ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋರ ಚುನಾವಣಾ ಕಚೇರಿ ಉದ್ಘಾಟನೆ


ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಅವರ ಚುನಾವಣಾ ಕಚೇರಿಯಯು ಸರ್ವಧರ್ಮದ ಮುಖಂಡರಿಂದ ಉದ್ಘಾಟನೆಗೊಂಡಿತ್ತು, ನಗರದ ನಂತೂರು ರಸ್ತೆಯಲ್ಲಿರುವ ಜಿಮ್ಮಿಸ್ ಸೂಪರ್ ಮಾರ್ಕೇಟ್ ಸಂಕೀರ್ಣದಲ್ಲಿ ನೂತನ ಚುನಾವಣಾ ಕಚೇರಿ ಉದ್ಘಾಟನೆಗೊಂಡಿತ್ತು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಅವರು, ಮುಂದಿನ ದಿನಗಳಲ್ಲಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಉತ್ತಮ ಸರ್ಕಾರ ರಚನೆಗೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು.
ಈ ವೇಳೆ ಮಣ್ಣಗುಡ್ಡೆಯ ಶ್ರೀ ನವದುರ್ಗ ದೇವಸ್ಥಾನದ ಪಂಡಿತ್ ವಿಶ್ವನಾಥ್ ಭಟ್, ಖತೀಬರರಾದ ಜನಾಬ್ ರಿಯಾಜ್ ಫೈಝಿ, ಬೆಂದೂರು ಚರ್ಚ್‍ನ ಸಹಾಯಕ ಧರ್ಮಗುರುಗಳಾದ ಫಾದರ್ ರೋನ್ಸನ್, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮುಖಂಡರಾದ ಮೊಹಮ್ಮದ್ ಮಸೂದ್, ಸುರೇಶ್ ಬಲ್ಲಾಳ್, ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲೀಂ,ಎಂ.ಜಿ.ಹೆಗ್ಡೆ, ಪಾಲಿಕೆ ಸದಸ್ಯರಾದ ನವೀನ್ ಡಿಸೋಜಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು

Related Posts

Leave a Reply

Your email address will not be published.