ಬ್ರಹ್ಮಾವರ ಠಾಣೆ : ಮುಟ್ಟುಗೋಲು ಹಾಕಿದ ದೋಣಿಗಳು – ಸಾಂಕ್ರಾಮಿಕ ರೋಗದ ಭೀತಿ
ಬ್ರಹ್ಮಾವರ ಪೊಲೀಸ್ ಠಾಣೆಯ ಬಳಿ 6 ವರ್ಷದಿಂದ ಅನಾಥವಾಗಿ ಬಿದ್ದ ಮರಳುಗಾರಿಕೆಗೆ ಬಳಸಲಾದ ಮುಟ್ಟುಗೋಲು ಹಾಕಲಾದ ದೋಣಿಗಳು ಇಲ್ಲಿನ ಪರಿಸರ ಸ್ವಾಸ್ಯ ಹಾಳುಮಾಡುವಂತಿದೆ.
ಸೀತಾನದಿಯಲ್ಲಿ ಬ್ರಹ್ಮಾವರ ಬಳಿಯ ಹಂದಾಡಿ ಮರ್ಬು ಎನ್ನುವಲ್ಲಿ 6 ವರ್ಷದ ಹಿಂದೆ ಆಕ್ರಮ ಮರಳುಗಾರಿಕೆ ಬಳಸಲಾದ ದೋಣಿ ಎಂದು ಕುಂದಾಪುರ ಅಸಿಸ್ಟೆಂಟ್ ಕಮಿಷನರ್ ಭೂಭಾಲನ್ ನೇತೃತ್ವದಲ್ಲಿ 21 ದೋಣಿಗಳನ್ನು ಮುಟ್ಟುಗೋಲು ಹಾಕಿ ಬ್ರಹ್ಮಾವರ ಪೆÇಲೀಸ್ ಠಾಣೆ ಬಳಿ ಇರಿಸಲಾಗಿತ್ತು.
6 ವರ್ಷದಿಂದ ದೋಣಿಗಳು ಮಳೆ ಬಿಸಿಲು ಬಿದ್ದು ಉಪಯೋಗಕ್ಕೆ ಬಾರದಂತಿದೆ. ಮಳೆಗಾಲ ಆರಂಭವಾದರೆ ಬಾಯಿ ತೆರೆದುಕೊಂಡಿರುವ ದೋಣಿಯಲ್ಲಿ ಮಳೆನೀರು ಶೇಖರಣೆಗೊಂಡು ಹಲವಾರು ಸಾಂಕ್ರಾಮಿಕ ರೋಗಕ್ಕೆ ಅನುವು ಆಗುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಠಾಣೆಯ ಬಳಿ ವಾರಂಬಳ್ಳಿ ಗ್ರಾಮ ಪಂಚಾಯತಿ, 3000 ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ನಾಲ್ಕಾರು ಶಾಲೆಗಳು, ಬಸ್ ನಿಲ್ದಾಣ, ಅಂಚೆ, ಪಾಸ್ ಪೋರ್ಟ್, ಶಿಕ್ಷಣ ಕಛೇರಿ ಇಲ್ಲಿದೆ. ಆದುದರಿಂದ ಸಂಭಂದ ಪಟ್ಟ ಇಲಾಖೆಯವರು ಹಳೆಯದಾದ ನಿರುಪಯುಕ್ತ ದೋಣಿಗಳನ್ನು ಸೂಕ್ತ ವಿಲೇವಾರಿ ಮಾಡಿ ಮುಂಜಾಗ್ರತಾ ಕ್ರಮ ಮಾಡಬೇಕಾಗಿದೆ.