ವಿಧಾನಸಭೆ ಚುನಾವಣೆ ಹಿನ್ನೆಲೆ: ಬ್ರಹ್ಮಾವರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣಾ ಅಂಗವಾಗಿ ಬ್ರಹ್ಮಾವರ ತಾಲೂಕಿನಾದ್ಯಂತ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ನಡೆಯುತ್ತಿದೆ.
ಸಾಬರಕಟ್ಟೆಯಲ್ಲಿ 4 ರಸ್ತೆಗಳು ಕೂಡುವ ಅತೀ ಸೂಕ್ಷ್ಮ ಪ್ರದೇಶವಾದ ಶಿವಮೊಗ್ಗ , ಹೆಬ್ರಿ , ಉಡುಪಿ ಮತ್ತು ಕುಂದಾಪುರಕ್ಕೆ ಹೋಗುವಲ್ಲಿ ಕೋಟ ಠಾಣೆ ಮತ್ತು ಬ್ರಹ್ಮಾವರ 2 ಪೊಲೀಸ್ ಠಾಣಾ ವ್ಯಾಪ್ತಿ ಇದ್ದು ಅಲ್ಲಿ ಪೊಲಿಸ್ ಚೆಕ್ ಪೋಸ್ಟ್ ಮಾಡಲಾಗಿ ವಾಹನ ತಪಾಸಣೆಗಳು ನಡೆಯುತ್ತಿದೆ. ದಿನ 24 ಗಂಟೆಯು 3 ಪಾಳಯದಲ್ಲಿ ಸ್ಥಳಿಯ ಪೊಲೀಸ್ ಮತ್ತು ಅರೆ ಸೇನಾ ಪಡೆ ಮತ್ತು ಹೊರ ರಾಜ್ಯದ ಪೊಲೀಸ್ ಮತ್ತು ಸ್ಥಳಿಯ ಗ್ರಾಮ ಪಂಚಾಯತಿಯ ಬಿಎಲ್ ಓ ಗಳು ಸಿಬ್ಬಂದಿಗಳು ಪ್ರತೀ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.
ಹೊರ ರಾಜ್ಯದಿಂದ ಬಂದ ಪೊಲೀಸ್ ಮತ್ತು ಅರೆ ಸೇನಾ ಪಡೆಯವರೀಗೆ ಇಲ್ಲಿನ ಆರೂರು ಮೊರಾರ್ಜಿ ಶಾಲೆ ಮತ್ತು ಸಾಯಿಬರ ಕಟ್ಟೆ ಶಾಲೆಯಲ್ಲಿ ವಾಸ್ಥವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮೇ 15ರ ತನಕ ವಾಸ್ತವ್ಯ ಇದ್ದು ತಪಾಸಣೆಗಳು ಮತ್ತು ಶಾಂತಿ ಸುವ್ಯವಸ್ಥೆ ಭದ್ರತೆ ನಡೆಯುತ್ತಿದೆ.