ಬೈಂದೂರು:  ಬಿಜೆಪಿಯಿಂದ ಮಹಾ ಪ್ರಚಾರ ಅಭಿಯಾನ

ಬೈಂದೂರು: ಬಿಜೆಪಿ ಬೈಂದೂರು ಮಂಡಲದ ವತಿಯಿಂದ ಭಾನುವಾರ ಕ್ಷೇತ್ರದಾದ್ಯಂತ ಮಹಾಪ್ರಚಾರ ಅಭಿಯಾನ ಬಹಳ ಅದ್ದೂರಿಯಾಗಿ ನಡೆಯಿತು.

 ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು  ಪಕ್ಷದ ಧ್ವಜ, ಕೇಸರಿ ಧ್ವಜ,  ಕೇಸರಿ ಶಲ್ಯಗಳನ್ನು ಧರಿಸಿ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರಿಗೆ ಮತ ನೀಡುವಂತೆ ಪ್ರತಿ ಬೂತನಲ್ಲೂ ಮಹಾ ಪ್ರಚಾರ ಅಭಿಯಾನ ನಡೆಸಿದರು.

ಮನೆ ಮನೆಗೆ ಭೇಟಿ ನೀಡಿದ ಕಾರ್ಯಕರ್ತರು ಈ ವೇಳೆ ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ ಇಂಜಿನ್ ಸರ್ಕಾರದಿಂದ ಕ್ಷೇತ್ರದ ಜನತೆ ಹಾಗೂ ರಾಜ್ಯಕ್ಕೆ ಆಗಿರುವ ವಿಶೇಷ ಅನುಕೂಲತೆಯ ಮಾಹಿತಿಯನ್ನು ಮತದಾರರಿಗೆ ತಿಳಿಸುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.

ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಬೂತ್ ಪ್ರಮುಖರು ಮತ್ತು ಪೇಜ್ ಪ್ರಮುಖರ ಜೊತೆಯಾಗಿ ಬೆಳಿಗ್ಗೆಯಿಂದಲೇ ಬೂತ್ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಭೇಟಿ ನೀಡಿ ಪ್ರಚಾರ ನಡೆಸಿದರು. ಕೆಲವೆಡೆ ಜಿಲ್ಲಾ ತಾಲೂಕು ಮತ್ತು ಮಂಡಲ ಪ್ರಮುಖರು ಕಾರ್ಯಕರ್ತರ ಜೊತೆಯಾಗಿ ಅಭಿಯಾನದಲ್ಲಿ ಪಾಲ್ಗೊಂಡರು.

Related Posts

Leave a Reply

Your email address will not be published.