ಕ್ರೀಡೆಯಿಂದ ಮಕ್ಕಳ ಮಾನಸಿಕ,ಶೈಕ್ಷಣಿಕ ಮತ್ತು ದೈಹಿಕ ಸಮತೋಲನ ಸಾಧ್ಯ – ನವೀನ್ ಹರಿಪಾದೆ
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಎಸ್. ಕೋಡಿ, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ ಆಶ್ರಯದಲ್ಲಿ ಕ್ರೀಡಾಕೂಟವನ್ನು ದಿನಾಂಕ 11.08.2024 ರಂದು ಭಾರತ್ ಮಾತಾ ಪ್ರಾಥಮಿಕ ಶಾಲೆ, ಪುನರೂರು ಇಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ಶ್ರೀ ನವೀನ್ ಕೋಟ್ಯಾನ್ ಹರಿಪಾದೆಯವರು ವಹಿಸಿ ಕ್ರೀಡೆಯಿಂದ ಮಕ್ಕಳ ಮಾನಸಿಕ,ಶೈಕ್ಷಣಿಕ ಮತ್ತು ದೈಹಿಕ ಸಮತೋಲನ ಸಾಧ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಕಾರ್ಯಕ್ರಮವನ್ನು ಪಡುಪಣಂಬೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಹೇಮನಾಥ್ ಅಮೀನ್ ದೀಪ ಪ್ರಜ್ವಲನೆಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಜೊತೆ ಕಾರ್ಯದರ್ಶಿಯಾದ ಭಾಸ್ಕರ್ ಅಮೀನ್ ತೋಕೂರು, ಮಹಿಳಾ ಅಧ್ಯಕ್ಷರಾದ ಶಾಂತ ಕರ್ಕೇರ, ಯುವ ವೇದಿಕೆಯ ಅಧ್ಯಕ್ಷರಾದ ಪವನ್,ಸಾಂಸ್ಕೃತಿಕ ಕಾರ್ಯದರ್ಶಿಯಾದ ತಿಲಕ್, ಕ್ರೀಡಾ ಕಾರ್ಯದರ್ಶಿ ಲೋಹಿತ್, ಮಹಿಳಾ ಕ್ರೀಡಾ ಕಾರ್ಯದರ್ಶಿ ಶಶಿಕಲಾರವರು ಉಪಸ್ಥಿತರಿದ್ದರು.

ಮಕ್ಕಳಿಗೆ ಹಾಗೂ ಸಂಘದ ಸದಸ್ಯರಿಗೆ ವಿವಿಧ ವಿಭಾಗಗಳಲ್ಲಿ ಕ್ರೀಡಾ ಸ್ಪರ್ಧೆಗಳನ್ನು ನೆರವೇರಿಸಲಾಯಿತು
ಕಾರ್ಯಕ್ರಮದಲ್ಲಿ ಮಹಿಳಾ ವೇದಿಕೆಯ ಸಾಂಸ್ಕೃತಿಕ ಕಾರ್ಯದರ್ಶಿ ಬಬಿತಾ ಜೆ. ಸುವರ್ಣ ರವರು ಪ್ರಾರ್ಥನೆಗೈದು, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆಯ ಕೋಶಾಧಿಕಾರಿ ಸುನೀತಾ ಗುರುರಾಜ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.



















