ಬ್ರಹ್ಮಾವರ: ಸುಜ್ಞಾನ ತೀರ್ಥರ 41ನೇ ಆರಾಧನಾ ಮಹೋತ್ಸವ

ಬ್ರಹ್ಮಾವರದ ಹಾನಸ ಅರೆಮಾದನಹಳ್ಳಿ ಸುಜ್ಞಾನ ತೀರ್ಥ ಮಹಾ ಸ್ವಾಮೀಜಿಯವರ 41 ನೇ ಆರಾಧನಾ ಮಹೋತ್ಸವ ನಡೆಯಿತು.
ಉಡುಪಿ ಜಿಲ್ಲೆಯ ಕೊಕ್ಕರ್ಣೆಬಳಿಯ ಶಾಖಾ ಮಠ ಕಜ್ಕೆಯಲ್ಲಿ ಗುರುಪರಂಪರೆಯ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಆಚರಣೆಯ ಸಂದರ್ಭ ಜರುಗಿತು.

ಈ ಸಂದರ್ಭ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರು ಮಾತನಾಡಿ, ಇತಿಹಾಸ ಇರುವ ಗುರು ಪರಂಪರೆಯಲ್ಲಿ, ಮೂಲ ಗುರುಗಳು ದೇಶದಾದ್ಯಂತ ನಡೆದಾಡಿದ ಮತ್ತು ಪವಾಡಗಳ ಕುರಿತು ಮತ್ತು ಹಾಸನದ ಬಳಿಯ ಅರೆಮಾದನಹಳ್ಳಿಯಲ್ಲಿ ಸಮಾಧಿಸ್ತರಾದ 39 ಗುರುಗಳ ಪರಂಪರೆ ಇತಿಹಾಸ ತಿಳಿಸಿ, ಅದೇ ಪರಂಪರೆಯ ಶಾಖಾ ಮಠ ಇಲ್ಲಿ ಆಗಿರುವುದು ಮತ್ತು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ ನಿರ್ಮಾಣ ಆಗುವುದು ಇದೆಲ್ಲವೂ ಗುರು ಮತ್ತು ದೇವರ ಕೃಪೆ ಎಂದರು.
