ಬ್ರಹ್ಮಾವರ :ಬಿರ್ತಿಯ ಅರ್ವಿಶ್ ಕೈಚಳಕದಲ್ಲಿ ಮೂಡಿದ ಗಣಪ

ವಿಶ್ವದಾದ್ಯಂತ ಮುಂದಿನವಾರದಿಂದ ನಡೆಯುವ ಶ್ರೀ ಗಣೇಶೋತ್ಸವದ ಸಂಭ್ರಮಕ್ಕೆ ಗಣಪತಿ ವಿಗ್ರಹ ರಚನೆಗಳು ಬಹುತೇಕ ಕಡೆಯಲ್ಲಿ ಅಂತಿಮ ಹಂತ ನಡೆಯುತ್ತಿದ್ದರೆ ಬ್ರಹ್ಮಾವರ ಬಿರ್ತಿಯ 1 ನೇತರಗತಿಯ ವಿದ್ಯಾರ್ಥಿ ಅರ್ವಿಶ್ ಶಾಲಾ ಸಮಯದ ಬಳಿಕ ಮನೆಯಲ್ಲಿ ನಾನಾ ಗಣಪತಿಯನ್ನು ರಚನೆ ಮಾಡಿ ಗಮನಸೆಳೆಯುತ್ತಿದ್ದಾನೆ.

ಎಸ್ ಎಂ ಎಸ್.ಸಿಬಿಎಸ್ ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಈತ ಬಾಲ್ಯದಿಂದಲೂ ಚಿತ್ರ ರಚನೆ ರಕ್ತಗತವಾಗಿ ಬಂದಿದ್ದು, ಕಳೆದ 2 ವರ್ಷದಿಂದ ಚೌತಿಯ ಸಮಯದಲ್ಲಿ ಮಣ್ಣಿನಲ್ಲಿ ಚಿಕ್ಕ ಗಣಪತಿಯನ್ನು ಸ್ವತ: ಅರ್ವಿಶ್ ಮಾಡಿ ಅದಕ್ಕೆ ಬಣ್ಣವನ್ನು ನೀಡಿ ಅಲಂಕಾರಿಕ ಬಟ್ಟೆಗಳನ್ನು ತೊಡಿಸಿ ಮತ್ತೆ ಒಂದು ದಿನ ಮನೆಯಲ್ಲಿ ಪಾತ್ರೆಯೊಂದರಲ್ಲಿ ಜಲಸ್ಥಂಭನ ಮಾಡುತ್ತಾನೆ.

ಈ ವರ್ಷ ಕೂಡಾ ಕೆಲವು ದಿನದಿಂದ ಈತನ ಶಾಲಾ ಶಿಕ್ಷಣದ ನಡುವೆ ನಾಲ್ಕಾರು ಗಣಪತಿ ವಿಗ್ರಹ ರಚನೆ ಮಾಡುತ್ತಿದ್ದು ಅಂತಿಮ ಹಂತದ ಬಣ್ಣಗಳ ಸ್ಫರ್ಷ ಮಾಡುತ್ತಿದ್ದಾನೆ. ಶಾಲಾ ಶಿಕ್ಷಕರಾದ ತಂದೆ ಹರೀಶ್ ಕುಮಾರ್ ಮತ್ತು ತಾಯಿ ರಮ್ಯ ಈತನ ಕಲಾಪ್ರತಿಭೆಗೆ ಪೂರಕವಾಗಿ ಪ್ರೋತ್ಸಾಹ ನೀಡುತ್ತಿದ್ದು ಶಾಲೆಯಲ್ಲಿ ಕೂಡಾ ಶಿಕ್ಷಣದಲ್ಲಿ ಮತ್ತು ಚಿತ್ರಕಲೆಯಲ್ಲಿ ಪ್ರತಿಭೆಮೆರೆಯುತ್ತಿದ್ದಾನೆ.
