ಪದ್ಮಜಾ ಬಿಜೆಪಿಗೆ ವಲಸೆ : ಮುರಳೀಧರನ್‌ಗೆ ಟಿಕೆಟ್
ಕೇರಳದ ಮುಖ್ಯಮಂತ್ರಿಯಾಗಿದ್ದ ಎ. ಕೆ. ಕರುಣಾಕರ್ ಮಕ್ಕಳು ಎರಡು ದಾರಿ ಹಿಡಿದಿದ್ದರೂ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳದೆ ಮುರಳೀಧರನ್‌ರಿಗೆ ಟಿಕೆಟ್ ನೀಡಿದೆ.
ಮರಳೀಧರನ್‌ರು ಸದ್ಯ ವಡಕ್ಕರ ಸಂಸದರು. ಆದರೆ ಅವರಿಗೆ ಈಗ ತ್ರಿಶೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ತ್ರಿಶೂರು ಕರುಣಾಕರನ್‌ರ ಮೂಲ ನೆಲೆ. ಪದ್ಮಜಾರು ಬಿಜೆಪಿಗೆ ಸೇರಿರುವುದರಿಂದ ಮುರಳೀಧರನ್‌ರಿಗೆ ಕ್ಷೇತ್ರ ಬದಲಿಸಿ ಟಿಕೆಟ್ ನೀಡಲಾಗಿದೆ. ತ್ರಿಶೂರ್‌ನಲ್ಲಿ ಲೋಕಸಭೆಗೆ ಸ್ಪರ್ಧಿಸಿದ ಕರುಣಾಕರನ್ ಸೋತಿದ್ದರು. 1998ರಲ್ಲಿ ಮುರಳೀಧರನ್ ಕೂಡ ಆ ಕ್ಷೇತ್ರದಲ್ಲಿ ಸೋತಿದ್ದರು. ೨೦೧೬ ಮತ್ತು ೨೦೨೧ರಲ್ಲಿ ತ್ರಿಶೂರ್ ವಿಧಾನ ಸಭಾ ಕ್ಷೇತ್ರದಲ್ಲಿ ಪದ್ಮಜಾ ಅವರು ಸ್ಪರ್ಧಿಸಿ ಎರಡೂ ಬಾರಿ ಸೋತಿದ್ದರು. ತ್ರಿಶೂರ್ ಹಾಲಿ ಸಂಸದ ಟಿ. ಎನ್. ಪ್ರತಾಪನ್ ಸಹ ಪ್ರಚಾರ ಆರಂಭಿಸಿದ್ದಾರೆ ಎನ್ನಲಾಗಿದೆ.