ಸಿದ್ಧಕಟ್ಟೆಯಲ್ಲಿ ಬಿಜೆಪಿಯ ಬೃಹತ್ ರೋಡ್ ಶೋ

ಬಂಟ್ವಾಳ: ಸಿದ್ದಕಟ್ಟೆ ಚರ್ಚ್ ಬಳಿಯಿಂದ ಪೇಟೆಯವರೆಗೆ ಬಂಟ್ವಾಳ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಬೃಹತ್ ರೋಡ್ ಶೋ ನಡೆಸಿ ಮತಯಾಚನೆಗೈದರು. ಸಹಸ್ರಾರು ಕಾರ್ಯಕರ್ತರೊಂದಿಗೆ ಸಿದ್ದಕಟ್ಟೆಯ ಹೆದ್ದಾರಿಯಲ್ಲಿನ ಪ್ರತಿ ಮಳಿಗೆಗಳು, ರಿಕ್ಷಾಚಾಲಕರು, ಸಾರ್ವಜನಿಕರನ್ನು ಭೇಟಿಯಾಗಿ ಮತಯಾಚಿಸಿದರು.

ಬಳಿಕ ಸಿದ್ದಕಟ್ಟೆ ಜಂಕ್ಷನ್ ನಲ್ಲಿ ಸಾರ್ವಜನಿಕ ನಡೆದ ಸಭೆಯನ್ನು ದ್ದೇಶಿಸಿ ಕೇರಳ ರಾಜ್ಯ ಬಿಜೆಪಿ ಖಜಾಂಚಿ ಕೃಷ್ಣದಾಸ್ ಅವರು ಮಾತನಾಡಿ, ದೇಶವಿರೋಧಿ ಚಟುವಟಿಕೆಯಲ್ಲಿರುವವರನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕರನ್ನಾಗಿ ಮಾಡಿಕೊಂಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು. ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಶಾಸಕರಾಗಿ ಅತ್ಯತ್ತಮಾಗಿ ಕೆಲಸ ಮಾಡಿದ್ದು,2000 ಕ್ಕು ಅಧಿಕ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯ ಗಳನ್ನು ಮಾಡಿದ್ದಲ್ಲದೆ ಶಾಂತಿಯ ಬಂಟ್ವಾಳವನ್ನಾಗಿ ಪರಿವರ್ತಿಸಿದ್ದಾರೆ ಎಂದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಬಂಟ್ವಾಳದಲ್ಲಿದ್ದ ಕೋಮುಗಲಭೆ, ಲವ್ ಜಿಹಾದ್, ಗೋ ಹತ್ಯೆ, ಮತಾಂತರ, ಮೊದಲಾದ ಅಕ್ರಮ ದಂಧೆಗಳ ಅಡ್ಡೆಗಳನ್ನು ಮಣ್ಣಿನಡಿಗೆ ಹಾಕಿದ ಕೀರ್ತಿ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸಲ್ಲುತ್ತಿದ್ದು, ಮುಸ್ಲಿಂ ಲೀಗ್ ಶಾಸಕರನ್ನು ಬಂಟ್ವಾಳಕ್ಕೆ ಕರೆಸಿ ನಾಮಪತ್ರ ಹಾಕಿಸಿರುವ ಮರ್ಮ ಏನು ಎಂಬುದನ್ನು ಕಾಂಗ್ರೆಸ್ ಹೇಳಬೇಕು ಎಂದರು.

ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಬಂಟ್ವಾಳ ಕ್ಷೇತ್ರ ಪ್ರವಾಸಿ ಹರಿದಾಸ್, ಚುನಾವಣಾ ಪ್ರಭಾರಿ ರವಿಶಂಕರ್ ಮಿಜಾರು, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಾಧವ ಮಾವೆ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಮೊದಲಾದವರು ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.