ತುಳುನಾಡಿನಲ್ಲೊಂದು ಅಪರೂಪದ ನವಗುಳಿಗ ದೈವದ ಗಗ್ಗರ ಸೇವೆ…!

ಬೆಳ್ತಂಗಡಿ : ದೈವಸ್ಥಾನಗಳಲ್ಲಿಕ್ಷೇತ್ರಪಾಲ ದೈವವಾಗಿ ಒಂದು ಅಥವಾ ಎರಡು ಗುಳಿಗ ದೈವದ ಸಾನಿಧ್ಯವಿರುವುದು ಮಾಮೂಲಿ. ಗುಳಿಗ ನೀಚನೂ, ಉಗ್ರನೂ ಆದ ದೈವ. ಇಂತಹ ಗುಳಿಗನ ಕೋಲ ನೋಡಲೆಂದು ಭಾರೀ ಜನಸ್ತೋಮವೇ ಸೇರುತ್ತದೆ. ಆದರೆ ಇಲ್ಲೊಂದು ಕಡೆಗಳಲ್ಲಿ ಒಂಬತ್ತು ಗುಳಿಗ ದೈವಗಳಿಗೆ ಒಂದೇ ಬಾರೀ ಕೋಲ ನಡೆಯುತ್ತದೆ. ಏನಿದರ ವಿಶೇಷವೆಂದು ನೋಡಲು ಈ ಸ್ಟೋರಿ ನೋಡಿ

ಹೌದು.. ದೇವಿಯ ದೂತನಾಗಿರುವ ಗುಳಿಗನಿಗೆ ದೇವಿ ಆಲಯಗಳಲ್ಲಿ ಪ್ರತ್ಯೇಕ ಸಾನಿಧ್ಯವಿರುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟೆಡೆ ಗ್ರಾಮದ ಬರ್ಕಜೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ನವಗುಳಿಗ ಕ್ಷೇತ್ರದಲ್ಲಿ ಒಂಬತ್ತು ಗುಳಿಗ ದೈವಗಳು ನೆಲೆಯಾಗಿದೆ. ವಿಶೇವೆಂದರೆ ಈ ಒಂಬತ್ತು ಗುಳಿಗ ದೈವಗಳಿಗೆ ಒಂದೇ ಬಾರಿ ಕೋಲ ನಡೆಯುತ್ತದೆ. ಈ ಒಂಬತ್ತು ಗುಳಿಗ ದೈವಗಳ ಅಪರೂಪದ ಕೋಲ ನೋಡಲು ಭಾರೀ ಭಕ್ತ ಜನ ಸಂದೋಹವೇ ಸೇರುತ್ತದೆ.

ಇದು ತುಳುನಾಡಿನಲ್ಲಿ ನವಗುಳಿಗ ನೆಲೆಯಾದ ಏಕೈಕ ಸ್ಥಳ ಇದಾಗಿದೆ. ಈ ಬಾರಿಯ 8ನೇ ವರ್ಷದ ವಾರ್ಷಿಕ ಉತ್ಸವವೂ ಅತ್ಯಂತ ಯಶಸ್ವಿಯಾಗಿ ನಡೆಯಿತು. ಈ ವೇಳೆ ಏಕಕಾಲದಲ್ಲಿ ಒಂಬತ್ತು ದೈವಗಳಿಗೆ ಕೋಲ ಸೇವೆ ಜರಗಿತು. ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯ ಮುಂಭಾಗದಲ್ಲೇ ಈ ನವ ಗುಳಿಗನ ಸಾನಿಧ್ಯ ಇದ್ದು, ಈ ಹಿಂದೆ ಒಂದು ಗುಳಿಗ ದೈವಕ್ಕೆ ಮಾತ್ರ ನೇಮೋತ್ಸವ ನಡೆಯುತ್ತಿತ್ತು. ಆದ್ರೆ ಪ್ರಶ್ನಾ ಚಿಂತನೆಯಲ್ಲಿ ನವಗುಳಿಗ ದೈವ ಇಲ್ಲಿ ನೆಲೆಯೂರಿದೆ ಎಂದು ತಿಳಿದುಬಂದಿತ್ತು. ಹೀಗಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನವಗುಳಿಗ ದೈವಗಳಿಗೆ ಕೋಲ ನಡೆಯುತ್ತದೆ.

ಈ ನವ ಗುಳಿಗ ದೈವಗಳೇ ಕ್ಷೇತ್ರದ ರಕ್ಷಣೆಯನ್ನು ಮಾಡುತ್ತಿದ್ದು ನಂಬಿ ಬರುವ ಭಕ್ತರ ಸಂಕಷ್ಟಗಳನ್ನು ಸಹ ದೂರ ಮಾಡುತ್ತಿದೆ. ಕೇವಲ ಜಿಲ್ಲೆ ಮಾತ್ರವಲ್ಲದೇ ಹೊರೆ ಜಿಲ್ಲೆಯ ಭಕ್ತರು ಸಹ ಇಲ್ಲಿ ಬಂದು ಪ್ರಾರ್ಥನೆ ಮಾಡಿಕೊಂಡು ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಿದ್ದಾರೆ.

Related Posts

Leave a Reply

Your email address will not be published.