ಬಂಟ್ವಾಳ : ರಮಾನಾಥ ರೈ ಅವರ ಶ್ರಮ ವ್ಯರ್ಥವಾಗಬಾರದೆಂದಿದ್ದರೆ ಮತನೀಡಿ ಗೆಲ್ಲಿಸಿ: ಬಿ. ಜನಾರ್ದನ ಪೂಜಾರಿ

ಬಂಟ್ವಾಳ: ರಮಾನಾಥ ರೈ ಒಳ್ಳೆಯ ಮನುಷ್ಯ.. ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.. ಅವರು ಚುನಾವಣೆಯಲ್ಲಿ ಸೋತರೆ ನಾನು ಸತ್ತಂತೆ.. ನಾನು ಸಾಯಬಾರದೆಂದಿದ್ದರೆ ಅವರನ್ನು ಗೆಲ್ಲಿಸಿ..ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಅವರ ಪರವಾಗಿ, ಭಾವನಾತ್ಮಕವಾಗಿ ಮೆಚ್ಚುಗೆಯ ಮಾತಗಳನ್ನಾಡಿದ್ದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ. ಭಾನುವಾರ ಬಿ.ಸಿ.ರೋಡಿನ ಬಸ್ತಿಪಡ್ಪುವಿನಲ್ಲಿರುವ ತನ್ನ ನಿವಾಸ ಚೆನ್ನಮ್ಮ ಕುಟೀರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ನನಗೆ ವಯಸ್ಸಾದ ಕಾರಣ ದೇಹದ ಶಕ್ತಿ ಕುಂದಿದೆ. ಜನರು ನನನ್ನು ಕ್ಷಮಿಸಬೇಕು. ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಲು ಅಸಾಧ್ಯವಾಗಿರುವುದರಿಂದ ಮಾಧ್ಯಮದ ಮೂಲಕ ಮತದಾರರಲ್ಲಿ ಮತ ಯಾಚಿಸುತ್ತೇನೆ ಎಂದರು.

ಬಂಟ್ವಾಳ ಕ್ಷೇತ್ರದಲ್ಲಿ ರಮನಾಥ ರೈಯವರು ಹಲವಾರು ವರ್ಷಗಳಿಂದ ಮತಯಾಚಿಸುತ್ತಿದ್ದು ಅವರಿಗೆ ಸಂಪೂರ್ಣ ಬೆಂಬಲಕೊಟ್ಟು  ಗೆಲ್ಲಿಸಿದ್ದೀರಿ. ಅವರು ನಿಮ್ಮನ್ನು  ಮರೆಯದೆ ನಿಮ್ಮ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಯಾವ ಅಂಜಿಕೆಯೂ ಇಲ್ಲದೆ ಕಾಂಗ್ರೆಸ್ ಪಕ್ಷ ಗೆಲ್ಲಬೇಕೆನ್ನುವ ಸದುದ್ದೇಶದಿಂದ ಅವರು ಕೆಲಸ ಮಾಡಿದ್ದಾರೆ, ಈಗ ಮತದಾರರು ಅವರನ್ನು ಮರೆಯಬಾರದು, ಅವರು ಮಾಡಿದ ಕೆಲಸಕ್ಕೆ  ಬೆಲೆ ಇದೆ ಎಂದು ತೋರಿಸಿಕೊಡಬೇಕು, ನನಗೆ ಸಾಧ್ಯವಾಗುತ್ತಿದ್ದರೆ ಮತದಾರರ ಕಾಲಬುಡಕ್ಕೆ ಬಂದು ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈಯವರಿಗೆ ಮತ ಕೊಟ್ಟು ಅವರನ್ನು ಗೆಲ್ಲಿಸಿ ಎಂದು ಪ್ರಾರ್ಥನೆ ಮಾಡುತ್ತಿದ್ದೆ ಎಂದರು. ದೇಶದ ಎಲ್ಲಾ ಕಡೆ ಹೋಗಿ ಮತ ಯಾಚಿಸಿದ್ದೇನೆ, ರಮಾನಾಥ ರೈಯವರು ಮಾಡುವ ಶ್ರಮ ನೋಡಿದಾಗ ಇಂತಹ ವ್ಯಕ್ತಿಗಳು ದೇಶಕ್ಕೆ ಅಗತ್ಯವಿದೆ, ಅವರ ಶ್ರಮ ವ್ಯರ್ಥ ಆಗಬಾರದು ಎಂದು ಮತದಾರರು ತೋರಿಸಿಕೊಡಬೇಕು ಅದಕ್ಕಾಗಿ ರಮನಾಥ ರೈ ಅವರಿಗೆ ಮತನೀಡಿ ಗೆಲ್ಲಿಸಿ, ಅವರು ನಿಮ್ಮನ್ನು ಎಂದಿಗೂ ಮರೆಯುವ ವ್ಯಕ್ತಿ ಅಲ್ಲ  ಎಂದು  ನಿಮ್ಮಲ್ಲಿ ಕೈ ಜೋಡಿಸಿ ಮನವಿ ಮಾಡುತ್ತಿದ್ದೇನೆ ಎಂದರು.

Related Posts

Leave a Reply

Your email address will not be published.