ಬಿಜೆಪಿಯು ನಮ್ಮ ಹಣ ಕದಿಯುತ್ತಿದೆ : ಕೆ. ಸಿ. ವೇಣುಗೋಪಾಲ್
ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಹಾಗೂ ಕಾಂಗ್ರೆಸ್ಸಿನ ಬ್ಯಾಂಕ್ ಖಾತೆಗಳಿಂದ ಆದಾಯ ತೆರಿಗೆ ಇಲಾಖೆಯು 65.89 ಕೋಟಿ ರೂಪಾಯಿ ಕತ್ತರಿಸಿಕೊಳ್ಳುತ್ತಿದೆ ಇದು ಬಿಜೆಪಿ ಕದಿಯುತ್ತಿರುವ ಹಣ ಎಂದು ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಆಪಾದಿಸಿದರು.
ನಾವು ಕೇಂದ್ರದಲ್ಲಿ ಆಳುತ್ತಿದ್ದಾಗ ಬಿಜೆಪಿ ವಿಷಯದಲ್ಲಿ ನಾವು ಹೀಗೆ ಎಂದೂ ಹೀಗೆ ನಡೆದುಕೊಂಡಿಲ್ಲ. ಬಿಜೆಪಿಯು ರಾಜಕೀಯ ಪಕ್ಷವಾಗಿ ಎಂದೂ ತೆರಿಗೆ ಕಟ್ಟಿಲ್ಲ. ಆದರೆ ನಮ್ಮ ಖಾತೆಗೆ ತೆರಿಗೆ ಎನ್ನುತ್ತಿದೆ. ಯಾರು ಬಾಂಡ್ ಹೆಸರಿನಲ್ಲಿ ಹಣ ದೋಚಿದವರು. ಬಿಜೆಪಿ ಈಗ ನಡೆಸಿರುವುದು ಕಾಂಗ್ರೆಸ್ ಖಾತೆಗೆ ಕನ್ನ ಎಂದು ವೇಣುಗೋಪಾಲ್ ಆಪಾದಿಸಿದರು.
ಬಿಜೆಪಿಯು ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಪ್ರತಿ ಕ್ಷಣ ಕೆಲಸ ಮಾಡುತ್ತಿದೆ. ಇದು ಅದರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಕಾಂಗ್ರೆಸ್ಸು ಕಾರ್ಯಕರ್ತರಿಂದ ಒಗ್ಗೂಡಿಸಿದ ಹಣವಿದು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಈ ರೀತಿ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಬಿಜೆಪಿಯಾಗಲಿ, ಕಾಂಗ್ರೆಸ್ ಅಗಲಿ ತೆರಿಗೆ ಕಟ್ಟುತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ 210 ಕೋಟಿ ರೂಪಾಯಿ ತೆರಿಗೆ ಕಟ್ಟಿ ಎನ್ನುವ ಒತ್ತಡ ಹೇರಲಾಗಿದೆ.