ಬೆಳ್ಳಾರೆ :ಗ್ರಾ.ಪಂ.ವತಿಯಿಂದ ಐತಿಹಾಸಿಕ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಬೆಳ್ಳಾರೆ: ಬೆಳ್ಳಾರೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೆಳ್ಳಾರೆ ಗ್ರಾಮದ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನಾಳೆ(ಆ.15) ಪೂ. 08.30ಕ್ಕೆ ನಡೆಯಲಿದೆ. ಗ್ರಾಮಸ್ಥರುಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬೆಳ್ಳಾರೆ ಗ್ರಾಮ ಪಂಚಾಯತ್ ಪ್ರಕಟಣೆ ತಿಳಿಸಿದೆ. 1837ರಲ್ಲಿ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಟಗಾರರು ಬ್ರಿಟೀಷರ ಖಜಾನೆಯಾಗಿದ್ದ ಬಂಗ್ಲೆಗುಡ್ಡೆಯನ್ನು ವಶಪಡಿಸಿಕೊಂಡಿದ್ದರು. ಅಂದಿನ ಹೋರಾಟದ ಸ್ಮಾರಕವಾಗಿ ಬಂಗ್ಲೆಗುಡ್ಡೆಯನ್ನು ಐತಿಹಾಸಿಕ ಸ್ಥಳವಾಗಿ ಗುರುತಿಸಲಾಗುತಿದೆ.