ಬಿಜೆಪಿ ಆಭ್ಯರ್ಥಿ ಕುಮಾರಿ ಭಾಗೀರತಿ ಮುರುಳ್ಯರಿಂದ ಬಿರುಸಿನ ಪ್ರಚಾರ

ಬಿಜೆಪಿ ಆಭ್ಯರ್ಥಿ ಕುಮಾರಿ ಭಾಗೀರತಿ ಮುರುಳ್ಯರಿಂದ ಬಿರುಸಿನ ಪ್ರಚಾರ ಅಜ್ಜಾರವರ ಗ್ರಾಮದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ-2023ಗೆ ಭಾಜಪಾ ಸುಳ್ಯ ವತಿಯಿಂದ ಮತಪ್ರಚಾರ ನಡೆಸಲಾಯಿತು.ಕಾರ್ಯಕರ್ತರನ್ನು ಉದ್ದೇಶಿಸಿ ಕ್ಷೇತ್ರ ಚುನಾವಣಾ ಮಾದ್ಯಮ ವಕ್ತಾರ ವೆಂಕಟ್ ದಂಬೆಕೊಡಿ ಭಾರತವನ್ನು ಪರಮ ವೈಭವದಲ್ಲಿ ಕಾಣುವುದಕ್ಕಾಗಿ ಸುಳ್ಯದ ಮೆನಾಲದಿಂದ ಪ್ರಾರಂಭವಾಗಲಿ, ನಮ್ಮದು ಕಾರ್ಯಕರ್ತರ ಪಕ್ಷ ನಮ್ಮ ಕಾರ್ಯಕರ್ತರಿಗೆ ಪಕ್ಷ ಮುಖ್ಯ ವ್ಯಕ್ತಿ ಅಲ್ಲಾ ಎಂದು ತೋರಿಸಿಕೊಟ್ಟ ಕ್ಷೇತ್ರ ಸುಳ್ಯ , ನಮ್ಮ ಅಭ್ಯರ್ಥಿಯನ್ನು 30ಸಾವಿರ ಅಂತರರಿಂದ ಗೆಲ್ಲುವವುದು ನಮ್ಮ ಗುರಿ ಎಂದು ಕರೆ ನೀಡಿದರು.

ಭಾಗೀರಥಿ ಮುರುಳ್ಯ ಮಾತನಾಡಿ ನನ್ನನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ನಾನು ಆ ಸ್ಥಾನಕ್ಕೆ ನ್ಯಾಯಯುತವಾದ ಕೆಲಸವನ್ನು ಮಾಡುತ್ತನೆ ಎಂದರು, ಈ ಸಂದರ್ಭದಲದಲ್ಲಿ ಬಿಜೆಪಿ ಸುಳ್ಯಮಂಡಲ ಅಧ್ಯಕ್ಷರಾದ ಶ್ರೀ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೆನಾಲ,ಭಾಜಪ ಅಭ್ಯರ್ಥಿ ಕುಮಾರಿ ಭಾಗಿರಥಿ ಮುರುಳ್ಯ, ಜಿಲ್ಲಾ ರೈತ ಮೊರ್ಚಾದ ಉಪಾಧ್ಯಕ್ಷ ಮಹೇಶ್ ರೈ ಮೇನಾಲ,ಜಿಲ್ಲಾ ಯುವಮೊರ್ಚಾ ಅಧ್ಯಕ್ಷ ಗುರುದತ್ ನಾಯಕ್, ಸುಳ್ಯ ಮಂಡಲ ಸಾಮಾಜಿಕ ಜಾಲಾತಾಣದ ಸಹ ಸಂಚಾಲಕ ಪ್ರಸಾದ್ ಕಾಟೂರು,ಪಕ್ಷದ ಮಹಾಶಕ್ತಿ ಕೇಂದ್ರ ಆಧ್ಯಕ್ಷ ಜಯರಾಜ್ ಕುಕ್ಕೆಟ್ಟಿ ,ಪಂಚಾಯತ್ ರಾಜ್ ಜಿಲ್ಲಾ ಆಧ್ಯಕ್ಷ ಚನಿಯ ಕಲ್ತಡ್ಕ,ಗ್ರಾಮ ಪಂಚಾಯತ್ ಅಧ್ಯಕ್ಷರು ,ಮಹಿಳಾ ಪ್ರಮುಖಕರು, ಶಕ್ತಿ ಕೇಂದ್ರ ಪ್ರಮುಖರು, ಬೂತ್ ನ ವಿವಿಧ ಜವಾಬ್ದಾರಿಯ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.