ಬೆಳ್ತಂಗಡಿ: ಎಳನೀರು ಪ್ರದೇಶದಲ್ಲಿ ರಸ್ತೆ ವೀಕ್ಷಿಸಿದ ಶಾಸಕಿ ನಯನ ಮೋಟಮ್ಮ

ಬೆಳ್ತಂಗಡಿಯ ದಿಡುಪೆಯಿಂದ ಸಂಸೆ ರಸ್ತೆಯನ್ನು ಮಾಡಲು ಶೀಘ್ರದಲ್ಲಿ ಅಧಿಕಾರಿಗಳನ್ನು ಕರೆದು ಮಾತನಾಡುತ್ತೇನೆ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು.

ಅವರು, ಬೆಳ್ತಂಗಡಿ ತಾಲೂಕಿನ ಎಳನೀರು ಪ್ರದೇಶದಲ್ಲಿ ರಸ್ತೆ ವೀಕ್ಷಿಸಿ ಅವರು ಮಾತನಾಡಿದರು. ಕಲಸ ಹೊರನಾಡು ಈ ಪ್ರದೇಶದ ಜನರಿಗೆ ಹಾಸ್ಪಿಟಲ್, ವಿದ್ಯಾಭ್ಯಾಸ ಹಾಗೂ ವಿವಿಧ ಕ್ಷೇತ್ರಕ್ಕೆ ಸುಬ್ರಹ್ಮಣ್ಯ ಧರ್ಮಸ್ಥಳಕ್ಕೆ ಹೋಗಲು ಇದು ಬಹಳ ಹತ್ತಿರ ಇರುವುದರಿಂದ ಈ ರಸ್ತೆಯನ್ನು ಸರಿಪಡಿಸಲು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳನ್ನು ಹಾಗೂ ಸಚಿವರನ್ನು ಭೇಟಿ ಮಾಡಿ ಕೂಡಲೇ ಪರಿಹಾರ ಕೈಗೊಳ್ಳುವುದಾಗಿ ಹೇಳಿದರು.

ಇದೇ ವೇಳೆ ಮಾತನಾಡಿದ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ರವರು ಎಳನೀರು ಸಂಸೆ ದಿಡುಪೆ ರಸ್ತೆಗಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡಲಾಗಿದೆ ಇವತ್ತು ನಾನು ಹಾಗೂ ಮೂಡಿಗೆರೆ ಕ್ಷೇತ್ರದ ಶಾಸಕರಾದ ನಯನ ನಯನ ಮೋಟಮ್ಮನವರು ಎಲ್ಲಾ ಅಧಿಕಾರಿಗಳ ಜೊತೆ ಸಭೆ ಕರೆದು ಮಾತನಾಡಿ ಶೀಘ್ರವೇ ರಸ್ತೆಯನ್ನು ನಿರ್ಮಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ಮಾತನಾಡಿದರು.

ಶಾಸಕರುಗಳ ಜೊತೆ ಎರಡು ಕ್ಷೇತ್ರದ ಮುಖಂಡರು ಹಾಗೂ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.