ಕುಂದಾಪುರ : ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಮತಯಾಚನೆ
ಕುಂದಾಪುರ ವಿಧಾನ ಸಭಾ ಕೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಕಾರ್ಯಕರ್ತರೊಂದಿಗೆ ಬಾರಕೂರು ಭಾಗದಲ್ಲಿ ಮತಯಾಚನೆ ಮಾಡಿದರು.ರಂಗನಕೆರೆ ಶೆಟ್ಟಿಗಾರ್ ಇಂಡಸ್ಟ್ರೀಸ ಕಾರ್ಮಿಕರಲ್ಲಿ ಮತ್ತು ಗೇರು ಬೀಜ ಫ್ಯಾಕ್ಟರಿಯ ಕಾರ್ಮಿಕರು ಸೇರಿದಂತೆ ಕೂರಾಡಿ ಬಾರಕೂರು ನಗರ ಭಾಗ ಸೇರಿದಂತೆ ನಾನಾ ಭಾಗದ ಮತದಾರರನ್ನು ಭೇಟಿಯಾಗಿ ಮತಯಾಚಿಸಿದರು.
ಈ ಸಂದರ್ಬ ಅವರು ಮಾತನಾಡಿ ಕುಂದಾಪುರ ವಿಧಾನ ಸಭಾ ಕ್ಷೇತ್ರ ಕಳೆದ ಹಲವಾರು ವರ್ಷದಿಂದ ಒಂದೆ ವ್ಯಕ್ತಿ ಒಂದೆ ಪಕ್ಷ ಪ್ರತಿನಿಧಿಸಿದೆ ಈ ಬಾರಿ ಮತದಾರರು ಬದಲಾವಣೆ ಮಾಡಿ ಹೊಸ ಅಭ್ಯರ್ಥಿಯಾದ ನನಗೆ ಮತ ನೀಡಿ ಬೆಂಬಲಿಸಿ ಎಂದರು. ಈ ಸಂದರ್ಭ ಕಾಂಗ್ರೇಸ್ ಮುಖಂಡರುಗಳಾದ ವಿಕಾಸ್ ಹೆಗ್ಡೆ ,ರಮಾನಂದ ಶೆಟ್ಟಿ ಬಾರಕೂರು, ಉಲ್ಲಾಸ್ ಶೆಟ್ಟಿ , ರತ್ನಾಕರ ಶೆಟ್ಟಿ, ಚರಣ್ ಶೆಟ್ಟಿ, ನಿತ್ಯಾನಂದ ಶೆಟ್ಟಿ ನಡೂರು , ಮಂಜುನಾಥ್ ಪೂಜಾರಿ , ಗಣೇಶ್ ಗಾಣಿಗ, ಇನ್ನಿತರು ಜೊತೆಯಲ್ಲಿದ್ದರು.