸಂಘದ ಪ್ರಭಾಕರ ಶೆಟ್ಟಿಯವರು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು ಇವರಿಗೆ ರೂ 25000 ಸಹಾಯಧನ ವನ್ನು ವಿತರಿಸಲಾಯಿತು.
ಕಡಬ ವಲಯದ ಪಿಜಕ್ಕಳ ತೇಜಸ್ ರವರು ಶಾರೀರಿಕ ಸಮಸ್ಶೆಯಿಂದ ನಡೆಯಲು ಸಾಧ್ಶವಾಗದಿದ್ದು ಅವರಿಗೆ ವೀಲ್ ಚಯರ್, ಕುಟ್ರುಪ್ಪಾಡಿ ಕೆ.ಎಮ್ ಮತ್ತಾಯಿಯವರು ವೃದ್ದಾಪ್ಶದಿಂದಾಗಿ ಶಾರೀರಿಕ ಅಸಕ್ತರಾಗಿದ್ದು ಇವರಿಗೆ ವೀಲ್ ಚಯರ್ ಹಾಗೂ ದೊಡ್ಡಕೊಪ್ಪದ ಹೊನ್ನಮ್ಮರವರು ವೃಧ್ಧಾಪ್ಶದಿಂದಾಗಿ ಶಾರೀಕ ಅಸಕ್ತರಾಗಿದ್ದು ಇವರಿಗೆ ಕಮಾಂಡ್ ವೀಲ್ ಚಯರ್ ವಿತರಿಸಿ ಆರೋಗ್ಶ ಚೇತರಿಕೆಯಾಗುವಂತೆ ಪ್ರಾರ್ಥಿಸಿ ಸಾಂತ್ವಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ತಾಲೂಕು ಜನಜಾಗೃತಿ ವೇದಿಕೆ ಸದಸ್ಶರಾದ ಶಿವಪ್ರಸಾದ್ ರೈ ಮೈಲೇರಿ ವಲಯ ಜನಜಾಗೃತಿವೇಧಿಕೆ ಸದಸ್ಶರಾದ ಕೊರಗಪ್ಪಗೌಡ ಪಿಜಕ್ಕಳ, ದೊಡ್ಡಕೊಪ್ಪ ಸಿದ್ದಿವಿನಾಯಕ ಭಜನಾಮಂಡಳಿಯ ಅಧ್ಶಕ್ಷರಾದ ಗಣೇಶ್, ಒಕ್ಕೂಟದ ಅಧ್ಶಕ್ಷೇನಳಿನಿ ರೈ ಕುಟ್ರುಪ್ಪಾಡಿ, ಮೊದಲಾದವರು ಉಪಸ್ಥಿತರಿದ್ದರು.