ಬ್ರಹ್ಮಾವರದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ-2023
ಬ್ರಹ್ಮಾವರ : ಯಕ್ಷ ಶಿಕ್ಷಣ ಟ್ರಸ್ಟ್ , ಪ್ರದರ್ಶನ ಸಂಘಟನಾ ಸಮಿತಿ ಬ್ರಹ್ಮಾವರ ವತಿಯಿಂದ 8 ದಿನಗಳ ಕಾಲ ನಡೆಯುವ ಕಿಶೋರ ಯಕ್ಷಗಾನ ಸಂಭ್ರಮ -2023 ಬ್ರಹ್ಮಾವರ ಬಂಟರ ಭವನದ ಬಳಿ ನಡೆಯಿತು. ನಾಡೋಜ ಡಾ.ಜಿ ಶಂಕರ್ ಉದ್ಘಾಟಿಸಿದರು. ಬ್ರಹ್ಮಾವರದಲ್ಲಿ 14 ಶಾಲೆಯಿಂದ ಗುರುಗಳಿಂದ ತರಬೇತಿ ಪಡೆದ 15 ಪ್ರಸಂಗ ಪ್ರದರ್ಶನ ನಡೆಯಲಿದೆ. ನಾನಾ ಪ್ರಸಾಧನ ಕಲೆಗಾರರಿಂದ ದೇವ, ದಾನವರ ವೇಶ ಭೂಷಣ, ಯಕ್ಷಗಾನದ ಸಾಂಪ್ರದಾಯಕ ಹೆಜ್ಜೆ, ಮಾತು, ರಂಗಸ್ಥಳ ಸಂಪ್ರದಾಯದಿಂದ ನಡೆಯುವ ಯಕ್ಷಗಾನ ವ್ಯವಸಾಯಿ ಕಲಾವಿದರು ಮೆಚ್ಚುವಂತಿರುತ್ತದೆ.
ಯಕ್ಷಗಾನ ದಲ್ಲಿ ತೊಡಗಿಸಿಕೊಂಡ ಅನೇಕ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಕೂಡಾ ಸಾಧಕರಾಗಿದ್ದು, ಕೆಲವರು ಮೇಳದ ಕಲಾವಿದರಾಗಿದ್ದಾರೆ. ಹೊರ ರಾಜ್ಯದ ವಿದ್ಯಾರ್ಥಿಗಳು ಒಟ್ಟು 3000 ವಿದ್ಯಾರ್ಥಿಗಳಲ್ಲಿ 75 ಶೇಖಡ ಯುವತಿಯರು ಯಕ್ಷ ಶಿಕ್ಷಣದಲ್ಲಿದ್ದು, ಬಡಗುತಿಟ್ಟಿನ ಯಕ್ಷಗಾನ ಕಲೆಯನ್ನು 100 ವರ್ಷ ಜೀವಂತಗೊಳಿಸಲಿದ್ದು ಇದು ಕಲಾ ಕ್ಷೇತ್ರದಲ್ಲಿ ಇದೊಂದು ವಿನೂಥನ ಸಾಧನೆಯಾಗಿದೆ.