ಬಿ.ಸಿ. ರೋಡ್‌ನಲ್ಲಿ ರಕ್ತನಿಧಿ ಸೆಂಟರ್ ಲೋಕಾರ್ಪಣೆ

ಬಂಟ್ವಾಳ: ರೋಟರಿಕ್ಲಬ್ ಬಂಟ್ವಾಳ ಬಿ.ಸಿ.ರೋಡಿಗೆ ಸಮೀಪದ ಗೂಡಿನಬಳಿಯಲ್ಲಿರುವ ಕ್ಲಬ್‌ನ ಕಟ್ಟಡದಲ್ಲಿ ಸುಮಾರು ೮೫ ಲಕ್ಷ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ತಂದಿರುವ ರಕ್ತನಿಧಿ ಸೆಂಟರ್ ಲೋಕಾರ್ಪಣೆ ಗೊಂಡಿತು.ಬಂಟ್ವಾಳ ತಾಲೂಕಿನ ಬಹು ಕಾಲದ ಬೇಡಿಕೆಯೊಂದು ಈಡೇರಿದೆ. ರೋಟರಿ ಜಿಲ್ಲಾ ೩೧೮೧ ರ ಗವರ್ನರ್ ಎಚ್. ಆರ್.ಕೇಶವ ಅವರು ಉದ್ಘಾಟಿಸಿ, ಬಂಟ್ವಾಳ ರೋಟರಿ ಕ್ಲಬ್‌ನ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಈ ಕ್ಲಬ್‌ನ ಸದಸ್ಯರ ಸಾಮರ್ಥ ಹಾಗೂ ಬದ್ದತೆ ಅಭಿನಂದನೀಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಮಾತನಾಡಿ, ಅತೀ ಅವಶ್ಯಕವಾದ ’ಬ್ಲಡ್ ಬ್ಯಾಂಕ್’ ಅನ್ನು ಸ್ಥಾಪಿಸುವ ಮೂಲಕ ಬಂಟ್ವಾಳ ರೋಟರಿ ಕ್ಲಬ್ ಉತ್ತಮ ಕಾರ್ಯ ಮಾಡಿರುವುದು ಅಭಿನಂದನೀಯವಾಗಿದೆ. ತುರ್ತು ಸಂದರ್ಭದಲ್ಲಿ ಬಂಟ್ವಾಳ ಮಾತ್ರವಲ್ಲ ಬೆಳ್ತಂಗಡಿ ತಾಲೂಕಿನ ಜನತೆಗೆ ಅನುಕೂಲವಾಗಲಿದೆ ಎಂದರು.ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಟ್ರಸ್ಟಿವೇ.ಮೂ.ಜನಾರ್ದನ ವಾಸುದೇವ ಭಟ್ ಮೊಗರ್ನಾಡು ಅವರು ಆಶೀರ್ವಚನಗೈದು, ಮುಂದಿನ ದಿನಗಳಲ್ಲಿ ನಿಧಿಯೊಂದನ್ನು ಸ್ಥಾಪಿಸುವ ಮೂಲಕ ರಕ್ತಸೆಂಟರ್ ನಿರ್ವಹಿಸುವ ಕೆಲಸ ಆಗಬೇಕಾಗಿದೆ. ಹುಟ್ಟು ಹಬ್ಬ ಸಹಿತ ಶುಭಸಂದರ್ಭದಲ್ಲಿ ಈನಿಧಿಗೆ ದೇಣಿಗೆ ನೀಡಿ ಸಹಕರಿಸಬೇಕೆಂದರು.
ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಮಂಗಳೂರು ಭಾರತ್ ಬೀಡಿ ಆಡಳಿತ ನಿರ್ದೇಶಕ ಸುಬ್ರಾಯ ಎಂ.ಪೈ. ಮಾಜಿ ಜಿಲ್ಲಾ ರೋಟರಿ ಗವರ್ನರುಗಳಾದ ಕೆ.ಕೃಷ್ಣ ಶೆಟ್ಟಿ ಎನ್. ಪ್ರಕಾಶ್ ಕಾರಂತ, ೨೫-೨೬ ರ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ಡಾ ಸೂರ್ಯ ನಾರಾಯಣ, ಸಹಾಯಕ ಗವರ್ನರ್ ಲಾರೆನ್ಸ್ ಗೋನ್ಸಾಲಿಸ್, ವಲಯ ಲೆಪ್ಟಿನೆಂಟ್ ರವೀಂದ್ರ ದರ್ಬೆ, ವಿಶ್ವಾಸ್ ಶೆಣೈ ಅತಿಥಿಗಳಾಗಿದ್ದರು. ಬ್ಲಡ್ ಸೆಂಟರ್ ಅಧ್ಯಕ್ಷ ಮಂಜುನಾಥ – ಆಚಾರ್ಯ, ಕಾರ್ಯದರ್ಶಿ ಬಸ್ತಿ ಮಾಧವ ಶೆಣೈ, – ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಐತಪ್ಪ ಆಳ್ವ ನಿಕಟಪೂರ್ವ ಕಾರ್ಯದರ್ಶಿ ಭಾನುಶಂಕರ್ ಬನ್ನಿಂತ್ತಾಯ, ಕಾರ್ಯದರ್ಶಿ ಸದಾಶಿವ ಬಾಳಿಗ, ಬ್ಲಡ್ ಸಎಂಟರ್ ಕಾರ್ಯದರ್ಶಿ ಬಸ್ತಿ ಮಾಧವ ಶೆಣೈ ಮೊದಲಾದವರಿದ್ದರು. ಕ್ಲಬ್ ಅಧ್ಯಕ್ಷ ಪ್ರಕಾಶ್ ಬಾಳಿಗ ಸ್ವಾಗತಿಸಿ, ಕೆ. ನಾರಾಯಣ ಹೆಗ್ಡೆ ಪ್ರಸ್ತಾವನೆಗೈದರು. ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಮುರಳೀಧರ ಪ್ರಭು ವಂದಿಸಿದರು. ಸದಸ್ಯ ಅಹಮ್ಮದ್ ಮುಸ್ತಾಫ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
