ಮಂಗಳೂರಿನಲ್ಲಿ ಜ್ಞಾನ ಜ್ಯೋತಿ ಕೋಚಿಂಗ್ ಕ್ಲಾಸ್ ಉದ್ಘಾಟನೆ

ಜ್ಞಾನ ಜ್ಯೋತಿ ಕೋಚಿಂಗ್ ಕ್ಲಾಸ್ ಶ್ರೀ ಗೋಕರ್ಣನಾತೆಶ್ವರ ದೇವಸ್ಥಾನದ ಪ್ರವೇಶ ದ್ವಾರಾದ ಹತ್ತಿರ ಇರುವ ಶಿವಗಿರಿ ಅಪಾರ್ಟ್ಮೆಂಟ್ ಪ್ಲಾಟ್ ನಂಬರ್ 305ರಲ್ಲಿ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ ಉಪ ಕುಲಸಚಿವರು ಆಗಿರುವ ಡಾ. ಪ್ರಭಾಕರ್ ನೀರ್ ಮಾರ್ಗ ಅವರ ಅಮೃತ ಹಸ್ತದಿಂದ ಉದ್ಘಾಟಿಸಲ್ಪಟ್ಟಿತು. ನಾರಾಯಣ ಗುರು ಪ್ರಥಮ

ದ.ಕ.ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫೂ ರದ್ದಾಗಲಿ :ಸಿಪಿಐ(ಎಂ)

ಕೊರೋನಾ ನಿಯಂತ್ರಣದ ಹೆಸರಿನಲ್ಲಿ ಎಲ್ಲಾ ವಿಭಾಗದ ಜನತೆಗೆ ವಿನಾಃ ಕಾರಣ ತೊಂದರೆ ನೀಡುವ ವಾರಾಂತ್ಯದ ಕರ್ಫ್ಯೂವನ್ನು ಕೂಡಲೇ ರದ್ದುಮಾಡಬೇಕೆಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ದ.ಕ. ಜಿಲ್ಲಾಡಳಿತವನ್ನು ಒತ್ತಾಯಿಸಿದೆ. CPIM ಹಿರಿಯ ನಾಯಕರಾದ ಕಾಂ.ಕೆ ಆರ್ ಶ್ರೀಯಾನ್ ರವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಸಿಪಿಐ(ಎಂ)ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದ್ದು, ಇಂತಹ ಅವೈಜ್ಞಾನಿಕ ಕರ್ಫೂನಿಂದಾಗಿ ಕೋರೋನ ನಿಯಂತ್ರಣ

ವೀಕೆಂಡ್ ಕರ್ಫ್ಯೂ ವಿರೋಧಿಸಿ ವ್ಯವಹಾರ ನಡೆಸಲು ಪುತ್ತೂರು ವರ್ತಕರ ಸಂಘ ತೀರ್ಮಾನ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟೀವಿಟಿ ರೇಟ್ ಕಡಿಮೆಯಾಗದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಈ ವಾರವೂ ವೀಕೆಂಡ್ ಕರ್ಫೂ ಹೇರಲಾಗಿದೆ. ಆದರೆ ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಇದೀಗ ವರ್ತಕರ ಸಂಘ ವಿರೋಧ ವ್ಯಕ್ತಪಡಿಸಲಾರಂಭಿಸಿದೆ. ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು ನಗರ, ಉಪ್ಪಿನಂಗಡಿ ಹಾಗೂ ನೆಲ್ಯಾಡಿ ಪೇಟೆಗಳಲ್ಲಿ ಈ ವಾರ ವೀಕಂಡ್ ಕರ್ಫೂ ನಲ್ಲಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ತೆರೆದಿಟ್ಟು, ಕೊರೊನಾ ಮಾರ್ಗಸೂಚಿ ಉಲ್ಲಂಘಿಸುವ ನಿರ್ಧಾರಕ್ಕೆ

ಬಸ್ ಮಾಲಕರ ಲಾಬಿಗೆ ಶರಣಾದ ಜಿಲ್ಲಾಡಳಿತ : ಸುನಿಲ್ ಕುಮಾರ್ ಬಜಾಲ್

ಖಾಸಗಿ ಬಸ್ ಪ್ರಯಾಣ ದರವನ್ನು ವಿಪರೀತವಾಗಿ ಏರಿಸುವ ಮೂಲಕ ದ.ಕ.ಜಿಲ್ಲಾಡಳಿತ ಸಂಪೂರ್ಣವಾಗಿ ಬಸ್ ಮಾಲಕರ ಲಾಬಿಗೆ ಶರಣಾಗಿದೆ. ಬೆರಳೆಣಿಕೆಯಷ್ಟು ಇರುವ ಬಸ್ ಮಾಲಕರ ಸಂಕಷ್ಟದ ಬಗ್ಗೆ ಭಾರೀ ಕಾಳಜಿ ವ್ಯಕ್ತಪಡಿಸುವ ಜಿಲ್ಲಾಧಿಕಾರಿಗಳು,ಜಿಲ್ಲೆಯ ಲಕ್ಷಾಂತರ ಜನತೆಯ ಸಂಕಷ್ಟವನ್ನು ಅರಿಯಲು ವಿಫಲರಾಗಿದ್ದಾರೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು. ಖಾಸಗೀ ಬಸ್ ಪ್ರಯಾಣ ದರಯೇರಿಕೆಯ ವಿರುದ್ಧ

V4STREAM OTT ಯಲ್ಲಿ “ನಸೀಬ್”- ಏರೆಗುಂಡು ಏರೆಗಿಜ್ಜಿ ತುಳು ಸಿನಿಮಾ ಬಿಡುಗಡೆ

ಮಂಗಳೂರು ಕ್ಯಾಮ್ ಫಿಲ್ಮ್ ಅರ್ಪಿಸುವ ಪ್ರೆಸ್ಟನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ತಯಾರಾದ ಹೆನ್ರಿ ಡಿಸಿಲ್ವ ನಿರ್ಮಿಸಿದ ಹ್ಯಾರಿ ಫೆರ್ನಾಂಡಿಸ್ ನಿರ್ದೇಶಿಸಿದ ನಶೀಬಾಚೊ ಖೆಳ್ ಕೊಂಕಣಿ ಚಲನಚಿತ್ರವು ಈಗ ನಸೀಬ್ ಏರೆಗುಂಡ ಏರೆಗಿಜ್ಜಿ ಹೆಸರಿನಲ್ಲಿ ತುಳು ಸಿನಿಮಾ ಆಗಿ ಡಬ್ಬಿಂಗ್ ಆಗಿದೆ. ಈ ತುಳು ಸಿನಿಮಾ ಸೆಪ್ಟಂಬರ್ 8ರಂದು ವಿ4 ಸ್ಟ್ರೀಮ್ ಬಿಡುಗಡೆಗೊಳ್ಳಲಿದೆ. ಸುಮಾರು 35 ವರ್ಷಗಳ ಹಿಂದೆ ಹೆನ್ರಿ ಡಿ ಸಿಲ್ವರವರು ರಚಿಸಿದ ಕಾಜಾರಾಚೆ ಉತಾರ್ ಎಂಬ ನಾಟಕದ ಮೂಲ

ವಾರಾಂತ್ಯ ಲಾಕ್ಡೌನ್ ವಿರೋಧಿಸಿ ವ್ಯವಹಾರ ನಡೆಸಲು ಕರಾವಳಿ ವರ್ತಕರ ತೀರ್ಮಾನ

ದ. ಕ , ಉಡುಪಿ ಜಿಲ್ಲೆಗಳಲ್ಲಿ ಸತತವಾಗಿ ವಾರಾಂತ್ಯ ಲಾಕ್ಡೌನ್ ಮುಂದುವರಿಸುತ್ತಿರುವುದರಿಂದ ಜನ ಸಾಮಾನ್ಯ ರಿಗೂ ಕೆಲ ವರ್ಗದ ವ್ಯಾಪಾರಿಗಳಿಗೂ ತೀವ್ರ ತೊಂದರೆ ಯಾಗಿದ್ದು ಅವೈಜ್ಞಾನಿಕ ಮತ್ತು ತಾರ ತಮ್ಯ ಗಳಿಂದ ಕೂಡಿದ ಈ ನಿರ್ಧಾರವನ್ನು ಪ್ರತಿಭಟಿಸಿ ಅಂಗಡಿ ತೆರೆದು ವ್ಯವಹಾರ ನಡೆಸಲು ಕರಾವಳಿ ಜಿಲ್ಲೆಗಳ ಜವಳಿ, ಪಾದರಕ್ಷೆ, ಫ್ಯಾನ್ಸಿ ಮುಂತಾದ ಅಂಗಡಿಗಳ ಮಾಲೀಕರು ನಿನ್ನೆ ನಡೆದ ಸಂಘದ ವಿಶೇಷ ಮಹಾ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡರು. ಪ್ರತೀ ಅಂಗಡಿಯವರು

ಪುತ್ತೂರು ಬಸ್ ನಿಲ್ದಾಣದಲ್ಲಿ ಯುವಕರಿಗೆ ಹಲ್ಲೆ ಪ್ರಕರಣ: ಇನ್ನೋರ್ವ ಆರೋಪಿ ಬಂಧನ

ಪುತ್ತೂರು: ಸ್ನ್ಯಾಪ್ ಚ್ಯಾಟ್ ಮೂಲಕ ಪರಿಚಯವಾದ ಪುತ್ತೂರಿನ ಯುವತಿಯ ಭೇಟಿಯಾಗಲು ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ರಾಯಚೂರಿನ ಯುವಕ ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಜುರುಪಾದೆಯ ಅಬ್ದುಲ್ ಮಜೀದ್, ಪಂಜ ಎಣ್ಮೂರಿನ ಪಾರೂಕ್ ಅವರನ್ನು ಸೆ.1ರಂದು ತಡ ರಾತ್ರಿಯೇ ಪೊಲೀಸರು ಬಂಧಿಸಿದ್ದರು. ಉಳಿದಂತೆ ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದ ಪೊಲೀಸರು ಇದೀಗ ಇನ್ನೋರ್ವ ಆರೋಪಿ ಅಲೆಬಿ ಎಂಬವರನ್ನು

ಕಾರ್ಮಿಕರ ಬೆವರಿನ ಹಣ ಲೂಟಿ ಮಾಡಲು ಬಿಡೆವು: ಸುರೇಶ್ ಕಲ್ಲಾಗರ್

ಕುಂದಾಪುರ: ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿ ಆರೊಂಭಗೊಂಡ ದಿನದಿಂದಲೂ ಯಾವ ಸರ್ಕಾವೂ ಕಟ್ಟಡ ಕಾರ್ಮಿಕರ ಹಣದ ಮೇಲೆ ಕಣ್ಣು ಹಾಕಿಲ್ಲ. ಆದರೆ ಇದೀಗ ಆಡಳಿತಕ್ಕೆ ಬಂದಿರುವ ಬಿಜೆಪಿ ಸರ್ಕಾರ ಕಟ್ಟಡ ಕಾರ್ಮಿಕರ ಹಣವನ್ನು ಲೂಟಿ ಮಾಡಲು ಮುಂದಾಗಿದೆ. ಬರೋಬ್ಬರಿ ಎರಡು ಸಾವಿರದ ಅರವತ್ತಾರು ಕೋಟಿ ರೂ. ಹಣವನ್ನು ವಿವಿಧ ಯೋಜನೆಗಳಿಗೆ ಮಂಜೂರು ಮಾಡಲು ತಯಾರಿ ನಡೆಸುತ್ತಿದೆ. ಕಾರ್ಮಿಕರ ಬೆವರಿನ ಹಣ ಲೂಟಿ ಮಾಡಲು ನಾವು ಬಿಡುವುದಿಲ್ಲ ಎಂದು ತಾಲೂಕು ಕಟ್ಟಡ ಮತ್ತು ಇತರೆ

ಸಂರಕ್ಷಕರ ವಿರುದ್ಧ ಹಿಂಸೆ ವಿಷಯದ ಮೇಲೆ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

ಮಣಿಪಾಲ :  ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲವು ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್, ಮತ್ತು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ವಿಧಿ ವಿಜ್ಞಾನ ವಿಭಾಗ, ಮಾಹೆ ಮಣಿಪಾಲದ ಸಹಯೋಗದೊಂದಿಗೆ,  ಮಣಿಪಾಲದ ಡಾ ಟಿಎಂಎ ಪೈ ಹಾಲ್ ನಲ್ಲಿ “ಸಂರಕ್ಷಕರ ವಿರುದ್ಧ ಹಿಂಸೆ ” ಕುರಿತು ಮುಂದುವರಿದ ವೈದ್ಯಕೀಯ ಶಿಕ್ಷಣವನ್ನು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂರಕ್ಷಕರ ವಿರುದ್ಧ ಹಿಂಸೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹಿಂಸಾಚಾರದ

ರಾಮಸೇನೆಗೆ ಸಾಮೂಹಿಕ ರಾಜೀನಾಮೆ

ಉಡುಪಿ ಜಿಲ್ಲಾ ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೇಕಲ್ಲುರವರು, ಸಂಘಟನೆಯ ರಾಜ್ಯ ಪ್ರ. ಕಾರ್ಯದರ್ಶಿಯವರ ಮಾತಿನಿಂದ ಬೇಸತ್ತು ಸಂಘಟನೆಗೆ ಒಂದು ವಾರದಿಂದ ಹಿಂದೆಯೇ ರಾಜೀನಾಮೆ ನೀಡಿದ್ದಾರೆ. ಆದರೇ ಸಂಘಟನೆಯ ರಾಜ್ಯ ನಾಯಕರು ಜಿಲ್ಲಾ ಪದಾಧಿಕಾರಿಗಳನ್ನು ಸಂಪರ್ಕಿಸದೆ ಇರುವುದು. ಹಾಗೂ ಜಿಲ್ಲಾಧ್ಯಕ್ಷರ ಮನವೋಳಿಕೆಗೆ ಪ್ರಯತ್ನಿಸದಿರುದನ್ನು ಮನಗಂಡು ಶ್ರೀ ರಾಮಸೇನೆಯ ಉಡುಪಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅತೀವಾ ನೋವಿನಿಂದ ಸಂಘಟನೆಗೆ